newsics.com
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ, ಮೊನಾಲಿಸಾ ಎಂಬ ಹುಡುಗಿ ರುದ್ರಾಕ್ಷಿಗಳನ್ನು ಮಾರಾಟ ಮಾಡಲು ಬಂದಿದ್ದರು. ಆದಾಗ್ಯೂ, ಕೆಲವು ಯೂಟ್ಯೂಬರ್‌ಗಳು ಆಕೆಯ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆದುಕೊಂಡು ಅವುಗಳನ್ನು ವೈರಲ್ ಮಾಡಿದರು. ಕೆಲವೇ ಗಂಟೆಗಳಲ್ಲಿ, ಮೋನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದರು.
ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಮೊನಾಲಿಸಾ ಅವರನ್ನು ಸಿನಿಮಾ ಆಫರ್ ಹುಡುಕಿಕೊಂಡು ಮನೆಯ ಬಳಿ ಬಂದಿತ್ತು, ಇದೇ ರೀತಿ, ಬಾಲಿವುಡ್ ನಿರ್ದೇಶಕ ಸನೋಜ್ ಮಶ್ರಾ ತಮ್ಮ ಮುಂದಿನ ಚಿತ್ರದಲ್ಲಿ ಮೊನಾಲಿಸಾಗೆ ಚಲನಚಿತ್ರಗಳಲ್ಲಿ ನಟಿಸಲು ಅವಕಾಶ ನೀಡಿದರು.
ಸದ್ಯ ಮೊನಾಲಿಸಾ ಸನೋಜ್ ಮಿಶ್ರಾ ನಿರ್ದೇಶನದ ‘ದಿ ಡೈರಿ ಆಫ್ ಮಣಿಪುರ’ ಚಿತ್ರದಲ್ಲಿ ನಟಿಸಲಿದ್ದಾರೆ. ಇದರಲ್ಲಿ ಅವರು ನಿವೃತ್ತ ಸೇನಾ ಅಧಿಕಾರಿಯ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಬಾಲಿವುಡ್ ಸ್ಟಾರ್ ಹೀರೋ ರಾಜ್‌ಕುಮಾರ್ ರಾವ್ ಅವರ ಸಹೋದರ ಅಮಿತ್ ರಾವ್ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ವದಂತಿಗಳಿವೆ. ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಏಪ್ರಿಲ್ ನಿಂದ ಮೊನಾಲಿಸಾ ಚಿತ್ರೀಕರಣಕ್ಕೆ ಸೇರಲಿದ್ದಾರೆ ಎನ್ನಲಾಗಿದೆ. ಅಕ್ಟೋಬರ್‌ನಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಚಿತ್ರದ ಚಿತ್ರೀಕರಣ ಆರಂಭವಾಗಲು ಇನ್ನೂ ಒಂದು ತಿಂಗಳು ಬಾಕಿ ಇದ್ದು, ಅಲ್ಲಿಯವರೆಗೆ ಮೊನಾಲಿಸಾಗೆ ನಟನಾ ತರಬೇತಿ ನೀಡಲಾಗುವುದು ನೀಡಲಾಗುತ್ತದೆ. ಇನ್ನೂ ಈ ಚಿತ್ರಕ್ಕೆ ನಿರ್ದೇಶಕರು ಮೊನಾಲಿಸಾ ಅವರಿಗೆ 21 ಲಕ್ಷ ರೂ. ಸಂಭಾವನೆ ಆಫರ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.