newsics.com
ಕೋಝಿಕ್ಕೋಡ್: ಕೇರಳ ರಾಜ್ಯದಲ್ಲಿ ಮನುಷ್ಯರ ಮೇಲೆ ಆನೆಗಳ ದಾಳಿ ಮುಂದುವರೆದಿದ್ದು, ಕೋಝಿಕ್ಕೋಡ್‌ನ ಕೊಯಿಲಾಂಡಿಯಲ್ಲಿ ದೇವಾಲಯದ ಉತ್ಸವಕ್ಕಾಗಿ ತಂದಿದ್ದ ಆನೆಗಳು ಪಾಲ್ಗೊಂಡ ಎರಡು ಆನೆಗಳು ಹುಚ್ಚೆದ್ದು ಓಡಿದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಹಾಗೂ 36 ಮಂದಿ ಗಾಯಗೊಂಡಿದ್ದಾರೆ.
ಅಮ್ಮುಕುಟ್ಟಿ (70), ಲೀಲಾ (65) ಹಾಗೂ ರಾಜನ್ (70) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಈ ಘಟನೆ ಕೊಯಿಲಾಂಡಿಯ ಕುರುವಂಗಾಡ್ನಲ್ಲಿರುವ ಮಾನಕ್ಕುಲಾಂಗರಾ ಭಗವತಿ ದೇವಾಲಯದಲ್ಲಿ ಸಂಭವಿಸಿದೆ. ಧಾರ್ಮಿಕ ಮೆರವಣಿಗೆಯ ಸಂದರ್ಭ ಸಿಡಿಸಿದ ಪಟಾಕಿ ಸದ್ದು ಕೇಳಿ ಆನೆಗಳು ಹುಚ್ಚೆದ್ದು ಓಡಿದವು ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ಪೊಲೀಸರು, ಗಾಯಗೊಂಡವರನ್ನು ಕೋಝಿಕ್ಕೋಡ್ ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರಲ್ಲಿ 10 ವರ್ಷದ ಬಾಲಕಿ ಸೇರಿದಂತೆ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
https://www.instagram.com/reel/DGBBkS_ChW6/?igsh=MTR1Z2h1bHk5Z2U2Ng==