newsics.com
ಬೀದರ್: ಬೀದರ್‌ನಲ್ಲಿ ರಣಭೀಕರ ಚಳಿಗೆ ಜನ ಬೆಚ್ಚಿಬಿದ್ದಿದ್ದಾರೆ. ಜಿಲ್ಲಾಡಳಿತ ಮತ್ತು ಹವಾಮಾನ ಇಲಾಖೆ ಮೂರು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದೆ.
10 ರಿಂದ 12 ಡಿಗ್ರಿ ಇದ್ದ ತಾಪಮಾನ ಏಕಾಏಕಿ 7.5 ಡಿಗ್ರಿ ಸೆಲ್ಸಿಯಸ್ಗೆ ಇಳಿಕೆಯಾಗಿದೆ. ಮುಂದಿನ ಮೂರು ದಿನಗಳಲ್ಲಿ 5 ರಿಂದ 6 ಡಿಗ್ರಿ ತಾಪಮಾನ ದಾಖಲು ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಮುಂದಿನ ಮೂರು ದಿನಗಳ ಕಾಲ ಭಾರೀ ಶೀತಗಾಳಿ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಜಿಲ್ಲಾಡಳಿತ 4 ಖಡಕ್ ಸೂಚನೆ
- ಸಾರ್ವಜನಿಕರು ಬೆಚ್ಚನೆಯ ಉಡುಪು ಧರಿಸಿ
- ಸೂರ್ಯೋದಯಕ್ಕಿಂತ ಮುನ್ನ, ಸೂರ್ಯಾಸ್ತದ ನಂತರ ವಾಕಿಂಗ್ ಬೇಡ
- ದ್ವಿಚಕ್ರ ವಾಹನದಲ್ಲಿ ಓಡಾಡೋದನ್ನು ಕಡಿಮೆ ಮಾಡಿ
- ರಾತ್ರಿ ಹೊತ್ತು, ಬೆಳಗಿನ ವೇಳೆ ಕೃಷಿ ಚಟುವಟಿಕೆ ಬೇಡ
ಕಳೆದ ಒಂದು ವಾರದಿಂದ ಬೀದರ್‌ನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಗರಿಷ್ಠ ತಾಪಮಾನ 28 ಇದ್ದರೆ ಕನಿಷ್ಠ ತಾಪಮಾನ 7ಕ್ಕೆ ಇಳಿಕೆಯಾಗಿದೆ.