newsics.com
ಆoಧ್ರಪ್ರದೇಶ: ದೇವಸ್ಥಾನವೊಂದರಲ್ಲಿ ನಡೆದ ಬ್ರಹ್ಮತ್ಸವದ ವೇಳೆ ಅರ್ಚಕರೊಬ್ಬರು ಡಿಜೆ ಹಾಡಿಗೆ ಬ್ರೇಕ್-ಡ್ಯಾನ್ಸ್ ಮಾಡಿ ವೈರಲ್ ಆಗಿದ್ದಾರೆ.
ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಮಂದಸಾ ಗ್ರಾಮದ ಶ್ರೀ ವಾಸುದೇವ ಪೆರುಮಾಳ್ ದೇವಸ್ಥಾನದಲ್ಲಿ ಫೆಬ್ರವರಿ 17 ರಿಂದ 23 ರವರೆಗೆ ನಡೆದ 16 ನೇ ವಾರ್ಷಿಕ ಬ್ರಹೋತ್ಸವದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪ್ರತಿ ವರ್ಷ ಈ ದೇವಾಲಯದಲ್ಲಿ ಬ್ರಹೋತ್ಸವ ನಡೆಯುತ್ತಿದ್ದು ಈ ವೇಳೆ ಸಾಮಾನ್ಯವಾಗಿ ಸಾಂಪ್ರದಾಯಿಕ ಸ್ತೋತ್ರಗಳು ಮತ್ತು ಭಕ್ತಿಗೀತೆಗಳೊಂದಿಗೆ ನಡೆಯುತ್ತಿತ್ತು ಎಂದು ಹೇಳಲಾಗಿದೆ ಆದರೆ ಈ ವರ್ಷ ಈ ವರ್ಷದ ರಥೋತ್ಸವದ ಮೆರವಣಿಗೆ ವೇಳೆ ಭಕ್ತಿಗೀತೆಗಳ ಜೊತೆಗೆ ಡಿಜೆ ಹಾಡುಗಳನ್ನು ಬಳಸಲಾಗಿದೆ ಅದರಂತೆ ಇಲ್ಲಿನ ಅರ್ಚಕರೊಬ್ಬರು ಡಿಜೆ ಹಾಡಿಗೆ ಬ್ರೇಕ್ ಡಾನ್ಸ್ ಮಾಡಿ ಅಲ್ಲಿದ್ದ ಜನರನ್ನೇ ಬೆರಗಾಗಿಸಿದ್ದು ಇದೀಗ ವೈರಲ್ ವಿಡಿಯೋ ಸಂಪ್ರದಾಯ ಮತ್ತು ಆಧುನಿಕತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
https://twitter.com/tupaki_official/status/1894332941721112988