Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಚಳಿಗೆ ಈ ಅವಲಕ್ಕಿ ಕಟ್ಲೆಟ್ ಒಮ್ಮೆ ತಿಂದು ನೋಡಿ
ಆರೋಗ್ಯಟೇಸ್ಟ್ಲೈಫ್‌ಸ್ಟೈಲ್

ಚಳಿಗೆ ಈ ಅವಲಕ್ಕಿ ಕಟ್ಲೆಟ್ ಒಮ್ಮೆ ತಿಂದು ನೋಡಿ

Share
1 Min Read
SHARE

newsics.com
ಈಗಂತೂ ಸಂಜೆ 5 ಆಗುತ್ತಿದ್ದಂತೆ ನಡುಗುವ ಚಳಿ ಶುರುವಾಗುತ್ತದೆ. ಸಾಮಾನ್ಯ ದಿನಗಳಲ್ಲೇ ಸಂಜೆಯಾದ್ರೆ ಸಾಕು ಏನಾದರೂ ಸ್ನ್ಯಾಕ್ಸ್‌ ತಿನ್ನೋಣ ಎನ್ನಿಸುತ್ತದೆ. ಅದರಲ್ಲೂ‌ ಚಳಿಗಾಲದಲ್ಲಿ ನಮ್ಮ ನಾಲಿಗೆ ಮತ್ತಷ್ಟು ಸ್ನ್ಯಾಕ್ಸ್‌ ಕೇಳುತ್ತೆ.

ಹೌದು, ಹೊರಗಡೆ ಒಂದು ಕಟ್ಲೆಟ್ ಗೆ 50 ರೂಪಾಯಿವರೆಗೆ ಬೆಲೆ ಇರುತ್ತದೆ. ಆದರೆ ನೀವು ಇದನ್ನು ಮನೆಯಲ್ಲೇ ತಯಾರಿಸಬಹುದು, ಈ ಸ್ನ್ಯಾಕ್ಸ್‌ ತಯಾರಿಸೋಕೆ ಹತ್ತೇ ನಿಮಿಷ ಸಾಕು.

ಬೇಕಾಗುವ ಸಾಮಾಗ್ರಿಗಳು:
ನೆನೆಸಿದ ದಪ್ಪ ಅವಲಕ್ಕಿ – 1 ದೊಡ್ಡ ಬೌಲ್
ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ – 2
ಚಾಟ್ ಮಸಾಲ – 1 ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್
ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ – 1 ಬೌಲ್
ಹೆಚ್ಚಿದ ಹಸಿಮೆಣಸಿನಕಾಯಿ – 2
ಚಿಕ್ಕದಾಗಿ‌ ಹೆಚ್ಚಿದ ಕ್ಯಾಪ್ಸಿಕಂ
ಉಪ್ಪು – ರುಚಿಗೆ ತಕ್ಕಷ್ಟು
ಕಡಲೆಹಿಟ್ಟು – 1 ಸ್ಪೂನ್
ಎಣ್ಣೆ – ಅಗತ್ಯವಿರುವಷ್ಟು

ಮಾಡುವ ವಿಧಾನ: ದಪ್ಪ ಅವಲಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ,ನೀರು ಬಸಿದು ಒಂದು ದೊಡ್ಡ ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ತರಕಾರಿ, ಚಾಟ್ ಮಸಾಲ,ಶುಂಠಿ ಬೆಳ್ಳುಳ್ಳಿ ಪೇಸ್ಟ್ ,ಅಗತ್ಯವಿರುವಷ್ಟು ಉಪ್ಪು ಸೇರಿಸಿ ಗಟ್ಟಿ ಇರುವಂತೆ ಕಲೆಸಿಕೊಳ್ಳಿ.
ಕೊನೆಯಲ್ಲಿ ಇದಕ್ಕೆ ಒಂದೆರಡು ಚಮಚದಷ್ಟು ನೀರು ಸೇರಿಸಿ ಕಡಲೆಹಿಟ್ಟು ಸೇರಿಸಿ ಮತ್ತೊಮ್ಮೆ‌ ಕಲೆಸಿ. ಕಡಲೆಹಿಟ್ಟು ಇವುಗಳನ್ನು ಒಟ್ಟಾಗಿ ಹಿಡಿದಿಡುತ್ತದೆ. ಬಳಿಕ ತವಾ ಗ್ಯಾಸ್ ಮೇಲಿಟ್ಟು ಎಣ್ಣೆ ಸವರಿ.

ಅವಲಕ್ಕಿ ಹಾಗೂ ತರಕಾರಿಯಿಂದ ತಯಾರಿಸಿದ ಮಿಶ್ರಣವನ್ನು ಅಂಗೈಯಲ್ಲಿಟ್ಟುಕೊಂಡು ಪುಟ್ಟ ಪುಟ್ಟ ವಡೆಗಳಂತೆ ತಟ್ಟಿಕೊಳ್ಳಿ. ಸಣ್ಣ ಉರಿಯಲ್ಲಿ ತವಾದ ಮೇಲೆ ಎರಡೂ ಬದಿ ಚೆನ್ನಾಗಿ ಬೇಯಿಸಿ ತೆಗಿಯಿರಿ. ಬಿಸಿ ಬಿಸಿಯಾಗಿ ಸಾಸ್ ನೊಂದಿಗೆ ಸವಿಯಿರಿ.

TAGGED:Try this avalakki cutlet for cold  
Share This Article
Facebook Twitter Copy Link Print
Previous Article Vijayapura Accident ವಿಜಯಪುರದಲ್ಲಿ ಭೀಕರ ಅಪಘಾತ: ಐವರು ಸ್ಥಳದಲ್ಲೇ ಸಾವು
Next Article Bigg boss kannada ಗೌತಮಿಯ ಖುಷಿ ಸಹಿಸದೇ ಬಾತ್ ರೂಮ್ ಸೇರಿಕೊಂಡ ಮೋಕ್ಷಿತಾ

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?