newsics.com
ಬೆಂಗಳೂರು : ಟಾಟಾ ಮೋಟಾರ್ಸ್ ಬಂಡೀಪುರ ಎಡಿಶನ್ ಕಾರು ಅನಾವರಣ ಮಾಡಿದೆ. ಟಾಟಾ ಹ್ಯಾರಿಯರ್, ಸಫಾರಿ ಹಾಗೂ ನೆಕ್ಸಾನ್ ಇವಿ ಕಾರುಗಳನ್ನು ಬಂಡೀಪುರ ಆನೆ ಲೋಗೋ ಅಡಿಯಲ್ಲಿ ಅನಾವರಣ ಮಾಡಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಅಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್ ಪ್ರಮುಖ ಮೂರು ಕಾರುಗಳನ್ನು ಅನಾವರಣ ಮಾಡಿದೆ. ವಿಶೇಷ ಅಂದರೆ ಇದು ಬಂಡಿಪುರ ಎಡಿಶನ್ ಕಾರು. ಈ ಕಾರಿನಲ್ಲಿ ಬಂಡಿಪುರ ಕಾಡಾನೆ ಲೋಗೋ ಬಳಸಲಾಗಿದೆ. ಇಷ್ಟೇ ಅಲ್ಲ ಕೆಲ ವಿಶೇಷತೆಗಳು ಈ ಕಾರಿನಲ್ಲಿದೆ.
ಟಾಟಾ ಮೋಟಾರ್ಸ್ ದೇಶದ ಹೆಮ್ಮೆಯ ಆಟೋಮೊಬೈಲ್ ಕಂಪನಿ. ಭಾರತೀಯರಿಗೆ ಕೈಗೆಟುಕುವ ದರದಲ್ಲಿ 5 ಸ್ಟಾರ್ ಸುರಕ್ಷತೆ, ಅತ್ಯಾಧುನಿಕ ಫೀಚರ್ಸ್, ಆಕರ್ಷಕ ವಿನ್ಯಾಸದ ಕಾರುಗಳನ್ನು ಟಾಟಾ ಮೋಟಾರ್ಸ್ ನೀಡುತ್ತಿದೆ. ಇದೀಗ ಟಾಟಾ ಮೋಟಾರ್ಸ್ ಕರ್ನಾಟಕ ಅರಣ್ಯ ಹಾಗೂ ಪ್ರಾಣಿ ಸಂಪತ್ತಿಗೆ ವಿಶೇಷ ಗೌರವ ನೀಡಿದೆ.
ಬಂಡಿಪುರ ಭಾರತದ ಎರಡನೇ ಅತೀ ದೊಡ್ಡ ಹುಲಿ ಸಂರಕ್ಷಿತ ತಾಣವಾಗಿದೆ. ಇಷ್ಟೇ ಅಲ್ಲ ದಕ್ಷಿಣ ಏಷ್ಯಾದಲ್ಲಿ ಅತೀ ಹೆಚ್ಚು ಆನೆ ಸಂಖ್ಯೆ ಹೊಂದಿರುವ ಸಂರಕ್ಷಿತ ತಾಣ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.