newsics.com
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಂದುವರಿದಿದೆ. ವಿಶ್ವಸಂಸ್ಥೆಯ ಜತೆ ಹಲವು ದೇಶಗಳು ಉಭಯ ರಾಷ್ಟ್ರಗಳ ನಡುವೆ ಸೌಹಾರ್ದ ತರಲು ಪ್ರಯತ್ನ ನಡೆದಿದ್ದರೂ ನಿರೀಕ್ಷಿತ ಯಶ ಸಿಕ್ಕಿಲ್ಲ. ಯುದ್ಧ ಮುಂದುವರಿದಿದೆ.
ಲಕ್ಷ ಲಕ್ಷ ಜನರು ರಷ್ಯಾ ತೊರೆದಿದ್ದಾರೆ. ಹೀಗಾಗಿ, ರಷ್ಯಾದಲ್ಲಿ ಜನನ ಪ್ರಮಾಣವು ಕೆಲವು ತಿಂಗಳುಗಳಿಂದ ಗಣನೀಯವಾಗಿ ಕುಸಿದಿದೆ. ಬೇರೆ ದೇಶಗಳಿಗೆ ಹೋದವರಲ್ಲಿ ಹೆಣ್ಣುಮಕ್ಕಳು, ಹೆಂಗಸರು ಹೆಚ್ಚಿರುವಂತೆಯೂ ಕಾಣುತ್ತಿದೆ.
ರಷ್ಯಾದಲ್ಲಿ ಜನನ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ಪುಟಿನ್ ಅವರು ಚಿಂತೆಗೀಡಾದಂತಿದೆ. ಇದೇ ಕಾರಣಕ್ಕೆ ಅವರು ಕಾಫಿ ಮತ್ತು ಊಟದ ವಿರಾಮದ ಸಮಯದಲ್ಲಿಯೂ ಸಹೋದ್ಯೋಗಿಗಳ ಜತೆ ಲೈಂಗಿಕ ಸಂಪರ್ಕ ಹೊಂದಿ, ಮಕ್ಕಳನ್ನು ಹೊಂದಲು ಸಲಹೆ ನೀಡಿದ್ದಾರೆ.
ರಷ್ಯಾದಲ್ಲಿ ಜನನ ಪ್ರಮಾಣವು 2.1 ಆಗಿರಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ರಷ್ಯಾದಲ್ಲಿ, ಈ ದರವು 1.5 ಕ್ಕಿಂತ ಕಡಿಮೆಯಾಗಿದೆ. ರಷ್ಯಾದ ಆರೋಗ್ಯ ಸಚಿವರು ಈ ಬಗ್ಗೆ ಹೇಳಿಕೆಯನ್ನೂ ನೀಡಿದ್ದಾರೆ. 18 ರಿಂದ 40 ವರ್ಷದೊಳಗಿನ ಮಹಿಳೆಯರು ಗರ್ಭ ಧರಿಸುವ ಸಾಮರ್ಥ್ಯವನ್ನು ನಿರ್ಣಯಿಸಲು ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ಪುಟಿನ್ ಸರ್ಕಾರ ಸೂಚಿಸಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಅಷ್ಟೇ ಅಲ್ಲ, ಅಪ್ಪಿತಪ್ಪಿಯೂ ಗರ್ಭಪಾತ ಮಾಡದಂತೆ ನಿರ್ಬಂಧಗಳನ್ನು ಬಿಗಿಗೊಳಿಸುತ್ತಿದ್ದಾರೆ. ಅದೇ ರೀತಿ ಡಿವೋರ್ಸ್ ಶುಲ್ಕವನ್ನೂ ಸರ್ಕಾರ ಹೆಚ್ಚಿಸಿದೆಯಂತೆ. ಇದೀಗ ಪುಟೀನ್ ಸರ್ಕಾರದ ಈ ನಿಯಮ ಪ್ರಪಂಚದಾದ್ಯಂತ ಸಂಚಲನ ಮೂಡಿಸುತ್ತಿದೆ. ಅಲ್ಲದೆ ಚರ್ಚೆಗೂ ಗ್ರಾಸವಾಗಿದೆ.