newsics.com
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನ ಪತ್ನಿ ವಿಜಯಲಕ್ಷ್ಮಿ ಭೇಟಿಯಾಗಿದ್ದು, ದರ್ಶನ್‌ಗೆ ಒಂದು ಬ್ಯಾಗ್‌ನಲ್ಲಿ ಬಟ್ಟೆ ಹಾಗೂ ಇನ್ನೊಂದು ಬ್ಯಾಗ್‌ನಲ್ಲಿ ಡ್ರೈ ಫ್ರೂಟ್ಸ್ ನೀಡಿದ್ದಾರೆ. ಇದರ ನಡುವೆಯೇ ನಟ ದರ್ಶನ್ ಅವರಿಗೆ ಜೈಲಾಧಿಕಾರಿಗಳು ಗುಡ್ ನ್ಯೂಸ್ ನೀಡಿದ್ದಾರೆ.
ನಟ ಧನ್ನೀರ್ ಜತೆ ವಿಜಯಲಕ್ಷ್ಮಿ ಆಗಮಿಸಿದ್ದರು. ಈ ವೇಳೆ ಆತ್ಮೀಯ ಸ್ನೇಹಿತರಾದ ಧನ್ನೀರ್, ಹೇಮಂತ್ ರನ್ನ ತಬ್ಬಿ ದರ್ಶನ್ ಭಾವುಕರಾಗಿದ್ದರು ಎನ್ನಲಾಗಿದೆ.
ಬಳ್ಳಾರಿ ಜೈಲಲ್ಲಿರುವ ನಟ ದರ್ಶನ್‌ಗೆ ಟಿವಿ ಭಾಗ್ಯ ಸಿಕ್ಕಿದೆ. ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ಟಿವಿ ಅಳವಡಿಸಲಾಗಿದೆ. ಆದ್ರೆ ಕೇವಲ ಡಿಡಿ ಮಾತ್ರ ಬರುತ್ತೆ. ಬೇರೆ ಯಾವುದೇ ಖಾಸಗಿ ಚಾನೆಲ್‌ಗಳ ಸಂಪರ್ಕ ಇಲ್ಲ.
ಇನ್ನು ಟಿವಿ ಬೆನ್ನಲ್ಲೇ ಹಾಸಿಗೆ, ದಿಂಬು, ಪ್ಲಾಸ್ಟಿಕ್ ಚೇರ್‌ಗೂ ದರ್ಶನ್ ಮನವಿ ಮಾಡಿದ್ದು. ಇದಕ್ಕೆ ಕೋರ್ಟ್‌ನಲ್ಲೂ ಮನವಿ ಸಲ್ಲಿಸಿದ್ದಾರೆ. ನಟ ದರ್ಶನ್ ಅವರಿಗೆ ಬೆನ್ನು ನೋವಿದೆ. ಹಾಗಾಗಿ ಹಾಸಿಗೆ, ದಿಂಬು ವ್ಯವಸ್ಥೆಗೆ ಮನವಿ ಮಾಡಿದ್ದರು. ಜೈಲು ಮ್ಯಾನ್ಯುಯೆಲ್‌ನಲ್ಲಿ ಇದ್ದರೆ ಕೊಡ್ತಾರೆ ಅಂತ ಜಡ್ಜ್ ನಿನ್ನೆ ತಿಳಿಸಿದ್ದಾರೆ. ಇಂದು ಪರಿಶೀಲಿಸಿ ಹಾಸಿಗೆ, ದಿಂಬು ಕೊಡುವ ಸಾಧ್ಯತೆ ಇದೆ.
ನಿನ್ನೆ ಸಂಜೆ ಹೈ ಸೆಕ್ಯುರಿಟಿ ಸೆಲ್ ಗೆ ಜೈಲಾಧಿಕಾರಿಗಳು ಟಿವಿ ಆಳವಡಿಸಿದ್ದಾರೆ. ಬಳ್ಳಾರಿ ಜೈಲಿಗೆ ಬಂದಾಗಿನಿಂದಲೂ ನಟ ದರ್ಶನ್ ಅವರು ಟಿವಿಗೆ ಬೇಡಿಕೆಯಿಟ್ಟಿದ್ದರು. ಆದರೆ ಟಿವಿ ಕೆಟ್ಟು ಹೋಗಿದ್ದರಿಂದ ಸೆಲ್ ಗೆ ಆಳವಡಿಸುವುದು ವಿಳಂಬ ಆಗಿತ್ತು.