newsics.com
ನವದೆಹಲಿ: ಇನ್ಮುಂದೆ 12 ಲಕ್ಷದವರೆಗೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.
ಕೇಂದ್ರ ಬಜೆಟ್ನಲ್ಲಿ ಮಧ್ಯಮ ವರ್ಗಕ್ಕೆ ವೈಯಕ್ತಿಕ ಆದಾಯ ತೆರಿಗೆ ಮಿತಿಯಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ.
ವೈಯಕ್ತಿಕ ಆದಾಯ ತೆರಿಗೆದಾರರು 12 ಲಕ್ಷ ಆದಾಯ ಹೊಂದಿದ್ದರೆ ಇನ್ಮುಂದೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ 12 ಲಕ್ಷದವರೆಗೂ ಆದಾಯ ಹೊಂದಿರುವರಿಗೆ ವಾರ್ಷಿಕವಾಗಿ 80 ಸಾವಿರ ರೂಪಾಯಿ ಉಳಿತಾಯವಾಗಲಿದೆ.
ಹೊಸ ತೆರಿಗೆ ಪದ್ಧತಿ ಅನ್ವಯ ತೆರಿಗೆ ಪಾವತಿ ಮಾಡಲು ಇಚ್ಚಿಸುವವರು 12 ಲಕ್ಷದ ಆದಾಯ ತೆರಿಗೆ ರಿಯಾಯಿತಿ ಜೊತೆಗೆ 75 ಸಾವಿರ ರೂ. ಸ್ಟ್ಯಾಡಂರ್ಡ್ ಡಿಡಕ್ಷನ್ ಸಿಗಲಿದೆ. ಇದರಿಂದ 12.75 ಸಾವಿರ ರೂ.ವರೆಗೆ ಝೀರೋ ತೆರಿಗೆ ಇರಲಿದೆ.
ಹೊಸ ತೆರಿಗೆ ಸ್ಲ್ಯಾಬ್ ಹೀಗಿದೆ:
4,00,000 ಲಕ್ಷದವರೆಗೆ ಯಾವುದೇ ತೆರಿಗೆ ಇಲ್ಲ
4,00,000ರೂ. ದಿಂದ 8,00,000 ರೂ -ಶೇ 5
8,00,0001 ರೂ – 12,00,000ರೂ. – ಶೇ10
12,00,001 ದಿಂದ 16 ಲಕ್ಷದವರೆಗೆ – ಶೇ 15
16,00,001 ದಿಂದ 20 ಲಕ್ಷ ರೂ – ಶೇ 20
20,00,001 ದಿಂದ 24ಲಕ್ಷದವರೆಗೆ ಶೇ 25%
24 ಲಕ್ಷದ ಮೇಲ್ಪಟ್ಟು – ಶೇ. 30ರಷ್ಟು
ಮಧ್ಯಮ ವರ್ಗವು ಭಾರತದ ಬೆಳವಣಿಗೆಗೆ ಬಲ ತುಂಬಲಿದೆ. ಜೊತೆಗೆ ರಾಷ್ಟ್ರ ನಿರ್ಮಾಣದಲ್ಲಿ ಮಧ್ಯಮ ವರ್ಗದ ಶಕ್ತಿ ಮತ್ತು ಸಾಮರ್ಥ್ಯ ಅತ್ಯಗತ್ಯ ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಂಬಿದೆ. ಆದ್ದರಿಂದ ಅವರ ಕೊಡುಗೆ ಗುರುತಿಸಿ, ಮಧ್ಯಮ ವರ್ಗದವರಿಗೆ ತೆರಿಗೆ ಹೊರೆಯನ್ನು ಕ್ರಮೇಣವಾಗಿ ಕಡಿಮೆ ಮಾಡಿದ್ದೇವೆ. 2014 ರ ನಂತರ, ‘ಝೀರೋ’ ಸ್ಲ್ಯಾಬ್ ಅನ್ನು 2.5 ಲಕ್ಷ ರೂಗೆ ಹೆಚ್ಚಿಸಿದ್ದೆವು. ಬಳಿಕ 2019 ರಲ್ಲಿ ಇದನ್ನು 5 ಲಕ್ಷಕ್ಕೆ ಮತ್ತು 2023 ರಲ್ಲಿ ಈ ಮಿತಿಯನ್ನು 5 ರಿಂದ 7 ಲಕ್ಷಕ್ಕೆ ಏರಿಸಿದ್ದೆವು. ಈಗ ಹೊಸ ತೆರಿಗೆ ಪದ್ಧತಿ ಅಡಿ 12 ಲಕ್ಷರೂ ಆದಾಯಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.