newsics.com
ಬಳ್ಳಾರಿ: ಉಪಚುನಾವಣೆ ಹೊತ್ತಲ್ಲೇ ಹಲವು ವರ್ಷಗಳ ಬಳಿಕ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಸುದ್ದಿಗೋಷ್ಟೀಯಲ್ಲಿ ಮಾತನಾಡಿದ ನಾಯಕರು, ಬಿಜೆಪಿಯು ಶಕ್ತಿಶಾಲಿಯಾಗಿ ,ಒಗ್ಗಟ್ಟಾಗಿ ಕೆಲಸವನ್ನು ಮಾಡಲು. ಇಂದಿನಿಂದಲೇ ನಾವು ಪ್ರಚಾರ ಕಾರ್ಯ ಆರಂಭಿಸ್ತೇವೆ. ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಭ್ರಷ್ಟಾಚಾರ ಆಗಿರೋದು ಜಗಜ್ಜಾಹೀರಾಗಿದೆ. ಭ್ರಷ್ಟಾಚಾರ, ಅತ್ಯಾಚಾರ, ಭೂ ಕಬಳಿಕೆಯನ್ನ ಜನರು ನೋಡಿದ್ದಾರೆ. ನಮ್ಮ ಅಭ್ಯರ್ಥಿ ಬಂಗಾರು ಹನುಮಂತ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನ ಗಟ್ಟಿಯಾಗಿ ಕಟ್ತೇವೆ ಎಂದು ಶಪಥ ಮಾಡಿದ್ದಾರೆ.