newsics.com
ಮಂಡ್ಯ: 8 ತಿಂಗಳ ಟಗರು ಬರೋಬ್ಬರಿ 1.48 ಲಕ್ಷ ರೂ.ಗೆ ಮಾರಾಟವಾದ ಘಟನೆ ಮಂಡ್ಯದ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.
ಉಲ್ಲಾಸ್ ಗೌಡ ಎಂಬುವವರ ಮನೆಯಲ್ಲಿ ಈ ಟಗರು ಜನಸಿದೆ. ಕೆಲ ದಿನಗಳ ಬಳಿಕ ಟಿ.ನರಸೀಪುರದ ಮೂಲದವರಿಗೆ ಉಲ್ಲಾಸ್ 20 ಸಾವಿರಕ್ಕೆ ಟಗರು ಮಾರಾಟ ಮಾಡಿದ್ದರು. ಮತ್ತೆ ವಾಪಸ್ಸು 50 ಸಾವಿರಕ್ಕೆ ಅದೇ ಟಗರನ್ನು ಉಲ್ಲಾಸ್ ಹಾಗೂ ಅವರ ತಂದೆ ಮನೋಹರ್ ಖರೀದಿಸಿದ್ದರು.
ಇದೀಗ ಶಿವಮೊಗ್ಗ ಮೂಲದ ಉದ್ಯಮಿ ಜವಾದ್ ಎಂಬುವರಿಗೆ ಉಲ್ಲಾಸ್ ಅದೇ ಟಗರನ್ನು 1.48 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಉಲ್ಲಾಸ್ ತಂದೆ ಮನೋಹರ್ ಅವರಿಗೆ ಜವಾದ್ ಸನ್ಮಾನಿಸಿ, 1.48 ಲಕ್ಷ ಹಣ ನೀಡಿ ಟಗರು ಕೊಂಡೊಯ್ದರು.