Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Health tips ತಲೆಯಲ್ಲಿ ವಿಪರೀತ ತುರಿಕೆಯಾಗುತ್ತಿದೆಯೇ?: ಈ ಮನೆಮದ್ದು ಟ್ರೈ ಮಾಡಿ
ಆರೋಗ್ಯಪ್ರಮುಖಲೈಫ್‌ಸ್ಟೈಲ್ಸೌಂದರ್ಯ

Health tips ತಲೆಯಲ್ಲಿ ವಿಪರೀತ ತುರಿಕೆಯಾಗುತ್ತಿದೆಯೇ?: ಈ ಮನೆಮದ್ದು ಟ್ರೈ ಮಾಡಿ

Share
2 Min Read
SHARE

newsics.com

ಚಳಿಗಾಲ ಶುರುವಾಗುತ್ತಿದ್ದಂತೆ ಕೈಕಾಲುಗಳ ಚರ್ಮ ಒಣಗಿಂತಾಗುತ್ತದೆ. ತಲೆಯಲ್ಲಿ ತುರಿಕೆ ಸಮಸ್ಯೆ ಹೆಚ್ಚುತ್ತದೆ. ಇದಕ್ಕೆ ಕಾರಣವೆಂದರೆ ತಲೆಯಲ್ಲಿ ಧೂಳಿನ ಶೇಖರಣೆ, ಒತ್ತಡ, ಪರೋಪಜೀವಿಗಳು, ತಲೆಹೊಟ್ಟು ಅಥವಾ ಶಿಲೀಂಧ್ರಗಳ ಸೋಂಕು. ಸೆಬೊರ್ಹೆಕ್ ಡರ್ಮಟೈಟಿಸ್ ಕೂಡ ತಲೆಯಲ್ಲಿ ತುರಿಕೆಗೆ ಪ್ರಮುಖ ಕಾರಣವಾಗಿದೆ.

ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರು ಔಷಧಿ ಅಥವಾ ಮಾತ್ರೆಗಳ ಬದಲು 3 ಮನೆಮದ್ದುಗಳನ್ನು ಪ್ರಯತ್ನಿಸಿ. ಇದು ತಲೆ ತುರಿಕೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಈರುಳ್ಳಿ ರಸ – ಈರುಳ್ಳಿ ರಸವು ತಲೆಯ ತುರಿಕೆಯಿಂದ ನಮ್ಮನ್ನು ರಕ್ಷಿಸುತ್ತದೆ. ಈರುಳ್ಳಿ ರಸದಲ್ಲಿ ಪ್ರೋಟೀನ್‌ ಹೇರಳವಾಗಿ ಕಂಡುಬರುತ್ತವೆ. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸಹ ಇವೆ. ಇದು ನೆತ್ತಿಯನ್ನು ಸ್ವಚ್ಛವಾಗಿ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಈರುಳ್ಳಿ ರಸ ಬಳಸುವುದರಿಂದ ತಲೆಹೊಟ್ಟು ಮತ್ತು ನೆತ್ತಿಯ ಸೋಂಕನ್ನು ನಿವಾರಿಸಬಹುದು. ಈರುಳ್ಳಿ ಜಜ್ಜಿ ರಸ ತೆಗೆಯಿರಿ. ನಂತರ ಇದನ್ನು ಕೂದಲಿನ ಬುಡಕ್ಕೆ ಮಸಾಜ್‌ ಮಾಡಿ. ಒಂದು ಗಂಟೆ ಬಳಿಕ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಹರಳೆಣ್ಣೆ – ಕ್ಯಾಸ್ಟರ್ ಆಯಿಲ್‌ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಎಂಟಿಫಂಗಲ್ ಗುಣಲಕ್ಷಣಗಳು ಕಂಡುಬರುತ್ತವೆ. ಅದರ ಬಳಕೆಯಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಕೂದಲು ಉದುರುವಿಕೆಯನ್ನು ಕೂಡ ಇದು ತಡೆಯುತ್ತದೆ. ತಲೆಯ ತುರಿಕೆ ಸಮಸ್ಯೆ ಇದ್ದರೆ ಕ್ಯಾಸ್ಟರ್ ಆಯಿಲ್, ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ಬಳಸಿ. ಮೂರೂ ಎಣ್ಣೆಯ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೇ ಬಿಟ್ಟು, ಬೆಳಗ್ಗೆ ಶುದ್ಧ ನೀರಿನಿಂದ ತಲೆಸ್ನಾನ ಮಾಡಿ. ತುರಿಕೆ ಮತ್ತು ಸೋಂಕಿನಿಂದ ಪರಿಹಾರ ಸಿಗುತ್ತದೆ.

ಮೊಸರು – ನೆತ್ತಿಯ ಸೋಂಕು ಮತ್ತು ತುರಿಕೆಗೆ ಮೊಸರಿನಲ್ಲೂ ಮದ್ದಿದೆ. ಲ್ಯಾಕ್ಟಿಕ್ ಆಮ್ಲವು ಮೊಸರಿನಲ್ಲಿ ಕಂಡುಬರುತ್ತದೆ. ಇದರಲ್ಲಿ ಪ್ರೋಟೀನ್ ಸಹ ಹೇರಳವಾಗಿದೆ. ಇದು ಕೂದಲನ್ನು ಬಲಪಡಿಸುತ್ತದೆ. ಅರ್ಧ ಕಪ್ ಮೊಸರು ತೆಗೆದುಕೊಂಡು ಅದರಲ್ಲಿ 2 ಚಮಚ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ನಂತರ ಟೀ ಟ್ರೀ ಹೇರ್ ಆಯಿಲ್‌ನ ಕೆಲವು ಹನಿಗಳನ್ನು ಸೇರಿಸಿ. ಈ ಹೇರ್‌ ಮಾಸ್ಕ್‌ ಅನ್ನು ಅನ್ವಯಿಸಿಕೊಂಡು 20 ನಿಮಿಷ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಕೂದಲಿನಿಂದ ಎಲ್ಲಾ ಕೊಳಕು ನಿವಾರಣೆಯಾಗುತ್ತದೆ.

TAGGED:Excessively itchy scalp?: Try this home remedy
Share This Article
Facebook Twitter Copy Link Print
Previous Article Health tips ಬೆಳ್ಳಗಿನ ಕಾಂತಿಯುತ ತ್ವಚೆ ನಿಮ್ಮದಾಗಬೇಕೆ?: ಜಸ್ಟ್ ಈ ರೀತಿ ಮಾಡಿ ಸಾಕು
Next Article Health tips ಡ್ರೈಫ್ರೂಟ್‌ಗಳನ್ನು ಈ ರೀತಿ ತಿನ್ನಿ: ಎಲ್ಲಾ ಕಾಯಿಲೆ ತಕ್ಷಣ ಮಾಯ

Popular Posts

New Education Minister Pralhad Joshi’s first reactionq ಕರ್ತವ್ಯಪ್ರಜ್ಞೆ, ವಿನಮ್ರತೆಯಿಂದ ಜವಾಬ್ದಾರಿ ಸ್ವೀಕರಿಸುತ್ತೇನೆ: ನೂತನ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಮೊದಲ ಮಾತು

1 Min Read

Anahat Singh World Junior Squash ವಿಶ್ವ ಜೂನಿಯರ್ ಸ್ಕ್ವಾಶ್‌ನಲ್ಲಿ ಇತಿಹಾಸ ಬರೆದ ಅನಾಹತ್ ಸಿಂಗ್: ಚಿನ್ನ ಗೆದ್ದ ಮೊದಲ ಭಾರತೀಯ

1 Min Read

Astrology ವಾರದ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ಸಮಗ್ರ ಫಲಿತಾಂಶಗಳು ಇಲ್ಲಿವೆ

3 Min Read

Lok Sabha ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಕಡಿವಾಣ; ಸೋಮವಾರ ಲೋಕಸಭೆಯಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ’ ಮಂಡನೆ

1 Min Read

You Might Also Like

ಪ್ರಮುಖದೇಶ

Prallhad Joshi ಶಿಕ್ಷಣ ಸಚಿವಾಲಯದ ಹೆಚ್ಚುವರಿ ಹೊಣೆ ಪಡೆದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

1 Min Read
ಪ್ರಮುಖಆರೋಗ್ಯ

Cholesterol In Middle Age ವಯಸ್ಸಾದಂತೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಕಾರಣವೇನು? ಆರೋಗ್ಯ ರಕ್ಷಣೆಗೆ ಇಲ್ಲಿದೆ ಪ್ರಮುಖ ಮಾಹಿತಿ

2 Min Read
ಪ್ರಮುಖವಿದೇಶ

Divorce Case ಜಗತ್ತನ್ನೇ ಬೆಚ್ಚಿಬೀಳಿಸಿದ ವಿಚ್ಛೇದನ; ಮಾಜಿ ಪತ್ನಿಗೆ 6,245 ಕೋಟಿ ರೂ. ನೀಡಲು ಉದ್ಯಮಿಗೆ ಹೈಕೋರ್ಟ್ ಆದೇಶ

1 Min Read
ಪ್ರಮುಖದೇಶ

Sonam Wangchuk ಸೋನಮ್ ವಾಂಗ್ಚುಕ್ 26 ದಿನಗಳ ಉಪವಾಸ ಅಂತ್ಯಗೊಳಿಸಲು ಕಸರತ್ತು ನಡೆಸಿದವರು ಯಾರು? ಇಲ್ಲಿದೆ ಅಸಲಿ ಕಥೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?