newsics.com
ನವದೆಹಲಿ: ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡನೆ ಮಾಡಿದ್ದಾರೆ.
ಅದರಲ್ಲೂ ಈ ಬಾರಿಯ ಬಜೆಟ್‌ನಲ್ಲಿ ಬಡತನ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ. ಮಧ್ಯಮವರ್ಗ ಮತ್ತು ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. 2047ಕ್ಕೆ ಬಡತನ ಮುಕ್ತ ಭಾರತ ನಿರ್ಮಿಸುವ ಸಂಕಲ್ಪ ಹೊಂದಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇನ್ನು ನಿರ್ಮಲಾ ಅವರು ಮಂಡಿಸಿರುವ ಬಜೆಟ್‌ನಲ್ಲಿ ಯಾವುದು ಇಳಿಕೆ, ಯಾವುದು ಏರಿಕೆ? ಎಂಬುದರ ಬಗ್ಗೆ ಇಲ್ಲಿದೆ.
ಯಾವುದು ಇಳಿಕೆ
- ಎಲ್ಇಡಿ ಟಿವಿಗಳ ಮೇಲಿನ ಸುಂಕ ಇಳಿತ
- ಕ್ಯಾನ್ಸರ್ ಔಷಧಗಳ ಮೆಲಿನ ಟ್ಯಾಕ್ಸ್ ಇಳಿಕೆ
- ಮೊಬೈಲ್ ಮೇಲಿನ ತೆರಿಗೆ ಇಳಿಕೆ
- ಸ್ವದೇಶಿ ಬಟ್ಟೆಗಳ ಮೇಲಿನ ಟ್ಯಾಕ್ಸ್ ಇಳಿಕೆ
- ಚರ್ಮದ ಉತ್ಪನ್ನಗಳ ಮೇಲಿನ ತೆರಿಗೆ ಇಳಿಕೆ
- ಎಲೆಕ್ಟ್ರಿಕ್ ವಾಹನಗಳ ಮೇಲಿನ ಟ್ಯಾಕ್ಸ್ ಇಳಿಕೆ
- ಹೆಪ್ಪುಗಟ್ಟಿದ ಮೀನಿನ ವಹಿವಾಟಿನ ಮೇಲಿನ ಟ್ಯಾಕ್ಸ್ ಇಳಿಕೆ
- ಮೀನಿನ ಪ್ಲೇಟಿನ ಮೇಲಿನ ತೆರಿಗೆ ಇಳಿಕೆ
- 36 ಜೀವ ಉಳಿಸುವ ಔಷಧಗಳ ಮೇಲಿನ ಟ್ಯಾಕ್ಸ್ ಇಳಿಕೆ
- ನಿರ್ಣಾಯಕ 12 ಖನಿಜಗಳ ಮೇಲಿನ ಟ್ಯಾಕ್ಸ್ ಇಳಿಕೆ
- ಓಪನ್ ಸೆಲ್ ಮೇಲಿನ ತೆರಿಗೆ ಇಳಿಕೆ
- ತೇವಭರಿತ ನೀಲಿ ಚರ್ಮದ ಮೇಲಿನ ಕಸ್ಟಮ್ಸ್ ಸಂಪೂರ್ಣ ಇಳಿಕೆ
- ಎತರ್ನೆಟ್ ಸ್ವಿಚ್ ಮೇಲಿನ ತೆರಿಗೆ ಇಳಿಕೆ
- ದೋಣಿ, ಹಡಗು ತಯಾರಿಸಲು ಬಳಸುವ ಸಾಮಗ್ರಿಗಳ ಮೇಲಿನ ಕಸ್ಟಮ್ಸ್ ಮುಂದಿನ 10ವರ್ಷದ ವರೆಗೆ ವಿನಾಯತಿ
- ಝಿಂಕ್, ಲಿಥಿಯಮ್ ಬ್ಯಾಟರಿಯ ಸ್ಕ್ರ್ಯಾಪ್ ಮೇಲಿನ ಸುಂಕ ಇಳಿಕೆ
- ಮೊಬೈಲ್ ಫೋನ್ ತಯಾರಿಕೆಗೆ ಬಳಸುವ 28 ಸರಕುಗಳ ಮೇಲಿನ ಸುಂಕ ಇಳಿಕೆ
- ಇವಿ ಬ್ಯಾಟರಿಗಳ ಮೇಲಿನ ತೆರಿಗೆ ಇಳಿಕೆ
ಯಾವುದು ದುಬಾರಿ
- ಫ್ಲ್ಯಾಟ್ ಪ್ಯಾನೆಲ್ ಡಿಸ್ ಪ್ಲೇ ಮೇಲೆ ತೆರಿಗೆ ಹೆಚ್ಚಳ
- ಹೆಣೆದ ಬಟ್ಟೆಗಳ ಮೇಲೆ ತೆರಿಗೆ ಹೆಚ್ಚಳ
- ಅಲ್ಕೋಹಾಲ್ ಮೇಲಿನ ಸುಂಕ ಏರಿಕೆ
- ತಂಬಾಕು ಪದಾರ್ಥಗಳ ಮೇಲಿನ ತೆರಿಗೆ ಹೆಚ್ಚಳ
- ಟೆಲಿಕಾಂ ಉಪಕರಣಗಳ ಮೇಲಿನ ಟ್ಯಾಕ್ಸ್ ಹೆಚ್ಚಳ
- ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕ ಹೆಚ್ಚಳ
- ವಿಮಾನ ಇಂಧನದ ಮೇಲಿನ ಟ್ಯಾಕ್ಸ್ ಹೆಚ್ಚಳ