newsics.com
200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಹರಾಜಿನಲ್ಲಿ ಮಾರಾಟವಾಗಿದೆ.
ಹಿಂದಿನ ಕಾಲದಲ್ಲಿ ಕಾಂಡೋಮ್ ಗಳನ್ನು ಕುರಿ, ಹಂದಿ, ಕರು ಮತ್ತು ಮೇಕೆಗಳಂತಹ ಪ್ರಾಣಿಗಳ ಕರುಳಿನಿಂದ ತಯಾರಿಸಲಾಗುತ್ತಿತ್ತು. ಆದ್ದರಿಂದಲೇ ಈ ಕಾಂಡೋಮ್ ಸಾಕಷ್ಟು ದುಬಾರಿ. ಈ ಹಿಂದೆ ಇದನ್ನು ಶ್ರೀಮಂತರು ಮಾತ್ರ ಬಳಸುತ್ತಿದ್ದರು. 19 cm (7 ಇಂಚುಗಳು) ಅಳತೆಯ ಈ ಕಾಂಡೋಮ್ ಅನ್ನು ಫ್ರಾನ್ಸ್‌ನಲ್ಲಿ ಕಂಡುಹಿಡಿಯಲಾಗಿದೆ.
ಹೌದು, 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಅನ್ನು ಇತ್ತೀಚೆಗಷ್ಟೆ ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಎಂದು ಗುರುತಿಸಲಾಗಿದ್ದು, ಇದು £460 ಅಂದರೆ ಅಂದಾಜು ರೂ 44,000 ಗೆ ಮಾರಾಟವಾಗಿದೆ. ಇದು ಆಧುನಿಕ ಲ್ಯಾಟೆಕ್ಸ್ ಕಾಂಡೋಮ್‌ಗಳಿಗಿಂತ ಭಿನ್ನವಾಗಿದ್ದು, ಇದನ್ನು ಕುರಿಗಳ ಕರುಳಿನಿಂದ ತಯಾರಿಸಲಾಗಿದೆ, ಇದಲ್ಲದೇ 18 ನೇ ಅಥವಾ 19 ನೇ ಶತಮಾನದಷ್ಟು ಹಿಂದಿನದು ಎಂದು ವರದಿಯಾಗಿದೆ.