Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Shivaratri prediction ಶಿವರಾತ್ರಿ ವೇಳೆ ಶಿವ ಯೋಗ, ಬುಧಾದಿತ್ಯ ಯೋಗ, ಈ ರಾಶಿಯವರಿಗೆ ಶಿವ ಕೃಪೆ
ಜ್ಯೋತಿಷ್ಯಪಂಚಾಂಗಪ್ರಮುಖ

Shivaratri prediction ಶಿವರಾತ್ರಿ ವೇಳೆ ಶಿವ ಯೋಗ, ಬುಧಾದಿತ್ಯ ಯೋಗ, ಈ ರಾಶಿಯವರಿಗೆ ಶಿವ ಕೃಪೆ

Share
4 Min Read
SHARE

newsics.com

ಮಹಾಶಿವರಾತ್ರಿಯಂದು ಶಿವ ಯೋಗ, ಬುಧಾದಿತ್ಯ ಯೋಗದ ಜತೆಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗಿವೆ. ಇದರಿಂದಾಗಿ ಕೆಲವು ರಾಶಿಗಳಿಗೆ ಶುಭವಾಗಲಿದೆ. ಯಾವ ರಾಶಿಯವರ ಮೇಲೆ ಗಣೇಶನ ಅನುಗ್ರಹದೊಂದಿಗೆ ಶಿವನ ಕೃಪೆಯೂ ಇರಲಿದೆ.

ಬುಧ ಗ್ರಹ ಮತ್ತು ಸೂರ್ಯನ ಸಂಯೋಗದಿಂದಾಗಿ ಬುಧಾದಿತ್ಯ ಯೋಗ ರೂಪುಗೊಂಡಿದೆ. ಜತೆಗೆ ಈ ದಿನ ಮಹಾಶಿವರಾತ್ರಿಯ ಶುಭ ಸಂಯೋಗ ಕೂಡ ಇರಲಿದೆ. ಚಂದ್ರನು ಮಕರ ರಾಶಿಯೊಂದಿಗೆ ಶ್ರವಣ ನಕ್ಷತ್ರದಲ್ಲಿ ಚಲಿಸಲಿದ್ದು, ಸುನಾಫ ಯೋಗದ ಜತೆಗೆ ಅನೇಕ ಶುಭ ಯೋಗಗಳು ರೂಪುಗೊಂಡಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಈ ರಾಶಿಯವರ ಕೆಲಸ ಮತ್ತು ವ್ಯಾಪಾರದಲ್ಲಿ ವೃದ್ಧಿಯೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಇದರಿಂದಾಗಿ ನಿಮ್ಮ ಕಷ್ಟಗಳೆಲ್ಲವೂ ದೂರವಾಗಿ, ನಿಮ್ಮ ಕೆಲಸಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.

ವೃಷಭ ರಾಶಿಗೆ ಸೇರಿದ ಜನರಿಗೆ ಕಠಿಣ ಪರಿಶ್ರಮಕ್ಕಿಂತ ಹೆಚ್ಚಾಗಿ ಅದೃಷ್ಟದ ಬೆಂಬಲ ದೊರಕುವುದರಿಂದ ಹೆಚ್ಚಿನ ಲಾಭ ಗಳಿಸುವಿರಿ. ನಿಮ್ಮ ಯಾವುದಾದರೂ ಮಹತ್ವಪೂರ್ಣವಾದ ಕೆಲಸ ಪೂರ್ಣಗೊಳ್ಳಲಿದೆ. ನಿಮ್ಮ ಮನಸ್ಸಿನಲ್ಲಿ ದಯೆ ಮತ್ತು ಭಕ್ತಿಯ ಭಾವನೆ ಹೆಚ್ಚಾಗಿರುವುದರಿಂದ ಸಾಮಾಜಿಕ ಮತ್ತು ಕುಟುಂಬ ಜೀವನದಲ್ಲಿ ಗೌರವ, ಖ್ಯಾತಿ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಆರ್ಥಿಕ ಯೋಜನೆಗಳಲ್ಲಿ ನಿಮಗೆ ಅದೃಷ್ಟದ ಬೆಂಬಲ ದೊರಕುವುದರಿಂದ ಯಶಸ್ಸು ಗಳಿಸುವಿರಿ. ಉನ್ನತ ಶಿಕ್ಷಣಕ್ಕಾಗಿ ಯಾವುದಾದರೂ ಸಂಸ್ಥೆಗೆ ಪ್ರವೇಶ ಕ್ಕಾಗಿ ಪ್ರಯತ್ನಪಡುತ್ತಿದ್ದರೆ, ನಿಮ್ಮ ಕಠಿಣ ಪರಿಶ್ರಮಕ್ಕೆ ಯಶಸ್ಸು ದೊರಕುವುದು. ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲ ಮತ್ತು ಗೌರವ ದೊರಕುವುದು. ಸಂಗಾತಿಯೊಂದಿಗೆ ಯಾವುದಾದರೂ ತೀರ್ಥಕ್ಷೇತ್ರ ಅಥವಾ ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸುವ ಸಂಭವವಿದೆ. ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯದಲ್ಲಿ ಸುಧಾರಣೆಯನ್ನು ನೋಡಬಹುದಾಗಿದೆ.

ನೀವು ಶಿವನಿಗೆ ಪಂಚಾಮೃತ ಅಭಿಷೇಕವನ್ನು ಮಾಡಬೇಕು.

ಸಿಂಹ ರಾಶಿ ಸೇರಿದ ಜನರಿಗೆ ಶಿವನ ಕೃಪೆಯಿಂದ ಪ್ರಗತಿಗಾಗಿ ಉತ್ತಮ ಮಾರ್ಗಗಳು ಗೋಚರಿಸುವವು. ಹಾಗಾಗಿ ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳಲಿವೆ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಪ್ರಯತ್ನಗಳಿಂದ ಯಶಸ್ಸು ದೊರಕಬಹುದು. ಕೆಲಸದ ಸ್ಥಳದಲ್ಲಿ ಯಾವುದಾದರೂ ಮಾತುಪೂರ್ಣ ಜವಾಬ್ದಾರಿಯನ್ನು ನೀವು ಉತ್ತಮವಾಗಿ ನಿಭಾಯಿಸುವಿರಿ. ನಿಮ್ಮ ಯಶಸ್ಸಿನಿಂದ ನಿಮ್ಮ ವಿರೋಧಿಗಳ ಸಂಖ್ಯೆ ಹೆಚ್ಚಾಗಬಹುದು. ನಿಮ್ಮ ಕೈಗಳಿಂದ ಪುಣ್ಯ ಕಾರ್ಯಗಳು ನಡೆಯುವ ಸಂಭವವಿದೆ. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಅನುಕೂಲಕರ ದಿನವಾಗಿರುವುದು. ಖರ್ಚಿನೊಂದಿಗೆ ನಿಮ್ಮ ಆದಾಯವು ಕೂಡ ಹೆಚ್ಚಾಗಲಿದೆ. ಮನೆಯ ಹಿರಿಯರ ಸಂಪೂರ್ಣ ಬೆಂಬಲ ಮತ್ತು ಲಾಭ ದೊರಕಲಿದೆ. ನಿಮ್ಮ ಹಾದಿಯಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುವುದರಿಂದ ನೆಮ್ಮದಿಯಿಂದ ಇರುವಿರಿ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಮತ್ತು ಸಾನ್ನಿಧ್ಯ ನಿಮಗೆ ದೊರಕುವುದು.

ನೀವು ಶಿವನ ಅಭಿಷೇಕವನ್ನು ಮಾಡಬೇಕು ಮತ್ತು ಶಿವಲಿಂಗಕ್ಕೆ ಹೆಸರುಕಾಳನ್ನು ಅರ್ಪಿಸಬೇಕು. ನೀವು ಶುಭ ಕಾರ್ಯಕ್ಕೆ ಹೋಗುತ್ತಿದ್ದರೆ, ಶಿವಲಿಂಗದ ಮೇಲೆ ಅರ್ಪಿಸಲಾದ ಬಿಲ್ವಪತ್ರೆ ಎಲೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಹಣೆಯ ಮೇಲೆ ಇರಿಸಿ.
ತುಲಾ ರಾಶಿಯ ಜನರಿಗೆ ಪ್ರೀತಿ ಮತ್ತು ಆನಂದಮಯವಾದ ದಿನವಾಗಿರುವುದು. ನಿಮ್ಮ ಮನೆ ಮತ್ತು ಸಮಾಜದಿಂದ ಗೌರವ ಖ್ಯಾತಿಯನ್ನು ಪಡೆಯುವಿರಿ. ಬಹಳ ದಿನಗಳಿಂದ ಅಪೂರ್ಣವಾಗಿರುವ ನಿಮ್ಮ ಆಸೆಗಳು ಈಡೇರಲಿವೆ. ನಿಮಗೆ ಹಲವು ಮಾರ್ಗಗಳಿಂದ ಆರ್ಥಿಕ ಲಾಭವಾಗುವ ಸಂಭವವಿದೆ. ನಿಮಗೆ ಬೇರೆಯವರ ಸಹಾಯ ದೊರಕುವುದರಿಂದ ಸಂತೋಷ ಮತ್ತು ಸಂತುಷ್ಟಿ ಲಭಿಸುವುದು. ಪ್ರೀತಿ ಮತ್ತು ವಿಶ್ವಾಸ ಹೆಚ್ಚಾಗಿರಲಿದೆ. ನಿಮಗೆ ಧಾರ್ಮಿಕ ಸ್ಥಳಕ್ಕೆ ಪ್ರಯಾಣಿಸುವ ಯೋಗವಿದೆ. ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಚಿಂತೆಗಳಿಗೆ ಪರಿಹಾರ ಪಡೆಯುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ಅನುಕೂಲಕರವಾದ ದಿನವಾಗಿರುವುದು. ಸ್ನೇಹಿತರು ಮತ್ತು ಸಹೋದ್ಯೋಗಿಗಳ ಬೆಂಬಲ ನಿಮಗೆ ದೊರಕಲಿದೆ. ವ್ಯಾಪಾರಸ್ಥರ ಆದಾಯ ಹೆಚ್ಚಾಗುವುದರಿಂದ ಮನಸ್ಸು ಸಂತಸದಿಂದಿರುವುದು.
ಬಿಲ್ವಪತ್ರೆ ಎಲೆಯ ಮೇಲೆ ‘ಓಂ ನಮಃ ಶಿವಾಯ’ ಎಂದು ಬರೆದು ಶಿವಲಿಂಗಕ್ಕೆ ಅರ್ಪಿಸಿ; 11 ಅಥವಾ 21 ಬಿಲ್ವಪತ್ರೆಯನ್ನು ಅರ್ಪಿಸುವುದು ಉತ್ತಮ. ಮನಸ್ಸಿನಲ್ಲಿ ‘ಓಂ ನಮಃ ಶಿವಾಯ’ ಮಂತ್ರವನ್ನು ಧ್ಯಾನಿಸಿ.

ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಶಿವನ ಕೃಪೆಯಿಂದ ಆನಂದಮಯವಾದ ದಿನವಾಗಿರುವುದು. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಕೆಲಸದಲ್ಲಿ ಶುಭ ಫಲಗಳನ್ನು ಪಡೆಯುವಿರಿ. ನಿಮ್ಮ ನಿರ್ಧಾರಗಳಿಂದ ನಿಮಗೆ ಹೆಚ್ಚಿನ ಲಾಭ ದೊರಕಲಿದೆ. ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ದೊರಕುವುದು. ಚಿಕಿತ್ಸೆ, ರಕ್ಷಣಾ ಕ್ಷೇತ್ರ, ಕ್ರೀಡೆ ಇತ್ಯಾದಿಗಳಿಗೆ ಸಂಬಂಧಿಸಿದ ಜನರಿಗೆ ಉತ್ತಮ ದಿನವಾಗಿರಲಿದೆ. ನಿಮಗೆ ಹೆಚ್ಚಿನ ಲಾಭ ದೊರಕುವ ಸಂಭವವಿದೆ. ನೀವು ನಿಮ್ಮ ಮನೆಯವರೊಂದಿಗೆ ಯಾವುದಾದರೂ ಸ್ಥಳಕ್ಕೆ ಪ್ರಯಾಣಿಸುವ ಉತ್ತಮ ಅವಕಾಶ ಪಡೆಯುವಿರಿ. ಶಿವನಿಗೆ ತುಪ್ಪದಿಂದ ಅಭಿಷೇಕ ಮಾಡಬೇಕು ಮತ್ತು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಶಿವನನ್ನು ನಿಮ್ಮ ಆಲೋಚನೆಗಳಲ್ಲಿ ಇರಿಸಿಕೊಳ್ಳಿ.
ನಾಳೆ ಕುಂಭ ರಾಶಿಗೆ ಸೇರಿದ ಜನರಿಗೆ ಲಾಭದಾಯಕ ಮತ್ತು ಶುಭ ದಿನವಾಗಿರುವುದು. ನಿಮ್ಮ ಆದಾಯದಲ್ಲಿ ಸಾಕಷ್ಟು ವೃದ್ಧಿ ಆಗುವುದರಿಂದ ನೀವು ಹೆಚ್ಚಿನ ಲಾಭ ಮತ್ತು ಪುಣ್ಯವನ್ನು ಗಳಿಸುವಿರಿ. ನೀವು ಯಾವುದಾದರೂ ಹೊಸ ಯೋಜನೆಗಳಿಗಾಗಿ ಕೆಲಸವನ್ನು ಶುರು ಮಾಡಬಹುದಾಗಿದೆ. ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಮತ್ತು ಸಂತೋಷಮಯವಾದ ದಿನವಾಗಿರಲಿದೆ. ನಿಮ್ಮ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುವವು. ಕಾರ್ಯ ಕೌಶಲ್ಯವು ಹೆಚ್ಚಾಗುವುದರಿಂದ ಲಾಭ ಗಳಿಸಲು ಉತ್ತಮ ಅವಕಾಶ ಲಭಿಸುವುದು. ಹೊಸ ವಾಹನ ಅಥವಾ ಸಂಪತ್ತನ್ನು ಖರೀದಿಸುವ ಯೋಗವಿದೆ. ವಿದೇಶಿ ಪ್ರಯಾಣಕ್ಕಾಗಿ ಪ್ರಯತ್ನವನ್ನು ಮಾಡುತ್ತಿರುವವರಿಗೆ ಸಕಾರಾತ್ಮಕ ಸುದ್ದಿ ಲಭಿಸುವುದು. ನಿಮಗೆ ವರಿಷ್ಠ ವ್ಯಕ್ತಿಗಳ ಸಂಪೂರ್ಣ ಬೆಂಬಲ ದೊರಕುವುದರೊಂದಿಗೆ ಹೆಚ್ಚಿನ ಲಾಭ ಗಳಿಸುವಿರಿ. ನೀವು ಶಿವನಿಗೆ ಜೇನುತುಪ್ಪದಿಂದ ಅಭಿಷೇಕ ಮಾಡಬೇಕು. ಶಿವ ಪಂಚಾಕ್ಷರಿ ಮಂತ್ರವನ್ನು ಕನಿಷ್ಠ 11 ಬಾರಿ ಪಠಿಸಿ.

TAGGED:Budhaditya Yoga during ShivaratriShiva YogaShiva's grace for these zodiac signs
Share This Article
Facebook Twitter Copy Link Print
Previous Article Smartphone Battery Life: ನಿಮ್ಮ ಫೋನ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡುತ್ತಿದ್ದೀರಾ? ಬ್ಯಾಟರಿ ಹಾಳಾಗುತ್ತದೆ!
Next Article Relationship Tips ದೈಹಿಕ ಸಂಪರ್ಕಕ್ಕೂ ಮೊದಲು ಇವುಗಳನ್ನು ತಿನ್ನದಿರಿ…

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?