newsics.com
ಬೆಂಗಳೂರು : ಬಿಗ್ ಬಾಸ್ 11 ನಲ್ಲಿ ಕಿಚ್ಚನ ಪಂಚಾಯ್ತಿ ಫುಲ್ ಡಿಫರೆಂಟಾಗಿದೆ. ಎಷ್ಟೋ ಅಭಿಮಾನಿಗಳ ತಲೆಗೆ ಹುಳವನ್ನೂ ಬಿಟ್ಟಿದೆ. ಅಚ್ಚರಿಯೂ ಎಂದ್ರೆ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದು.
ನವರಾತ್ರಿಯ ಮೂರನೇ ದಿನ ಅಂದ್ರೆ ಶನಿವಾರ ತಾಯಿ ದುರ್ಗೆಯನ್ನ ಚಂದ್ರಘಂಟಾ ಹೆಸರಿನಲ್ಲಿ ಪೂಜಿಸಲಾಗುತ್ತದೆ. ತದಿಗೆಯ ದಿನ ಬರುವ ಈ ತಾಯಿಗೆ ಬೂದು ಬಣ್ಣ ಅಂದ್ರೆ ಅಚ್ಚು ಮೆಚ್ಚು. ಅದೇ ರೀತಿ ಕಿಚ್ಚ ಸುದೀಪ್ ಸಹ ಬೂದು ಬಣ್ಣದ ಸಾಂಪ್ರದಾಯಿಕ ಡ್ರೆಸ್ನಲ್ಲಿ ಕಾಣಿಸಿಕೊಂಡ್ರು. ಇದಕ್ಕೆ ಪೂರಕ ಎನ್ನುವಂತೆ ಬರಿಗಾಲಿನಲ್ಲಿ ಬಿಗ್ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ಹಾಗಾಗಿಯೇ ನವರಾತ್ರಿಯ ಸಂದರ್ಭದಲ್ಲಿ ಸುದೀಪ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಅದೇನಂದ್ರೆ ಸುದೀಪ್ ಕಠಿಣ ವ್ರತಾಚರಣೆಯಲ್ಲಿದ್ದಾರೆ.
ನವರಾತ್ರಿಯ 4ನೇ ದಿನ ಕೂಷ್ಮಾಂಡ ದೇವಿಯ ರೂಪದಲ್ಲಿ ತಾಯಿ ದುರ್ಗೆಯನ್ನು ಆರಾಧಿಸಲಾಗುತ್ತದೆ. ಈ ತಾಯಿಯನ್ನು ಕೇಸರಿ/ಕಿತ್ತಳೆ ಬಣ್ಣದ ವಸ್ತು, ಪದಾರ್ಥಗಳಿಂದ ಪೂಜಿಸುತ್ತಾರೆ. ಕೂಷ್ಮಾಂಡ ದೇವಿಗೆ ಕೇಸರಿ ಬಣ್ಣ ಅಚ್ಚುಮೆಚ್ಚು. ಹಾಗಾಗಿಯೇ ಸುದೀಪ್ ಭಾನುವಾರದ ಡ್ರೆಸ್ ಕೂಡ ಕಿಚ್ಚ ಕಠಿಣ ವ್ರತವನ್ನು ಆಚರಿಸುತ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ನವರಾತ್ರಿ ಸಂದರ್ಭ ಸತತ 9 ದಿನಗಳ ಕಾಲ ಕಟ್ಟುನಿಟ್ಟಿನ ವ್ರತವನ್ನು ಸುದೀಪ್ ಆಚರಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಏನಂದ್ರೆ, ಇದೇ ಮೊದಲ ಸಲ ಸುದೀಪ್ ನವರಾತ್ರಿ ವ್ರತವನ್ನು ಆಚರಿಸುತ್ತಿಲ್ಲ. ಬದಲಾಗಿ 2020ರಿಂದಲೂ ಪ್ರತಿ ನವರಾತ್ರಿಯಲ್ಲಿ ಕಟ್ಟುನಿಟ್ಟಿನ ಏಕಭುಕ್ತಿ ಉಪವಾಸ ವ್ರತವನ್ನ ಆಚರಿಸುತ್ತಾ ಬಂದಿದ್ದಾರೆ.