newsics.com
ಹೈಸ್ಕೂಲ್ ವಿದ್ಯಾರ್ಥಿಗಳಿಬ್ಬರು ಶಾಲೆಗೆ ಹೋಗೋದನ್ನು ಬಿಟ್ಟು ರಾಜಾರೋಷವಾಗಿ ಬೀದಿಯಲ್ಲಿ ಕಿಸ್ಸಿಂಗ್, ಹಗ್ಗಿಂಗ್ ಎನ್ನುತ್ತಾ ರೊಮ್ಯಾನ್ಸ್ ಮಾಡಿದ್ದಾರೆ. ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಓದೋ ವಯಸ್ಸಲ್ಲಿ ಓದೋದು ಬಿಟ್ಟು ಇಲ್ಲಿಬ್ಬರು ವಿದ್ಯಾರ್ಥಿಗಳು ಪ್ರೀತಿ-ಪ್ರೇಮ, ರೊಮ್ಯಾನ್ಸ್ ಅಂತಾ ಕಾಲ ಕಳೆದಿದ್ದಾರೆ. ಈ ಕುರಿತ ವಿಡಿಯೋವನ್ನು MojClips ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಬ್ಬರು ರೊಮ್ಯಾನ್ಸ್ ಮಾಡ್ತಾ ನಿಂತಿರುವ ದೃಶ್ಯವನ್ನು ಕಾಣಬಹುದು. ಶಾಲಾ ಸಮವಸ್ತ್ರ ಹಾಗೂ ಬೆನ್ನಲ್ಲಿ ಬ್ಯಾಗ್ ಧರಿಸಿದ್ದ ವಿದ್ಯಾರ್ಥಿಗಳಿಬ್ಬರು ಶಾಲೆಗೆ ಹೋಗದೆ ಬೀದಿಯ ಮೂಲೆಯಲ್ಲಿ ನಿಂತು ಯಾರು ಇತ್ತ ಕಡೆ ಬರದಿರುವುದನ್ನು ಗಮನಿಸಿ ಕಿಸ್, ಹಗ್ಗಿಂಗ್ ಅಂತ ರೊಮ್ಯಾನ್ಸ್ ಮಾಡುತ್ತಾ ಕಾಲ ಕಳೆದಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ..