newsics.com
ಮ್ಯಾಟ್ರಿಮೋನಿಯಲ್ಲಿ ಶ್ರೀಮಂತ ಹುಡುಗರನ್ನೇ ಟಾರ್ಗೆಟ್ ಮಾಡಿ ಕೋಟಿ ಕೋಟಿ ವಂಚಿಸಿದ್ದ ಚಾಲಾಕಿಯೊಬ್ಬಳನ್ನು ಉತ್ತರಾಖಂಡದ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೀಮಾ ಎನ್ನುವ ಮಹಿಳೆ, ಇಲ್ಲಿಯವೆಗೂ ಒಟ್ಟು ಮೂರು ಮದುವೆಯಾಗಿ 1.25 ಕೋಟಿ ರೂಪಾಯಿ ಲೂಟಿ ಮಾಡಿದ್ದಾಳೆ. ಹಣ ಆಸ್ತಿ ಇರೋರನ್ನ ಮದುವೆಯಾಗೋದೆ ವೃತ್ತಿಯನ್ನು ಮಾಡಿಕೊಂಡಿದ್ದ ಈಕೆ ಆಮೇಲೆ ವಂಚಿಸಿ, ಲೂಟಿ ಹೊಡೆದು ಪರಾರಿಯಾಗುತ್ತಿದ್ದಳು.
2013ರಲ್ಲಿ ಆಗ್ರದ ಒಬ್ಬ ಬ್ಯುಸಿನೆಸ್ ಮೆನ್ನನ್ನು ಮದುವೆಯಾಗಿದ್ದ ಈಕೆ, ಕೆಲ ತಿಂಗಳ ಬಳಿಕ ಗಂಡನ ಮನೆಯವರ ವಿರುದ್ಧ ಕಾನೂನು ದುರ್ಬಳಕೆ ಮಾಡಿಕೊಂಡು ಕೇಸ್ ದಾಖಲಿಸಿದ್ದಳು ಕೇಸ್ ರಾಜಿ ಮಾಡಿಕೊಳ್ಳಲು 75 ಲಕ್ಷ ರೂಪಾಯಿ ಪಡೆದಿದ್ದಳು.
ಇನ್ನು 2017ರಲ್ಲಿ ಗುರುಗ್ರಾಮದ ಸಾಫ್ಟ್ವೇರ್ ಇಂಜಿನಿಯರ್ ಜೊತೆಗೆ ಮದುವೆ ಮಾಡಿಕೊಂಡ ಈಕೆ ಇಲ್ಲಿಯೂ ಕೂಡ ಕೇಸ್ ಹಾಕಿ ರಾಜಿ ಮಾಡಿಕೊಳ್ಳಲು 10 ಲಕ್ಷ ರೂಪಾಯಿ ಕಿತ್ತುಕೊಂಡಿದ್ದಳು. 2023ರಲ್ಲಿ ಜೈಪುರದ 3ನೇ ಗಂಡನ ಮನೆಗೆ ಹೋದಾಗ ಯಾವುದೇ ಕೇಸ್ ಹಾಕದೇ ಮನೆಯಲ್ಲಿದ್ದ 35 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣ ಲೂಟಿ ಮಾಡಿ ಕಾಲ್ಕಿತ್ತಿದ್ದಳು. 3ನೇ ಪತಿ ನೀಡಿದ ದೂರಿನ ಮೇರೆಗೆ ಈಗ ಸೀಮಾಳನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಸೀಮಾಳನ್ನು ಬಂಧಿಸಿರುವ ಪೊಲೀಸರು ಈಕೆಯಿಂದ ವಂಚನೆಗೆ ಒಳಗಾದವರು ದೂರು ನೀಡುವಂತೆ ಮನವಿ ಮಾಡಿದ್ದಾರೆ.