Newsics.com
ಹೂವಿನ ಹೆಸರು ಮತ್ತು ಹಣ್ಣಿನ ಹೆಸರಿನಲ್ಲಿರುವ ಈ ಮೂನ್ ತುಂಬಾ ವಿಶೇಷ .ಹೌದು,ಜೂನ್ 21ಕ್ಕೆ ಆಗಸದಲ್ಲಿ ಪೂರ್ಣ ಚಂದಿರ ಕಾಣಿಸುತ್ತವೆ, ಬಣ್ಣದಲ್ಲೂ ಎಲ್ಲರನ್ನೂ ಆಕರ್ಷಿಸುತ್ತವೆ. ಮುಖ್ಯವಾಗಿ ರೋಸ್ ಮೂನ್ ಅಥವಾ ಸ್ಟ್ರಾಬೆರಿ ಕಂಗೊಳಿಸಲಿದೆ.
ಇನ್ನು ಈ ಚಂದ್ರನಿಗೆ ಹಣ್ಣಿನ ಹೆಸರು ಬರಲು ಕಾರಣ ಏನೆಂದರೆ ಉತ್ತರ ಅಮೆರಿಕದಲ್ಲಿ ಸ್ಟ್ರಾಬೆರಿ ಮೂನ್ ಗೋಚರಿಸುತ್ತದೆ. ಬಳಿಕ ಸ್ಟ್ರಾಬೆರಿ ಹಣ್ಣಿನ ಬೆಳೆ ಬೆಳೆಯಲು ಆರಂಭಿಸುತ್ತಾರೆ ಎಂದು ಹೇಳಲಾಗಿದೆ.
ಅಲ್ಲದೇ ಜೂನ್ ಅಂತಿಮ ವಾರದಲ್ಲಿ ಮಳೆ ಹೆಚ್ಚಾಗಲಿದ್ದು, ಕೃಷಿ ಚಟುವಟಿಕೆಗಳು ಹೆಚ್ಚಾಗಿರುತ್ತವೆ. ಬಿತ್ತನೆ ಮಾಡುವುದು ಮುಂತಾದ ಬೆಳೆ ಬೆಳೆಯುವುದು. ಇದೇ ವೇಳೆ ಗುಲಾಬಿ ಹೂವುಗಳು ಹೆಚ್ಚಾಗಿ ಹೂವು ಬಿಡುತ್ತದೆ. ಹೀಗಾಗಿ ರೋಸ್ ಮೂನ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ.
ವಿಷೇಶ ಅಂದ್ರೆ ಉತ್ತರ ಅಮೆರಿಕ ಹಾಗೂ ಯೂರೋಪ್ ದೇಶಗಳಲ್ಲಿ ಸ್ಟ್ರಾಬೆರಿ ಮೂನ್ ಬಳಿಕ ಮದುವೆಗಳು ಹೆಚ್ಚಾಗಿ ನಡೆಯುತ್ತದೆ. ಮದುವೆ ಬಳಿಕ ನವ ಜೋಡಿ ಹನಿ ಮೂನ್‌ಗೆ ತೆರಳುತ್ತಾರೆ. ಈ ಚಂದ್ರನನ್ನು ನೋಡಿದಾಗ ನವಜೋಡಿಗಳಿಗೆ ರೊಮ್ಯಾಂಟಿಕ್ ಫೀಲ್ ಬರುತ್ತೆ. ಅದಕ್ಕಾಗಿ ಇಲ್ಲಿ ಈ ಚಂದ್ರನನ್ನು ಹನಿಮೂನ್ಎಂದು ಕೂಡ ಕರೆಯಲಾಗುತ್ತದೆ.
ಒಟ್ಟಿನಲ್ಲಿ ಅಮೆರಿಕ ಖಗೋಳ ವಿಜ್ಞಾನಿ ಜ್ಯಾಕಿ ಪ್ರಕಾರ, ಆಯಾ ಭಾಗದಲ್ಲಿ ಅಲ್ಲಿನ ಸಂಸ್ಕೃತಿ, ಸಂಪ್ರದಾಯ, ಹಬ್ಬಗಳಿಗೆ ಅನುಗುಣವಾಗಿ ಸ್ಟ್ರಾಬೆರಿ ಮೂನ್‌ಗೆ ಹಲವು ಹೆಸರುಗಳಾದ ಸ್ಟ್ರಾಬೆರಿ ಮೂನ್, ಹಾಟ್ ಮೂನ್ , ಹನಿಮೂನ್, ರೋಸ್ ಮೂನ್ ಎಂದೂ ಕರೆಯುತ್ತಾರೆ