newsics.com
ಉತ್ತರಪ್ರದೇಶ : ಬ್ಲಾಕ್‌ಮೇಲ್ ಮಾಡುತ್ತಿದ್ದ ಬಾಯ್‌ಫ್ರೆಂಡ್ ಮೇಲೆ ಗೆಳತಿ ಆ್ಯಸಿಡ್ ದಾಳಿ ನಡೆಸಿದ ಘಟನೆ ನಡೆದಿದೆ.ಉತ್ತರ ಪ್ರದೇಶದ ಅಲಿಘಡದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಪ್ರಿಯಕರ ಗಂಭೀರ ಸುಟ್ಟಗಾಯಗಳಿಂದ ಬಳಲಿದ್ದಾನೆ. ಆದರೆ ಆ್ಯಸಿಡ್ ದಾಳಿ ನಡೆದ ಬೆನ್ನಲ್ಲೇ ಪ್ರಿಯಕರ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಇತ್ತ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿವೇಕ್ ಅನ್ನೋ ಯುವಕನ ಜೊತೆ ಮಹಿಳೆಗೆ ಪ್ರೀತಿ ಶುರುವಾಗಿದೆ. ಆದರೆ ಮದುವೆಯಾಗುವ ವಿಚಾರ ಬಂದಾಗ ಮುಂದೂಡಿಕೆ ಮಾಡುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ಇದೀಗ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ಕಳೆದ 6 ತಿಂಗಳಿಂದ ಈತನ ಕಾಟಕ್ಕೆ ಬೇಸತ್ತಿದ್ದೇನೆ. ಹೀಗಾಗಿ ಆತನ ಮುಖದ ಮೇಲೆ ಆ್ಯಸಿಡ್ ದಾಳಿ ಮಾಡಿದ್ದೇನೆ ಎಂದು ಮಹಿಳೆ ಹೇಳಿದ್ದಾರೆ