newsics.com
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡಗೆ ಇಂದು ಮಹತ್ವದ ದಿನವಾಗಿದೆ.
ಏಕೆಂದರೆ, ಜಾಮೀನಿಗಾಗಿ ಭಕಪಕ್ಷಿಗಳಂತೆ ಕಾಯ್ತಿರೋ ದರ್ಶನ್ ಹಾಗೂ ಪವಿತ್ರಾ ಇಂದು ಏನಾಗುತ್ತೋ ಅನ್ನೋ ಟೆನ್ಷನ್ನಲ್ಲಿದ್ದಾರೆ. ಈಗಾಗಲೇ ಪವಿತ್ರಾ ಗೌಡ ಪರ ವಕೀಲರು ವಾದ ಮಂಡಿಸಿ ಆಗಿದೆ. ಈಗೇನಿದ್ದರೂ ಎಸ್ಪಿಪಿ ಪ್ರತಿವಾದ ಮಂಡಿಸೋದು ಬಾಕಿ ಇದೆ. ಆದರೆ, ದರ್ಶನ್ ವಕೀಲರು ವಾದ ಮಂಡಿಸೋದಕ್ಕೆ ಸಮಯಾವಕಾಶ ಕೇಳಿದ್ದರಿಂದ ಇಂದಿಗೆ ವಿಚಾರಣೆ ಮುಂಡೂಡಲಾಗಿತ್ತು.
ಹೀಗಾಗಿ ಇಂದು ನಡೆಯುವ ಜಾಮೀನು ಅರ್ಜಿ ವಿಚಾರಣೆ ತುಂಬಾನೇ ಮಹತ್ವ ಪಡೆಯಲಿದೆ. ಇದರ ನಡುವೆಯೇ ನಟ ದರ್ಶನ್ ಗೆ ಬೆನ್ನು ನೋವು ಅನ್ನೋದು ನರಕ ತೋರಿಸೋದಕ್ಕೆ ಶುರುವಾಗಿದೆಯಂತೆ. ಜೈಲಿಗೆ ಹೋಗೋದಕ್ಕೂ ಮೊದಲು, ಜಿಮ್ಮು-ಗಿಮ್ಮು ಅಂತಾ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿದ್ದರು.
ಆದರೆ ಜೈಲಿಗೆ ಹೋದ್ಮೇಲೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದೆ. ಆಡಂಬರದ ಜೀವನ ಮರೆಯಾಗಿ, ನರಕ ಸೃಷ್ಟಿಯಾಗಿದೆ. ಹೀಗಾಗಿಯೇ ಬೆನ್ನು ನೋವು ಕಿತ್ಕೊಂಡು ಬರೋದಕ್ಕೆ ಶುರುವಾಗಿದೆ. ಕುಂತ್ರೂ ನಿಂತ್ರೂ ಬೆನ್ನುನೋವು ನಟ ದರ್ಶನ್ ಅವರ ಜೀವ ಹಿಂಡ್ತಿದೆಯಂತೆ. ವಿಮ್ಸ್ ವೈದ್ಯರು ಚಿಕಿತ್ಸೆ ನೀಡಿದ್ದು, ಎಂಆರ್ಐ ಸ್ಕ್ಯಾನ್ ಮಾಡ್ಬೇಕು ಎಂದಿದ್ದಾರಂತೆ.
ಆದರೆ, ದರ್ಶನ್ ಮಾತ್ರ ಎಮ್ಆರ್ಐ ಸ್ಕ್ಯಾನ್ ಬೇಡ, ಬೇಲ್ ಸಿಕ್ಮೇಲೆ ಬೆಂಗಳೂರಲ್ಲೇ ಸ್ಕ್ಯಾನ್ ಮಾಡಿಸ್ತೀನಿ. ಸದ್ಯಕ್ಕೆ ಮಾತ್ರೆಗಳನ್ನ ಮಾತ್ರ ಕೊಡಿ ಅಂತಾ ಹತ್ತು ದಿನಕ್ಕೆ ಬೇಕಾಗುಷ್ಟು ಬೆನ್ನುನೋವಿನ ಮಾತ್ರೆಗಳನ್ನ ಪಡೆದಿದ್ದಾರಂತೆ.