newsics.com
ನವದೆಹಲಿ : ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಹೇರ್‌ಕಟ್‌ಗಾಗಿ ಬರೋಬ್ಬರಿ 1.5 ಲಕ್ಷ ಪಾಕಿಸ್ತಾನಿ ರೂಪಾಯಿ ಖರ್ಚು ಮಾಡಿದ್ದಾರೆ.
ತಮ್ಮ ಪ್ರೀತಿಯ ಬೆಕ್ಕಿನ ಹೇರ್‌ಕಟ್‌ಗಾಗಿ ವಾಸಿಂ ಅಕ್ರಂ ಇಷ್ಟು ಹಣ ಖರ್ಚು ಮಾಡಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ವಿಶ್ಲೇಷಣೆಯಲ್ಲಿರುವ ವಾಸಿಂ ಅಕ್ರಂ 822 ಆಸ್ಟ್ರೇಲಿಯನ್ ಡಾಲರ್ (ಭಾರತೀಯ ರೂಪಾಯಿಯಲ್ಲಿ 45 ಸಾವಿರ ರೂಪಾಯಿ) ಖರ್ಚು ಮಾಡಿ ತಮ್ಮ ಪ್ರೀತಿಯ ಬೆಕ್ಕಿನ ಹೇರ್ ಕಟ್ ಮಾಡಿಸಿದ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
822 ಆಸ್ಟ್ರೇಲಿಯನ್ ಡಾಲರ್ ಎಂದರೆ, ಭಾರತತೀಯ ರೂಪಾಯಿಯಲ್ಲಿ 45 ಸಾವಿರವಾಗಿದ್ದರೆ, ಪಾಕಿಸ್ತಾನಿ ರೂಪಾಯಿಯಲ್ಲಿ 1.5 ಲಕ್ಷ ರೂಪಾಯಿ ಆಗಿದೆ.
ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದ ವೇಳೆ ಕ್ರಿಕೆಟ್ ವಿಶ್ಲೇಷಣೆ ಮಾಡುತ್ತಿದ್ದ ವೇಳೆ ಸ್ವತಃ ವಾಸಿಂ ಅಕ್ರಂ ಈ ವಿಚಾರ ಬಹಿರಂಗಪಡಿಸಿದ್ದಾರೆ.
ವಾಸಿಂ ಅಕ್ರಮ್ ಪಕ್ಕದಲ್ಲಿ ಕುಳಿತಿದ್ದ ಆಸೀಸ್ ಮೂಲದ ವಿಶ್ಲೇಷಕರು ಕೂಡ ಬೆಕ್ಕಿನ ಹೇರ್‌ಕಟ್‌ಗಾಗಿ ಇಷ್ಟು ಪ್ರಮಾಣದ ಹಣ ಖರ್ಚು ಮಾಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೇರ್‌ಕಟ್‌ನ ಬಿಲ್‌ಅನ್ನು ಹಂಚಿಕೊಳ್ಳುವ ಮೊದಲ ಕಾಮೆಂಟರಿಯಲ್ಲಿ ಈ ವಿಚಾರವನ್ನು ಅವರು ತಿಳಿಸಿದ್ದರು.