newsics.com
ಉತ್ತರಪ್ರದೇಶ: ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಪವಿತ್ರ ಕುಂಭಮೇಳಕ್ಕೆ ಪತ್ನಿಯನ್ನ ಕರೆದೊಯ್ದಿದ್ದ ಪಾಪಿ ಪತಿಯೊಬ್ಬ ಆಕೆಯ ಕತ್ತನ್ನ ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ದೆಹಲಿಯ ತ್ರಿಲೋಕ್ ಪುರಿ ನಿವಾಸಿ ಅಶೋಕ್ ಕುಮಾರ್ ಎಂಬಾತನೇ ತನ್ನ ಪತ್ನಿ ಮೀನಾಕ್ಷಿಯನ್ನು ಕೊಲೆ ಮಾಡಿದ್ದಾನೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಮೀನಾಕ್ಷಿಯನ್ನ ಕುಂಭಮೇಳಕ್ಕೆ ಕರೆದುಕೊಂಡು ಬಂದಿದ್ದ ಅಶೋಕ್ ಕುಮಾರ್, ಪ್ರಯಾಗ್ ರಾಜ್‌ನಲ್ಲಿ ಸುತ್ತಾಡಿ ನಾವು ಜಾಲಿಯಾಗಿದ್ದೇವೆಂದು ಬಿಂಬಿಸಿಕೊಂಡಿದ್ದ. ಮನೆಯಲ್ಲಿದ್ದ ಮಕ್ಕಳಿಗೆ ಫೋಟೋ ಮತ್ತು ವಿಡಿಯೋಗಳನ್ನ ಕಳುಹಿಸುತ್ತಿದ್ದ. ʼಡಿʼ ದರ್ಜೆ ನೌಕರನಾಗಿದ್ದ ಅಶೋಕ್‌ಗೆ ಅಕ್ರಮ ಸಂಬಂಧವಿತ್ತು. ಇದರ ಬಗ್ಗೆ ಆತನ ಪತ್ನಿ ಪದೇ ಪದೇ ಪ್ರಶ್ನಿಸುತ್ತಿದ್ದಳು. ತನ್ನ ದಾರಿಗೆ ಅಡ್ಡವಾಗಿದ್ದಾಳೆಂದು ಆಕೆಯನ್ನು ಕೊಲೆ ಮಾಡಲು ಮೂರು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.
ಕುಂಭಮೇಳಕ್ಕೆ ಪತ್ನಿಯನ್ನ ಕರೆದೊಯ್ದಿದ್ದ ಆತ, ಜುಲ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದ ಹೋಟೆಲ್‌ವೊಂದರಲ್ಲಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ. ಕೂಡಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಪರಾರಿಯಾಗಿದ್ದ ಆರೋಪಿ ಅಶೋಕ್ ಕುಮಾರ್‌ನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.