newsics.com
ಕಾರವಾರ: ಭಟ್ಕಳದಲ್ಲಿ ಭಾರಿ ಪ್ರಮಾಣದ ಗೋಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೂವರನ್ನು ಬಂಧಿಸಿದ್ದಾರೆ.
ಹೊನ್ನಾವರ ತಾಲೂಕಿನ ಸಾಲ್ಕೋಡಿನಲ್ಲಿ ವಾರಗಳ ಹಿಂದೆ ಗರ್ಭಿಣಿ ಹಸುವನ್ನು ಕದ್ದು, ಕೊಂದು, ಅದರ ಹೊಟ್ಟೆಯಲ್ಲಿದ್ದ ಕರುವನ್ನು ದುರುಳರು ಎಸೆದು ಹೋಗಿದ್ದರು. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೊಂದೆಡೆ, ಗೋ ಹತ್ಯೆ ಮಾಡುವವರ ಮೇಲೆ ಬಲೆ ಬೀಸಿದ್ದಾರೆ.
ಭಟ್ಕಳದಲ್ಲಿ ಮನೆಗಳಿಗೆ ನುಗ್ಗಿ ಗೋ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು 5ಲಕ್ಷ ರೂ. ಮೌಲ್ಯದ 100 ಕೆಜಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ನಿಜಾಮುದ್ದೀನ್ ಮೊಹಮದ್ ಇಸಾಕ್ ಮುಕ್ತೇಸರ, ಮೊಹಮದ್ ತನ್ವೀರ್ ಇಲಿಯಾಸ್ ಹಾಗೂ ಖಾಜಾ ಅಬುಲಾಸನ್ ಮೊಹಮದ್ ಟೋನ್ಸೆ ಎಂಬುವವರನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದ್ದಾರೆ.