newsics.com
ಬಿಹಾರ: ಸೇನಾ ಹೆಲಿಕಾಪ್ಟರ್ ನೀರಿಗೆಬಿದ್ದಿರುವ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ. ಸದ್ಯ ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಅಪಘಾತದಲ್ಲಿ ಯಾರಿಗೂ ಯಾವುದೇ ಬಗೆಯ ಸಮಸ್ಯೆಗಳಾಗಿಲ್ಲ.
ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. 29 ಜಿಲ್ಲೆಗಳು ಪ್ರಕೃತಿ ವಿಕೋಪಕ್ಕೆ ಸಿಲುಕಿವೆ. ಮುಜಾಫರ್ಪುರದಲ್ಲಿ ರಕ್ಷಣಾ ಕಾರ್ಯ ಮತ್ತು ಜನರಿಗೆ ಆಹಾರ ಪೊಟ್ಟಣ ವಿತರಿಸಲು ಬಂದಿದ್ದ ಸೇನಾ ಹೆಲಿಕಾಪ್ಟರ್ ಇಂಜಿನ್ ವೈಫಲ್ಯಕ್ಕೀಡಾಗಿದೆ. ತಕ್ಷಣವೇ ಪೈಲಟ್ ನಿಯಂತ್ರಿಸಲು ಯತ್ನಿಸಿದರೂ, ಸಾಧ್ಯವಾಗದೇ ಪ್ರವಾಹದ ನೀರಿನಲ್ಲಿ ಬಿದ್ದಿದೆ. ಇದರಿಂದ ಹೆಲಿಕಾಪ್ಟರ್ ಹಾನಿಗೀಡಾಗಿದೆ.
ಮಾಹಿತಿ ಪಡೆದ ಸ್ಥಳೀಯ ಮುಳುಗುಗಾರರು ಮತ್ತು ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದೆ. ಹೆಲಿಕಾಪ್ಟರ್ನ ಪೈಲಟ್ ಗಾಯಗೊಂಡಿದ್ದು, ಜೊತೆಗಿದ್ದ ಸಿಬ್ಬಂದಿ ಸಣ್ಣಪುಟ್ಟ ಗಾಯಕ್ಕೀಡಾಗಿದ್ದಾರೆ. ಪೈಲಟ್ ಮತ್ತು ಗಾಯಗೊಂಡ ಸೈನಿಕರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.