newsics.com
ನವದೆಹಲಿ : ಭಾರತದ ಕಾರ್ಮಿಕರು ನಿಷ್ಪ್ರಯೋಜನಕರೆನಿಸಿಕೊಂಡು ಇಸ್ರೇಲ್ನಿಂದ ವಾಪಸಾಗುತ್ತಿದ್ದಾರೆ.
ಗಾಜಾ ಯುದ್ಧ ಆರಂಭವಾದ ಬಳಿಕ 1 ಲಕ್ಷಕ್ಕೂ ಅಧಿಕ ಪ್ಯಾಲೆಸ್ತೀನ್ ಕಾರ್ಮಿಕರಿಗೆ ಅಲ್ಲಿ ಕೆಲಸ ಮಾಡದಂತೆ ಇಸ್ರೇಲ್ ನಿರ್ಬಂಧ ಹೇರಿತ್ತು.
ಉತ್ತರ ಪ್ರದೇಶ, ಹರ್ಯಾಣ, ಬಿಹಾರ ಹಾಗೂ ದಕ್ಷಿಣ ಭಾರತದಿಂದ ಸಾವಿರಾರು ಕಟ್ಟಡ ಕಾರ್ಮಿಕರನ್ನು ಅಲ್ಲಿಗೆ ಕಳುಹಿಸಲಾಯಿತು. ಹಮಾಸ್, ಹಿಜ್ಬುಲ್ಲಾ ಮತ್ತು ಇರಾನ್ ದಾಳಿಯ ನಡುವೆ ಭಾರತೀಯ ಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇಸ್ರೇಲ್ಗೆ ಹೋಗಿದ್ದರು.
ಈಗ ಅಲ್ಲಿನ ಉದ್ಯಮಗಳು ಅನೇಕ ಭಾರತೀಯ ಕಾರ್ಮಿಕರ ಕಾರ್ಯಕ್ಷಮತೆಯಿಂದ ಸಂತೋಷವಾಗಿಲ್ಲ. ಇಸ್ರೇಲ್‌ನ ಕೈಗಾರಿಕೋದ್ಯಮಿಗಳು ಈಗ ಚೀನಾದಿಂದ ಕಾರ್ಮಿಕರನ್ನು ಕರೆಸಲು ಆಲೋಚಿಸಿದೆ.