newsics.com
ಬೆಂಗಳೂರು: ಬೇಸಿಗೆಗೂ ಮುನ್ನವೇ ರಣಬಿಸಿಲು ರಾಜ್ಯದ ಜನರನ್ನು ಸುಡುತ್ತಿದೆ. ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಹಲವು ಜಿಲ್ಲೆಗಳಲ್ಲಿ ತಾಪಮಾನ 30 ಡಿಗ್ರಿ ಸೆ.ಮೀರಿದೆ.
ಚಳಿಯಿಂದ ನಡುಗುತ್ತಿದ್ದ ಜನರು ಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದಾರೆ.
ಫೆಬ್ರವರಿ ತಿಂಗಳಿನಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈ ಬಾರಿ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ತಾಪಮಾನ ದಾಖಲಾಗುವುದರಲ್ಲಿ ಅಚ್ಚರಿ ಇಲ್ಲ.
ಕಲಬುರಗಿ 36.8, ಬಾಗಲಕೋಟೆ 34.8, ರಾಯಚೂರು 34.0. ವಿಜಯಪುರ 33.5, ಬೀದರ್ 33.4 ಸೆ.ಉಷ್ಣಾಂಶ ದಾಖಲಾಗಿದೆ.
ಫೆಬ್ರವರಿ ತಿಂಗಳಲ್ಲಿ 25 ರಿಂದ 26 ಡಿಗ್ರೀ ಸೆ. ಉಷ್ಣಾಂಶ ದಾಖಲಾಗುತ್ತುತ್ತು. ಆದ್ರೆ ಈ ಬಾರಿ ಹಲವು ಜಿಲ್ಲೆಗಳಲ್ಲಿ 30 ಡಿ.ಸೆ ಗೂ ಮೀರಿ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಉತ್ತರ ಕರ್ನಾಟದಲ್ಲಿ ಈಗಾಗಲೇ 32-34 ಡಿಗ್ರಿ ತಾಪಮಾನ ದಾಖಲಾಗಿದೆ.