newsics.com
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರು ಆಗಾಗ ಜನರ ಗಮನ ಸೆಳೆಯುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಾರೆ. ಬಾಲಿವುಡ್ ನಲ್ಲಿ ನೆಪೋಟಿಸಂ ಪೋಷಿಸುವ ವ್ಯಕ್ತಿ ಎಂಬ ಕಾರಣಕ್ಕೆ ಕರಣ್ ಜೋಹರ್ ಅವರನ್ನು ಕಂಡರೆ ಬಹುತೇಕರಿಗೆ ಅಸಮಾಧಾನ ಇದೆ. ಈಗ ಕರಣ್ ಜೋಹರ್ ಅವರ ಹೊಸ ಫೋಟೋ ವೈರಲ್ ಆಗಿದೆ. ಆ ಫೋಟೋದಲ್ಲಿ ಅವರು ಸಖತ್ ತೆಳ್ಳಗೆ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ಏನಾದರೂ ಕಾಯಿಲೆ ಇರಬಹುದೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.
ಕಲಾವಿವ ಹರ್ಷ್ ಗುಜ್ರಾಲ್ ಜೊತೆ ಕರಣ್ ಜೋಹರ್ ಅವರು ಫೋಸ್ ನೀಡಿದ್ದಾರೆ. ಈ ಫೋಟೋ ನೋಡಿದ ಬಳಿಕ ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಅನುಮಾನ ಮೂಡುವಂತಿದೆ. ಏನೋ ಅನಾರೋಗ್ಯ ಕಾಡುತ್ತಿರುವುದುದರಿಂದ ಕರಣ್ ಜೋಹರ್ ಇಷ್ಟೊಂದು ಸ್ಲಿಮ್ ಆಗಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ದೇಹದ ತೂಕ ಕಡಿಮೆ ಆಗುತ್ತಿರುವುದಕ್ಕೆ ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಮಾತ್ರವಲ್ಲದೇ ನಿರೂಪಕನಾಗಿಯೂ ಕರಣ್ ಜೋಹರ್ ಅವರು ಫೇಮಸ್ ಆಗಿದ್ದಾರೆ. ‘ಕಾಫಿ ವಿತ್ ಕರಣ್’ ಕಾರ್ಯಕ್ರಮಕ್ಕೆ ಸಖತ್ ಜನಪ್ರಿಯತೆ ಇದೆ.