newsics.com
ಜೀ ಕನ್ನಡದ ಸರಿಗಮಪ ಶೋ ಮತ್ತೆ ಶುರು ಆಗುತ್ತಿದೆ. ಪ್ರತಿ ಸಲವೂ ಹೊಸತನದಿಂದಲೇ ಬರ್ತಾ ಇದ್ದ ಈ ಶೋ ಮತ್ತೊಮ್ಮೆ ಹೊಸ ರೀತಿಯಲ್ಲಿಯೇ ಬರ್ತಿದೆ. ಇದನ್ನು ಬಿಂಬಿಸೋ ಒಂದು ಪ್ರೋಮೋ ಕೂಡ ಇದೀಗ ಅಧಿಕೃತವಾಗಿಯೇ ಹೊರಬಂದಿದೆ.
ಹೌದು, ಸರಿಗಮಪ ಹೊಸ ಸೀಸನ್ ಶುರು ಆಗುತ್ತಿದೆ. ಇಲ್ಲಿವರೆಗೂ ಈ ಒಂದು ಶೋಗಾಗಿಯೇ ಕಾದಿದ್ದ ಸಂಗೀತ ಪ್ರೇಮಿಗಳಿಗೆ ಈ ಸಲ ಬೇರೆ ರೀತಿಯ ಸಂಗೀತ ಸಂಭ್ರಮವೇ ಇರುತ್ತದೆ. ಅದರ ಝಲಕ್ ಈಗ ಬಿಟ್ಟಿರೋ ಪ್ರೋಮೋದಲ್ಲಿಯೇ ರಿವೀಲ್ ಆಗಿದೆ. ಎಲ್ಲೂ ಸಿಗದ ಆ ಒಂದು ಥ್ರಿಲ್ ಅನ್ನು ನಿರ್ಣಾಯಕರಾದ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹುಡುಕುತ್ತಿದ್ದಾರೆ.
ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಈ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಥ್ರಿಲ್ ಹುಡುಕಿಕೊಂಡು ಇವರು ಹೊರಟಿದ್ದಾರೆ. ಹಿಮಾಲಯಕ್ಕೆ ಹೋಗಿದ್ದಾರೆ. ರಾಜಸ್ಥಾನದ ಆ ಮರಳುಗಾಡಿಗೂ ಕಾಲಿಟ್ಟಿದ್ದಾರೆ. ಗೋವಾದ ಬೀಚ್‌ನಲ್ಲೂ ಓಡಾಡಿದ್ದಾರೆ. ಆದರೆ, ಇವರಿಗೆ ಅಲ್ಲೂ ಥ್ರಿಲ್ ಸಿಗೋದಿಲ್ಲ. ಆ ಥ್ರಿಲ್ ಎಲ್ಲಿ ಸಿಗುತ್ತದೆ ಅನ್ನೋ ಮಾಹಿತಿ ಇಲ್ಲಿ ಸ್ಪೆಷಲ್ ಆಗಿಯೇ ರಿವೀಲ್ ಆಗಿದೆ.
https://www.instagram.com/reel/DCuAUdJvUge/?igsh=MWNmOG83NnllbDdvNg==
ಜೀ ಕನ್ನಡದಲ್ಲಿ ಅತೀ ಶೀಘ್ರದಲ್ಲಿ ಸರಿಗಮಪ ಶೋ ಶುರು ಆಗುತ್ತಿದೆ. ಈ ಶೋದ ವಿಶೇಷ ವಿಚಾರವನ್ನು ಸ್ಪೆಷಲ್ ಪ್ರೋಮೋ ಮೂಲಕ ಜೀ ಕನ್ನಡ ತಿಳಿಸಿದೆ.
Camara misuse ಜಿಮ್ ಕಾರ್ಬೆಟ್ ಉದ್ಯಾನದ ಕ್ಯಾಮರಾಗಳಲ್ಲಿ ಮಹಿಳೆಯರ ಖಾಸಗಿ ಕ್ಷಣ ಸೆರೆ! ಕಿರುಕುಳ, ಬೆದರಿಕೆಗೆ ಬಳಕೆ