newsics.com
ಬೆಂಗಳೂರು : ಸೌಂದರ್ಯ ಜಗದೀಶ್ ಪವಿತ್ರಾ ಗೌಡಗೆ ಯಾಕೆ ಅಷ್ಟೊಂದು ದುಡ್ಡು ಕಳಿಸಿದ್ರು ಅಂತ ಈ ಹಿಂದೆ ಸುದ್ದಿಯಾಗಿತ್ತು. ಇದೀಗ ಈ ಬಗ್ಗೆ ನಟ ದರ್ಶನ್ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ನಟ ದರ್ಶನ್ ತಮ್ಮ ಹಾಗೂ ಪವಿತ್ರಾ ಗೌಡ ಸಂಬಂಧದ ಬಗ್ಗೆಯೂ ಹೇಳಿದ್ದಾರೆ. 10 ವರ್ಷದಿಂದ ಲಿವಿಂಗ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಹೇಳಿದ್ದಾರೆ. ಇನ್ನೂ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುವಾಗಲೂ ನನ್ನ ಹೆಂಡತಿಗೆ ಮೆಸೇಜ್ ಮಾಡ್ತಿಯಾ ಅಂತ ಕೇಳಿದ್ದರು.
ಸೌಂದರ್ಯ ಜಗದೀಶ್ ಬಳಿ ನಾನು 1 ಕೋಟಿ 75 ಲಕ್ಷ ಸಾಲ ಮಾಡಿ ಪವಿತ್ರಾ ಗೌಡಗೆ ಹೊಸ ಮನೆ ಕೊಡಿಸಿದ್ದೇ, ಇದಾದ ನಂತರ ಸೌಂದರ್ಯ ಜಗದೀಶ್ ಅವರ ಸಾಲವನ್ನು ಕೂಡ ತೀರಿಸಿದ್ದೇನೆ ಎಂದು ನಟ ದರ್ಶನ್ ಹೇಳಿದ್ದಾರೆ.
ನಟ ದರ್ಶನ್ ಮನೆಯಿಂದ ಒಂದೂವರೆ ಕಿಮೀ ಅಂತರದಲ್ಲಿ ಪವಿತ್ರಾ ಗೌಡ ಮನೆ ಇರುವುದಾಗಿಯೂ ಹೇಳಿದ್ದಾರೆ. ನಿರ್ಮಾಪಕ ಸೌಂದರ್ಯ ಜಗದೀಶ್ ಮೃತರಾದಾಗ ಅವರ ಖಾತೆಯಿಂದ ಪವಿತ್ರಾ ಗೌಡಗೆ 1 ಕೋಟಿ 75 ಲಕ್ಷ ಟ್ರ್ಯಾನ್ಸ್‌ಫರ್ ಆಗಿರೋ ಬಗ್ಗೆ ಸುದ್ದಿಯಾಗಿತ್ತು.