newsics.com
ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರಕ್ಕೆ 2024ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ಹೌದು, ಮೈಕ್ರೊಆರ್‌ಎನ್‌ಎ ಮತ್ತು ಅದರ ನಂತರದ ಪ್ರತಿಲೇಖನ ಜೀನ್ ನಿಯಂತ್ರಣದಲ್ಲಿ ಮೈಕ್ರೊಆರ್‌ಎನ್‌ಎ ಪಾತ್ರದ ಅಧ್ಯಯನಕ್ಕಾಗಿಈ ವರ್ಷದ ನೊಬೆಲ್ ಪ್ರಶಸ್ತಿಯು ಜೀನ್ ಚಟುವಟಿಕೆಯನ್ನು ಹೇಗೆ ನಿಯಂತ್ರಿಸುತ್ತದೆ ಹಾಗೂ ಆ ನಿಯಂತ್ರಣದ ಮೂಲಭೂತ ತತ್ವವನ್ನು ಕಂಡುಹಿಡಿದ ಸಾಧನೆಗಾಗಿ ಈ ಇಬ್ಬರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ವಿವಿಧ ಕೋಶ ಪ್ರಕಾರಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಎಂಬುದರ ಬಗ್ಗೆ ಅಧ್ಯಯನವನ್ನು ಮಾಡಿದ್ದಾರೆ. ಇದು ವಂಶವಾಹಿ ನಿಯಂತ್ರಣದಲ್ಲಿ ಪಾತ್ರವನ್ನು ವಹಿಸುವ ಸಣ್ಣ ಆರ್‌ಎನ್‌ಎ ಅಣುಗಳ ಹೊಸ ವರ್ಗವಾದ ಮೈಕ್ರೋಆರ್‌ಎನ್‌ಎಯನ್ನು ಅವರು ಕಂಡುಹಿಡಿದ್ದಾರೆ.