newsics.com
ಬೆಂಗಳೂರು : ಬಿಎಸ್ಎನ್ಎಲ್ ಸಂಸ್ಥೆಯೂ ಕಡಿಮೆ ಮೊತ್ತದ ವಾರ್ಷಿಕ ಪ್ಲಾನ್ ಘೋಷಿಸಿ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಠಕ್ಕರ್ ಕೊಟ್ಟಿದೆ. ಈ ಮೂಲಕ ಗ್ರಾಹಕರಿಗೆ ಗುಡ್ನ್ಯೂಸ್ ನೀಡಿದೆ.
1198 ರೂ.ಗಳ ರಿಚಾರ್ಜ್ ಪ್ಲಾನ್. ಬಿಎಸ್ಎನ್ಎಲ್ನ ಈ ಪ್ರಿಪೇಯ್ಡ್ ಯೋಜನೆ ವಾರ್ಷಿಕದ್ದು. ಈ ಪ್ಲಾನ್ ರೀಚಾರ್ಜ್ ಮಾಡಿದ್ರೆ ಪ್ರತಿ ತಿಂಗಳು 30 SMS ಕಳುಹಿಸುವ ಸೌಲಭ್ಯ ಇದೆ. ಜತೆಗೆ ಸುಮಾರು 300 ನಿಮಿಷಗಳು ಫ್ರೀ ಕಾಲ್ ಕೂಡ ಇದೆ. ಈ ಯೋಜನೆ ಉಚಿತ ರಾಷ್ಟ್ರೀಯ ರೋಮಿಂಗ್ನೊಂದಿಗೆ ಬರುತ್ತದೆ.
ಬಿಎಸ್ಎನ್ಎಲ್ನ ಈ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರು ಡೇಟಾ ಸೌಲಭ್ಯ ಪಡೆಯುತ್ತಾರೆ. ಇದು ಸೀಮಿತ ಡೇಟಾ ಪ್ಲಾನ್ ಆಗಿದೆ. ನಿಮಗೆ ಒಂದು ತಿಂಗಳಿಗೆ ಕೇವಲ 3GB ಡೇಟಾ ಮಾತ್ರ ನೀಡಲಾಗುತ್ತದೆ. ಈ ರೀತಿಯಾಗಿ ನೀವು 12 ತಿಂಗಳಲ್ಲಿ ಕೇವಲ 36GB ಡೇಟಾ ಮಾತ್ರ ಬಳಸಬಹುದು.