Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗುರುಪ್ರಸಾದ್‌ಗಿದ್ದ ಆ ವಿಚಿತ್ರ ಕೆಟ್ಟ ಕಾಯಿಲೆ ಯಾವ್ದು..?
ಪ್ರಮುಖಮನರಂಜನೆ

ಗುರುಪ್ರಸಾದ್‌ಗಿದ್ದ ಆ ವಿಚಿತ್ರ ಕೆಟ್ಟ ಕಾಯಿಲೆ ಯಾವ್ದು..?

Share
2 Min Read
SHARE

newsics.com
ನಿನ್ನೆಯಿಂದ ನಿರ್ದೇಶಕ ಗುರುಪ್ರಸಾದ್ ಸಾವಿನದೇ ಸುದ್ದಿ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದೇನೋ ನಿಜ. ಇದರ ಜೊತೆಗೆ ಅವರಿಗೆ ವಿಚಿತ್ರ ಕಾಯಿಲೆಯೂ ಇತ್ತು. ಹೌದು, ಗುರುಪ್ರಸಾದ್‌ಗೆ ಸೋರಿಯಾಸಿಸ್ ಇತ್ತು. ಇದು ಕೀಳರಿಮೆಗೂ ಕಾರಣವಾಗಿತ್ತು ಎನ್ನಲಾಗುತ್ತದೆ. ಹಾಗಿದ್ರೆ ಸೋರಿಯಾಸಿಸ್ ಎಂದರೆ ಏನು ಎಂಬುದರ ಮಾಹಿತಿ ಇಲ್ಲಿದೆ..

ಸೋರಿಯಾಸಿಸ್ ಎಂಬುದು ದೀರ್ಘಕಾಲದ ಚರ್ಮದ ಸಮಸ್ಯೆಯಾಗಿದೆ. ಇದು ಸಾಮಾನ್ಯ ಚರ್ಮದ ಕಾಯಿಲೆಯಲ್ಲ. ಇದು ಇತರ ಚರ್ಮ ರೋಗಗಳಿಗಿಂತ ಸ್ವಲ್ಪ ಭಿನ್ನವಾಗಿದ್ದು, ಚರ್ಮದ ದೀರ್ಘಕಾಲದ ಉರಿಯೂತದ ಸ್ಥಿತಿಯಾಗಿದೆ. ಚರ್ಮದಲ್ಲಿ ಬಿಳಿ ಗುರುತುಗಳು ಮತ್ತು ಕೆಂಪು ಬಣ್ಣದ ಪ್ಲೇಕ್‌ಗಳು ಕಾಣಿಸಿಕೊಳ್ಳುತ್ತದೆ. ತುರಿಕೆಯ ಸ್ಥಿತಿಯು ಚರ್ಮದ ಮೇಲೆ ಪರಿಣಾಮ ಬೀರುವುದರ ಜೊತೆಗೆ, ಮಾನಸಿಕವಾಗಿ ಮತ್ತು ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಜಾಗತಿಕವಾಗಿ ಸುಮಾರು 25 ಕೋಟಿಗೂ ಹೆಚ್ಚು ಜನರು ಸೋರಿಯಾಸಿಸ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಇದೇ ವೇಳೆ ಭಾರತದಲ್ಲಿ ಸುಮಾರು 3 ಕೋಟಿ ಜನರಿಗೆ ಸೋರಿಯಾಸಿಸ್‌ ಸಮಸ್ಯೆ ಇದೆ. ಸೋರಿಯಾಸಿಸ್ ಸಾಂಕ್ರಾಮಿಕ ರೋಗವಲ್ಲ. ಆದರೂ ಸೋರಿಯಾಸಿಸ್ ರೋಗಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ, ಈ ಸಮಸ್ಯೆ ಕಾಣಿಸಿಕೊಂಡವರು ಒಂದು ರೀತಿಯ ಅಸುರಕ್ಷಿತ ಭಾವನೆ ಹೊಂದಿರುತ್ತಾರೆ.

ಸೋರಿಯಾಸಿಸ್ ಸಮಸ್ಯೆಯು ಎಲ್ಲರಿಗೂ ಕಾಣಿಸುವಂತಹ ಚರ್ಮರೋಗವಾಗಿರುವುದರಿಂದ ಜನರು ಇದನ್ನು ಸಾಂಕ್ರಾಮಿಕ ರೋಗವೆಂದು ಭಾವಿಸುತ್ತಾರೆ. ಆದರೆ ಇದು ಸಂಪೂರ್ಣವಾಗಿ ಸಾಂಕ್ರಾಮಿಕ ಅಲ್ಲದ ರೋಗ. ಇದು ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದ್ದು, ಚರ್ಮದ ಕೋಶಗಳ ಪುನರುತ್ಪಾದನೆಯು ಸಾಮಾನ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ಆಗುತ್ತದೆ. ಹೀಗಾಗಿ ಸೋರಿಯಾಸಿಸ್ ಹೊಂದಿರುವ ವ್ಯಕ್ತಿಯೊಂದಿಗೆ ಯಾವುದೇ ರೀತಿಯ ದೈಹಿಕ ಸಂಪರ್ಕವಿದ್ದರೆ, ಅವರಿಗೂ ಸೋರಿಯಾಸಿಸ್‌ ಹರಡುವುದಿಲ್ಲ

ಇನ್ನು ನಿಯಮಿತವಾಗಿ ಚಿಕಿತ್ಸೆ ಪಡೆಯುವುದರ ಮೂಲಕ ಸೋರಿಯಾಸಿಸ್ ಅನ್ನು ನಿಯಂತ್ರಿಸಬಹುದು. ಹೀಗಾಗಿ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಸಮಸ್ಯೆಯ ತೀವ್ರತೆಗೆ ಅನುಗುಣವಾಗಿ ನಿಮಗೆ ವೈದ್ಯರು ಪರಿಹಾರ ಸೂಚಿಸುತ್ತಾರೆ. ಏಕೆಂದರೆ ಇದರ ಲಕ್ಷಣ ಹಾಗೂ ತೀವ್ರತೆ ವಿಭಿನ್ನವಾಗಿರುತ್ತದೆ.
ವೈದ್ಯರ ಸಲಹೆಗಳಿಗೆ ಹೆಚ್ಚುವರಿಯಾಗಿ, ಚರ್ಮಕ್ಕೆ ಹೆಚ್ಚುವರಿ ಮಾಯಿಶ್ಚರೈಸೇಷನ್‌ ಬೇಕು. ಚರ್ಮವನ್ನು ಒಣಗಲು ಬಿಡಬಾರದು. ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬೇಕು. ಕೀಲುಗಳನ್ನು ಬಲಪಡಿಸಲು ನಿಯಮಿತ ವ್ಯಾಯಾಮ ಮಾಡಿದರೆ ಉತ್ತಮ. ಮಾನಸಿಕ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಯೋಗ, ಪ್ರಾಣಾಯಾಮ ಮಾಡಿದರೆ ತುಂಬಾ ಉತ್ತಮ. ಇದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಸೋರಿಯಾಸಿಸ್ ನಿಯಂತ್ರಿಸುವ ಸಲುವಾಗಿ ಧೂಮಪಾನ ಮತ್ತು ಮದ್ಯಪಾನವನ್ನು ಅಗತ್ಯವಾಗಿ ತ್ಯಜಿಸಬೇಕು.

TAGGED:What was that strange and bad disease that Guruprasad had..?
Share This Article
Facebook Twitter Copy Link Print
Previous Article ಬೆಂಗಳೂರಲ್ಲಿ ಫುಲ್‌ ಟ್ರಾಫಿಕ್‌ ಜಾಮ್‌; ಮೆಟ್ರೋ ರೈಲಿಗಾಗಿ 1 ಕಿ.ಮೀ ಸರತಿ ಸಾಲು
Next Article ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕಿಳಿದ ಪತ್ನಿ ರೇವತಿ

Popular Posts

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

You Might Also Like

ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read
ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?