newsics.com
ಲಾಯರ್ ಜಗದೀಶ್ ಅವರು ಶಿಶಿರ್ ಶಾಸ್ತ್ರಿಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಮಾತ್ರವಲ್ಲ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಶಿಶಿರ್ ಅವರು ಈಗ ಬಿಗ್ ಬಾಸ್‌ಗೆ ಇವೆಲ್ಲವನ್ನೂ ಟೆಲಿಕಾಸ್ಟ್ ಮಾಡಿ ಎಂದು ಮನವಿ ಮಾಡಿದ್ದಾರೆ. ಲಾಯರ್ ಜಗದೀಶ್ ಕೂಡ ಇದೆಲ್ಲ ಟೆಲಿಕಾಸ್ಟ್ ಅವರು ಮಾಡೋದಲ್ಲ, ನಾನೇ ಹೊರಗೆ ಹೋಗಿ ಪ್ರತಿಯೊಂದು ರಿವೀಲ್ ಮಾಡ್ತೀನಿ. ಬಿಗ್ ಬಾಸ್‌ನ ನಾನು ಸುಮ್ಮನೆ ಬಿಡಲ್ಲ. ಎಂದು ಬಿಗ್ ಬಾಸ್‌ಗೆ ಚಾಲೆಂಜ್ ಹಾಕಿದ್ದಾರೆ,
ಬಿಗ್ ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಆಭರ್ಟ ಹೆಚ್ಚಾಗಿದೆ. ರಂಜಿತ್ ಜತೆ ತುಕಾಲಿ ಮಾನಸಾ ವಿಚಾರವಾಗಿ ಕೂಗಾಡಿದ್ದಾರೆ. ಮಾತ್ರವಲ್ಲ ನನಗೆ ಘನತೆ ಗೌರವ ತುಂಬ ಹೊರಗಡೆ ಚೆನ್ನಾಗಿದೆ. ನನ್ನನ್ನ ಇಲ್ಲಿಂದ ಹೊರಗೆ ಕಳಹಿಸಿ. ನಾನು ಕೂಡ ಮುಂದೆ ಸಿಎಂ ಆಗೋನು ಎಂದು ಕ್ಯಾಮರ ಮುಂದೆ ಕೂಗಿದ್ದಾರೆ .
ಅಷ್ಟೇ ಅಲ್ಲ, ನಾನು ಇಲ್ಲಿ ದುಡ್ಡಿಗಾಗಿ ಬಂದಿಲ್ಲ. ನನ್ನ ಮನೆಯ ನಾಯಿಗೆ ಲಕ್ಷ ಹಣ ಖರ್ಚು ಮಾಡ್ತೇನೆ. ಘನತೆ ಗೌರವ ಕೊಡದೇ ಇಲ್ಲದ ಜಾಗದಲ್ಲಿ ನಾನು ಇರಲ್ಲ. ಇಲ್ಲಿ ನಾನೇ ಗೇಮ್ ಚೇಂಜರ್. ಇಲ್ಲಿ ನಾನೇ ಕಿಂಗ್. ನಾನೇ ಈ ಕಾಡಿನ ರಾಜ ಎಂದು ಅಬ್ಬರಿಸಿದ್ದಾರೆ .
ಇನ್ನು ವೀಕ್ಷಕರು ಕೂಡ ಲಾಯರ್ ಜಗದೀಶ್ ಅವರು ಮನೆಯಲ್ಲಿ ಇರಬಾರದು ಎಂದು ಕಮೆಂಟ್ ಮಾಡುತ್ತಿದ್ದಾರೆ.