newsics.com
ನವದೆಹಲಿ : ಡಾಗ್ ಸ್ಪಾದಲ್ಲಿ ಮಹಿಳೆ ಶ್ವಾನದ ಕೂದಲಿನ ಜೊತೆಗೆ ನಾಯಿಯ ನಾಲಗೆಯನ್ನು ಕೂಡ ಕತ್ತರಿಸಿದ್ದಾಳೆ. ಮಧ್ಯ ಪ್ರದೇಶ ಭೋಪಾಲ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಶ್ವಾನದ ಕೂದಲಿನ ಜೊತೆ ನಾಲಗೆಯನ್ನು ಕತ್ತರಿಸಿದ್ದಾಳೆ. ಹೇರ್ ಟ್ರಿಮ್ ಮಾಡುವ ವೇಳೆ ಈ ದುರಂತ ನಡೆದಿದೆ. ಶಿಟ್ಜು ತಳಿಯ ಶ್ವಾನ ಇದಾಗಿದ್ದು, ಇದು ಕುರಿಮರಿಯಂತೆ ಉದ್ಧವಾದ ಕೂದಲನ್ನು ಹೊಂದಿರುತ್ತದೆ. ಈ ಶ್ವಾನದ ಕೂದಲನ್ನು ಕತ್ತರಿಸುವ ಬರದಲ್ಲಿ ಡಾಗ್ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನಾಯಿಯ ನಾಲಗೆ ಕತ್ತರಿಸಿದ್ದು, ಮಾಲೀಕರಿಗೆ ಆಘಾತವುಂಟಾಗಿದೆ. ಘಟನೆಯ ಬಳಿಕ ಮಹಿಳೆ ಪರಾರಿಯಾಗಿದ್ದಾಳೆ.
ಘಟನೆಯ ನಂತರ ಕ್ಷಮೆ ಕೇಳುವ ಬದಲು ಆಕೆಯ ಪತಿ ಶ್ವಾನದ ಮಾಲೀಕರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಲೂನ್ ಮಾಲೀಕರ ವಿರುದ್ಧ ಅಯೋಧ್ಯ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯ ಇನ್‌ಚಾರ್ಜ್ ಮಹೇಶ್ ಲಿಲ್ಲರೆ ಅವರ ಪ್ರಕಾರ, ಈ ಘಟನೆ ಸೆಪ್ಟೆಂಬರ್ 20 ರಂದು ನಡೆದಿದ್ದು, ಶ್ವಾನದ ಮಾಲಕಿ ಸಂಗೀತಾ ತಿವಾರಿ ಹಾಗೂ ಅವರ ಪತಿ 1.5 ವರ್ಷದ ತಮ್ಮ ಶಿಜು ಶ್ವಾನವನ್ನು ನ್ಯೂ ಮಿನಾಲ್ ರೆಸಿಡೆನ್ಸಿಯಲ್ಲಿ ಇದ್ದ ಪರ್ಫೆಕ್ಟ್ ಪಾವ್ಸ್ ಹೆಸರಿನ ಶ್ವಾನದ ಸಲೂನ್‌ಗೆ ಹೇರ್ ಟ್ರಿಮ್‌ಗಾಗಿ ಕರೆದುಕೊಂಡು ಬಂದಿದ್ದರು.
ಸಲೂನ್‌ಗೆ ಬಂದ ಪೊಲೀಸರು ಮಾಲಕಿ ಸೃಷ್ಟಿ ಅವರನ್ನು ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಇದಾದ ನಂತರ ಆಕೆ ಜೈಪುರಕ್ಕೆ ಪರಾರಿಯಾಗಿದ್ದಾಳೆ.