newsics.com
ಅಮೇರಿಕಾ: ಡೊನಾಲ್ಡ್ ಟ್ರಂಪ್ 47ನೇ ಯುಎಸ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
ಕ್ಯಾಪಿಟಲ್ ಆವರಣದಲ್ಲಿ ನಡೆದ ಭವ್ಯವಾದ ಉದ್ಘಾಟನಾ ಸಮಾರಂಭದೊಂದಿಗೆ 2ನೇ ಬಾರಿಗೆ ಅಮೆರಿಕಾದ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಅವರು ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದರು. ಟ್ರಂಪ್ ಯುಎಸ್ ಅಧ್ಯಕ್ಷರಾಗಿ ಹಿಂದಿರುಗುವುದು ಅಮೆರಿಕಾದ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದೆ, ಏಕೆಂದರೆ ಅವರು ಸೋತು ಮತ್ತೆ ಅಧಿಕಾರಕ್ಕೆ ಬಂದ ಎರಡನೇ ಅಧ್ಯಕ್ಷರಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಅಧ್ಯಕ್ಷ ಟ್ರಂಪ್‌ಗೆ ಪ್ರಧಾನಿ ನರೇಂದ್ರ ಮೋದಿಯವರ ಪತ್ರವನ್ನು ಒಯ್ದಿದ್ದಾರೆ ಎಂದು ವರದಿಯಾಗಿದೆ.