newsics.com
ಬೆಂಗಳೂರು: ಮುಡಾ ಹಗರಣದ ಬಗ್ಗೆ ಮತ್ತೊಂದು ಮಹತ್ವದ ದಾಖಲೆಯನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದಾರೆ.
ಹೌದು, ಮುಡಾ ಹಗರಣದ ತನಿಖೆಗೆ ಸರ್ಕಾರ ರಚಿಸಿರುವಂತ ತನಿಖಾ ಆಯೋಗದ ಅಧ್ಯಕ್ಷ ಪಿಎನ್ ದೇಸಾಯಿ ಅವರಿಗೆ ಸಂಬಂಧಿಸಿದ್ದಾಗಿದೆ. ಕೇಂದ್ರ ಸರ್ಕಾರ ಈ ಹಿಂದೆ ಸಿಎಟಿ ಸದಸ್ಯರಾಗಿ ಪಿಎನ್ ದೇಸಾಯಿ ಅವರನ್ನು ನೇಮಕ ಮಾಡಿತ್ತು. ಆದರೇ ವೈಯಕ್ತಿಕ ಕಾರಣದಿಂದ ಸದಸ್ಯತ್ವವನ್ನು ಪಿಎನ್ ದೇಸಾಯಿ ಒಪ್ಪಿರಲಿಲ್ಲ.
ಅವರ ಅರ್ಜಿಯಲ್ಲಿ ಹಲವು ನಿಬಂಧನೆಗಳಿಗೆ ಒಪ್ಪಿದ್ದ ಅವರು, ನೇಮಕಾತಿ ಆದೇಶವನ್ನು ನಿರಾಕರಿಸದಿರುವುದು, ಆದೇಶದ 30 ದಿನಗಳ ಒಳಗಾಗಿ ಸದಸ್ಯರಾಗಿ ಅಧಿಕಾರ ಸ್ವೀಕರಿಸುವುದು ಸೇರಿದಂತೆ ಹಲವು ನಿಬಂಧನೆಗಳನ್ನು ಒಪ್ಪದೇ ಸದಸ್ಯತ್ವನನ್ನು ನಿರಾಕರಿಸಿದ್ದರ ಬಗ್ಗೆ ಇಂದು ಸ್ನೇಹಮಯಿಕೃಷ್ಣ ಅವರು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ಮೈಸೂರು ಮುಡಾ ಹಗರಣದ ತನಿಖಾ ಆಯೋಗದ ಅಧ್ಯಕ್ಷರಾಗಿರುವ ನಿವೃತ್ತ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ಅವರ ನೇಮಕವನ್ನು ಪ್ರಶ್ನಿಸಿದ್ದಾರೆ. ದೇಸಾಯಿ ಅವರು ಹಿಂದೆ ಸಿಎಟಿ ಸದಸ್ಯತ್ವವನ್ನು ನಿರಾಕರಿಸಿದ್ದು, ಅದರ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಹಲವು ದಾಖಲೆಗಳೊಂದಿಗೆ ಬಹಿರಂಗಪಡಿಸಿದ್ದಾರೆ.
ನೇಮಕಾತಿ ಆದೇಶವನ್ನು ನಿರಾಕರಿಸದೇ ಇರುವುದು, ಆದೇಶ ಆದ 30 ದಿನಗಳ ಒಳಗಾಗಿ ಜವಾಬ್ದಾರಿ ಸ್ವೀಕರಿಸುವ ನಿಬಂಧನೆಗಳನ್ನು ಪಿಎನ್ ದೇಸಾಯಿ ಒಪ್ಪಿದ್ದರು. ಒಂದು ವೇಳೆ ನಿಬಂಧನೆಗಳನ್ನು ಉಲ್ಲಂಘಿಸಿದರೆ ಮೂರು ವರ್ಷಗಳ ಕಾಲ ಯಾವುದೇ ಆಯೋಗಕ್ಕೆ ನೇಮಕ ಮಾಡದಂತೆ ಡಿಬಾರ್ ಆಗಬಹುದು ಎಂಬ ನಿಬಂಧನೆಗೂ ಒಪ್ಪಿದ್ದರು. ಹೀಗಾಗಿ, ನಂತರದಲ್ಲಿ ಸಿಎಟಿ ಸದಸ್ಯತ್ವ ಒಪ್ಪದ ಕಾರಣ ಅವರನ್ನು ಮೂರು ವರ್ಷ ಶಾಸನಬದ್ಧ ಸಮಿತಿ, ಸ್ವಾಯತ್ತ ಸಮಿತಿ, ನಿಯಂತ್ರಕ ಸಮಿತಿಗೆ ನೇಮಕ ಮಾಡದಂತೆ ಆದೇಶ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಈ ವಿಚಾರ ಸಂಬಂಧ ಸ್ನೇಹಮಯಿ ಕೃಷ್ಣ ದಾಖಲೆ ಬಿಡುಗಡೆ ಮಾಡಿದ್ದಾರೆ.
ಪಿಎನ್ ದೇಸಾಯಿ ವಿಚಾರವಾಗಿ ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿಕೃಷ್ಣ, ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಶ್ರೀ ಪದ್ಮರಾಜ್ ನೇಮಚಂದ್ರ ದೇಸಾಯಿ (ಪಿ.ಎನ್.ದೇಸಾಯಿ) ಅವರನ್ನು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನೆ ಮಾಡಿರುವ ಏಕಸದಸ್ಯ ಆಯೋಗದ ಅಧ್ಯಕ್ಷರನ್ನಾಗಿ ಮಾಡಿರುವ ಆದೇಶವನ್ನು ಕೂಡಲೇ ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.