newsics.com
ಬೆಂಗಳೂರು : ಇಲ್ಲೊಬ್ಬ ಆಸಾಮಿ ವಿಚಿತ್ರ ಸಾಹಸವೊಂದಕ್ಕೆ ಕೈ ಹಾಕಿದ್ದು, ಚಪಾತಿಗೆ ಕೆಚಪ್ ಸವರಿ ತಿಂದ ಹಾಗೆ, ಆತ ಚಪಾತಿಗೆ ಸಗಣಿ ಬೆರೆಸಿ ತಿಂದಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಡಿಯೋವನ್ನು Viralvideop ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇವರೊಂದಿಗೆ ಸ್ಪರ್ಧಿಸಲು ಯಾರಾದರೂ ಇದ್ದಾರೆಯೇ” ಎಂಬ ತಮಾಷೆಯ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಪಾತಿಯೊಂದಿಗೆ ಸಗಣಿ ತಿನ್ನುವ ದೃಶ್ಯವನ್ನು ಕಾಣಬಹುದು. ಚಪಾತಿಯನ್ನು ಕೈಯಲ್ಲಿಡಿದು ಸಗಣಿ ಬಳಿ ಕುಳಿತ ಆ ವ್ಯಕ್ತಿ ಹಸಿ ಸಗಣಿಯನ್ನು ಚೆನ್ನಾಗಿ ಚಪಾತಿಗೆ ಬೆರೆಸಿ ನಂತರ ಅದನ್ನು ರೋಲ್ ಮಾಡಿಕೊಂಡು ತಿಂದಿದ್ದಾನೆ.
https://www.instagram.com/reel/DAiB9GXs3Sa/?igsh=MXNtcm1oc2phencydQ==