newsics.com
ಪುರುಷರು ಮಹಿಳೆಯರಲ್ಲಿ ಅವಳ ಸೌಂದರ್ಯ ಮಾತ್ರ ಗಮನಿಸುತ್ತಾರೆ ಎಂದರೆ ಅದು ತಪ್ಪು, ಮೊದಲ ನೋಟಕ್ಕೆ ಅವಳ ಸೌಂದರ್ಯ ಗಮನ ಸೆಳೆಯಬಹುದು, ಆದರೆ ಅವಳ ಸೌಂದರ್ಯಕ್ಕಿಂತ ಅವಳಲ್ಲಿನ ಈ ವಿಶೇಷತೆ ಅವನನ್ನು ಆಕರ್ಷಿಸುತ್ತದೆ. ಹೌದು, ಬಹುತೇಕ ಪುರುಷರಿಗೆ ಹೆಣ್ಮಕ್ಳನ್ನು ತುಂಬಾ ಪ್ರೀತಿಸುವಂತೆ ಮಾಡುವುದು ಈ ಕೆಲವು ಅಂಶಗಳಾಗಿವೆ.
ಬುದ್ಧಿವಂತ ಹೆಣ್ಣು ಪುರುಷನನ್ನು ಸೆಳೆಯುತ್ತಾಳೆ. ಅವಳಲ್ಲಿ ಬುದ್ಧಿವಂತಿಕೆ ಇರಬೇಕು, ಮೃದುತ್ವ ಇರಬೇಕು ಅಂದರೆ ಅವಳಲ್ಲಿ ಕರುಣೆಯ ಗುಣವಿರಬೇಕು. ಇಂಥ ಗುಣದ ಹೆಣ್ಣು ತನ್ನ ಪತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಬುದ್ಧಿವಂತಿಕೆಯಿಂದಲೂ ನಡೆದುಕೊಳ್ಳುತ್ತಾಳೆ.
ಪುರುಷ ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಡುತ್ತಾನೆ ಎನ್ನುವುದು ಭ್ರಮೆ. ಅವಳು ಎಷ್ಟೇ ಸುಂದರವಾಗಿರಲಿ ಅವಳ ಬುದ್ಧಿ ಅವನಿಗೆ ಇಷ್ಟವಾಗಿಲ್ಲ ಎಂದಾದರೆ ಅವಳನ್ನು ಇಷ್ಟಪಡಲ್ಲ.
ತಾನು ಹೇಳಿದ್ದನ್ನು ಕೇಳುವ ಹೆಣ್ಣು, ತನ್ನ ಮಾತನ್ನು ಕೇಳಿ ಅದರಂತೆ ನಡೆದುಕೊಳ್ಳುವ ಹೆಣ್ಣು ಅವನಿಗೆ ತುಂಬಾನೇ ಇಷ್ಟವಾಗುತ್ತಾಳೆ. ಅವನ ಜೊತೆ ಮಾತನಾಡುವಾಗ ಬುದ್ಧಿವಂತಿಕೆಯಿಂದ ಮಾತನಾಡುವುದು ಅವನನ್ನು ಸೆಳೆಯುತ್ತದೆ.
ಅಳುಮುಂಜಿ ಮಹಿಳೆಗಿಂತ ಸ್ಟ್ರಾಂಗ್ ಮಹಿಳೆ ಪುರುಷನನ್ನು ತುಂಬಾ ಸೆಳೆಯುತ್ತಾಳೆ, ಎಂಥದ್ದೇ ಪರಿಸ್ಥಿತಿ ಆಗಿರಲಿ ಅದನ್ನು ಧೈರ್ಯದಿಂದ ಎದುರಿಸುವ ಹೆಣ್ಣಿನ ಮೇಲೆ ಪ್ರೀತಿ ಹೆಚ್ಚುಹುಟ್ಟುತ್ತದೆ. ಇಂಥ ಹೆಣ್ಣಿನ ಮೇಲೆ ಅವನಿಗೆ ಪ್ರೀತಿ ಹಾಗೂ ಹೆಮ್ಮೆ ಇರುತ್ತದೆ.
ಹೆಣ್ಣು ಅವನಿಗೆ ನೀನೇ ಶ್ರೇಷ್ಠ ಎಂಬ ಭಾವನೆ ಮೂಡಿಸುವವಳು ಆಗಿರಬೇಕು, ಅವನ ಮೇಲಿರುವ ಪ್ರೀತಿ ಅವಳಲ್ಲಿ ಎದ್ದು ಕಾಣಬೇಕು, ಅಂಥ ಹೆಣ್ಣೆಂದರೆ ಅವನು ತುಂಬಾನೇ ಇಷ್ಟಪಡುತ್ತಾನೆ. ಹೆಣ್ಣಿನಲ್ಲಿ ರೂಪಕ್ಕಿಂತ ಅವಳ ಗುಣಗಳೇ ಪುರುಷನನ್ನು ಹೆಚ್ಚು ಸೆಳೆಯುತ್ತದೆ.
ಮೊದಲ ಬಾರಿ ಭೇಟಿಯಾದಾಗ ರೂಪ ನೋಡಿ ಆಕರ್ಷಿತರಾಗಿರಬಹುದು, ಆದರೆ ನಂತರ ಪುರುಷ ಮಹಿಳೆಯನ್ನು ಪ್ರೀತಿಸುವಂತೆ ಮಾಡುವುದು ಅವಳಲ್ಲಿರುವ ಗುಣಗಳು. ಹಾಗಾಗಿ ಪುರುಷನನ್ನು ಹೆಣ್ಣು ಸೌಂದರ್ಯಕ್ಕಿಂತ ಗುಣದಿಂದ ಗೆಲ್ಲಬಹುದಾಗಿದೆ.