Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Special Intensive Revision ಮತದಾರರ ಪಟ್ಟಿ ಪರಿಷ್ಕರಣೆ ಎಡವಟ್ಟು; ಬೆಂಗಳೂರಿಗರಿಗೆ ಬಿಗ್ ಶಾಕ್
ಪ್ರಮುಖಕರ್ನಾಟಕ

Special Intensive Revision ಮತದಾರರ ಪಟ್ಟಿ ಪರಿಷ್ಕರಣೆ ಎಡವಟ್ಟು; ಬೆಂಗಳೂರಿಗರಿಗೆ ಬಿಗ್ ಶಾಕ್

Share
2 Min Read
SHARE

newsics.com | ನ್ಯೂಸಿಕ್ಸ್

ಕರ್ನಾಟಕದ ಇತರೆ ಭಾಗಗಳಲ್ಲಿ ವಿಶೇಷ ಮತದಾರರ ಪಟ್ಟಿ ಸಮಗ್ರ (SIR) ಪರಿಷ್ಕರಣಾ ಕಾರ್ಯವು ಅತ್ಯಂತ ಸರಳವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದೆ. ಆದರೆ, ಮಹಾನಗರ ಬೆಂಗಳೂರಿನಲ್ಲಿ ಮಾತ್ರ ವಿವಿಧ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳಿಂದಾಗಿ ಎಸ್‌ಐಆರ್ ಪ್ರಕ್ರಿಯೆಯು ತೀವ್ರ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಪದೇಪದೆ ವಿಳಾಸ ಬದಲಿಸುವ ಬಾಡಿಗೆದಾರರ ಧೋರಣೆ ಹಾಗೂ ವ್ಯವಸ್ಥೆಯಲ್ಲಿನ ಲೋಪಗಳು ಈ ಸಮಸ್ಯೆಗೆ ಪ್ರಮುಖ ಕಾರಣವಾಗಿವೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜರುಗುತ್ತಿರುವ ಈ ವಿಶೇಷ ಪರಿಷ್ಕರಣೆ ಅಭಿಯಾನದಲ್ಲಿ ಹಲವು ಅಚ್ಚರಿಯ ಪ್ರಕರಣಗಳು ಬೆಳಕಿಗೆ ಬಂದಿವೆ. ಅನೇಕ ಕಡೆಗಳಲ್ಲಿ ಒಂದೇ ಕುಟುಂಬದ ಎಲ್ಲ ಸದಸ್ಯರು ಒಂದೇ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದರೂ, ಕೆಲವರ ಹೆಸರಿನ ಮುಂದೆ ಮಾತ್ರ ‘ಸ್ಥಳಾಂತರಗೊಂಡಿದ್ದಾರೆ’ ಎಂದು ತಪ್ಪು ನಮೂದು ಮಾಡಲಾಗಿದೆ. ಆದರೆ ಅದೇ ಮನೆಯ ಇತರೆ ಸದಸ್ಯರ ಅರ್ಜಿಗಳಲ್ಲಿ ಈ ರೀತಿಯ ಯಾವುದೇ ಮಾಹಿತಿಯಿಲ್ಲದಿರುವುದು ಜನಸಾಮಾನ್ಯರಲ್ಲಿ ಗೊಂದಲ ಹಾಗೂ ಆತಂಕವನ್ನು ಮೂಡಿಸಿದೆ. ಅಲ್ಲದೆ, ಈ ತಾಂತ್ರಿಕ ದೋಷದಿಂದಾಗಿ ಹೊಸದಾಗಿ ಅರ್ಜಿಗಳನ್ನು ಸಲ್ಲಿಸುವುದಕ್ಕೂ ಕೂಡ ತೀವ್ರ ತೊಂದರೆಯುಂಟಾಗಿದೆ ಎಂದು ಮತದಾರರು ದೂರಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಆಧಾರದ ಮೇಲೆ ನೆಲೆಸಿರುವವರು ಆಗಾಗ್ಗೆ ಮನೆ ಬದಲಾಯಿಸುವುದು ಸರ್ವೆಸಾಮಾನ್ಯ. ಈ ಹಿಂದೆ ಬಾಡಿಗೆಯಲ್ಲಿದ್ದು ಈಗ ಬೇರೆಡೆಗೆ ತೆರಳಿರುವವರ ಗಣತಿ ನಮೂನೆಗಳು ಹಳೆಯ ವಿಳಾಸಕ್ಕೇ ತಲುಪುತ್ತಿವೆ. ಅಷ್ಟೇ ಅಲ್ಲದೆ, ಪ್ರಸ್ತುತ ತಾವು ವಾಸಿಸುತ್ತಿರುವ ಸ್ವಂತ ಅಥವಾ ಬಾಡಿಗೆ ಮನೆಯಲ್ಲೇ ಇದ್ದು, ಅಲ್ಲೇ ಗಣತಿ ನಮೂನೆಗಳನ್ನು ಪಡೆದಿದ್ದರೂ ಸಹ ಅನೇಕ ಅರ್ಹ ಮತದಾರರ ಹೆಸರುಗಳನ್ನು ತಪ್ಪಾಗಿ ‘ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲಾಗಿದೆ ಎಂದು ಮತದಾರರು ಹಾಗೂ ಬೂತ್ ಮಟ್ಟದ ಅಧಿಕಾರಿಗಳು (BLO) ಅಳಲು ತೋಡಿಕೊಂಡಿದ್ದಾರೆ.

ಮತದಾರರ ಪಟ್ಟಿಯಲ್ಲಿ ಈ ರೀತಿಯ ಯಡವಟ್ಟುಗಳು ಯಾಕಾಗುತ್ತಿವೆ ಎಂಬ ಬಗ್ಗೆ ಸ್ವತಃ ಬೂತ್ ಮಟ್ಟದ ಅಧಿಕಾರಿಗಳಿಗೂ (BLO) ಸ್ಪಷ್ಟತೆ ಇಲ್ಲ. ತಮಗೆ ಮೇಲಾಧಿಕಾರಿಗಳಿಂದ ಸರಬರಾಜು ಮಾಡಲಾದ ದಾಖಲೆಗಳು ಮತ್ತು ಸೂಚನೆಗಳ ಮೇರೆಗೆ ಮಾತ್ರ ತಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಬಿಎಲ್‌ಒಗಳು ತಿಳಿಸಿದ್ದಾರೆ.

ಕೆಲವು ಬಿಎಲ್‌ಒಗಳ ಪ್ರಕಾರ, 2002 ರಲ್ಲಿದ್ದ ಅಧಿಕೃತ ವಿಳಾಸ ಮತ್ತು 2025 ರ ಪ್ರಸ್ತುತ ವಿಳಾಸ ಒಂದೇ ಆಗಿರದಿದ್ದಲ್ಲಿ, ಅಂತಹ ಮತದಾರರನ್ನು ‘ಸ್ಥಳಾಂತರಗೊಂಡಿದ್ದಾರೆ’ ಎಂದು ಪರಿಗಣಿಸುವಂತೆ ಆದೇಶವಿರಬಹುದು ಎನ್ನಲಾಗಿದೆ. ಇನ್ನು ಕೆಲವು ಅಧಿಕಾರಿಗಳ ವಿಶ್ಲೇಷಣೆಯಂತೆ, ಮತಗಟ್ಟೆಗಳ ಗಡಿಗಳ ಮರುವಿಂಗಡಣೆ ಅಥವಾ ಬದಲಾವಣೆ ಸಂದರ್ಭದಲ್ಲಿ ಒಂದು ನಿರ್ದಿಷ್ಟ ರಸ್ತೆ ಅಥವಾ ಅಪಾರ್ಟ್‌ಮೆಂಟ್ ಅನ್ನು ಬೇರೆ ಮತಗಟ್ಟೆಗೆ ಸೇರಿಸಿರುವುದು ಈ ಸಮಸ್ಯೆಗೆ ಮೂಲ ಕಾರಣವಾಗಿರಬಹುದು. ಹಳೆಯ ಬಿಎಲ್‌ಒ ಹಳೆಯ ಪಟ್ಟಿಯನ್ನು ಪರಿಶೀಲಿಸಿದಾಗ ಅಥವಾ ಹೊಸ ಬಿಎಲ್‌ಒಗೆ ಆ ನಿರ್ದಿಷ್ಟ ಪ್ರದೇಶದ ಮನೆಗಳನ್ನು ಸರಿಯಾಗಿ ಗುರುತಿಸಲು ಕಷ್ಟವಾದಾಗ, ಮತದಾರರನ್ನು ತಪ್ಪಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ದಾಖಲಿಸಿರುವ ಸಾಧ್ಯತೆಯಿದೆ.

ಪರಿಹಾರೋಪಾಯಗಳೇನು?

ಮತದಾರರ ಪಟ್ಟಿಯಲ್ಲಿ ಈ ರೀತಿಯ ಯಾವುದೇ ತಪ್ಪುಗಳು ಅಥವಾ ನಮೂದು ದೋಷಗಳು ಕಂಡುಬಂದಲ್ಲಿ, ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ. ಬದಲಿಗೆ ಕೂಡಲೇ ‘ಫಾರ್ಮ್-8’ (Form-8) ಅನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ತಮ್ಮ ದಾಖಲೆಗಳು ಹಾಗೂ ವಿಳಾಸವನ್ನು ಸರಿಯಾಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದು ಎಂದು ಬಿಎಲ್‌ಒ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

Fire Mishap ಭೀಕರ ಅಗ್ನಿ ಅವಘಡ; ಪಾರ್ಕಿಂಗ್‌ನಲ್ಲಿದ್ದ ನಾಲ್ಕು ಖಾಸಗಿ ಬಸ್‌ಗಳು ಸಂಪೂರ್ಣ ಭಸ್ಮ

TAGGED:#Karnataka #SIR #Bengaluru #news #newsics
Share This Article
Facebook Twitter Copy Link Print
Previous Article Fire Mishap ಭೀಕರ ಅಗ್ನಿ ಅವಘಡ; ಪಾರ್ಕಿಂಗ್‌ನಲ್ಲಿದ್ದ ನಾಲ್ಕು ಖಾಸಗಿ ಬಸ್‌ಗಳು ಸಂಪೂರ್ಣ ಭಸ್ಮ
Next Article Typhoon Noul ನೌಲ್ ಚಂಡಮಾರುತದ ಅಬ್ಬರ; 10 ಸಾವು, 8 ಲಕ್ಷ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

Popular Posts

PM Narendra Modi ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ಮಹತ್ವದ ಹೆಜ್ಜೆ; ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಸಮಿತಿ ರಚನೆ ವಿಡಿಯೋ ನೋಡಿ

1 Min Read

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಂಚಲನ; ಸಚಿವ ಸ್ಥಾನ ಹೋದರೆ ಪಿಂಚಣಿ ಮತ್ತು ಸೌಲಭ್ಯಗಳು ಸಿಗುತ್ತಾ? ಇಲ್ಲಿದೆ ಮಾಹಿತಿ

1 Min Read

Typhoon Noul ನೌಲ್ ಚಂಡಮಾರುತದ ಅಬ್ಬರ; 10 ಸಾವು, 8 ಲಕ್ಷ ಜನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

1 Min Read

Special Intensive Revision ಮತದಾರರ ಪಟ್ಟಿ ಪರಿಷ್ಕರಣೆ ಎಡವಟ್ಟು; ಬೆಂಗಳೂರಿಗರಿಗೆ ಬಿಗ್ ಶಾಕ್

2 Min Read

You Might Also Like

ಪ್ರಮುಖಕರ್ನಾಟಕ

Fire Mishap ಭೀಕರ ಅಗ್ನಿ ಅವಘಡ; ಪಾರ್ಕಿಂಗ್‌ನಲ್ಲಿದ್ದ ನಾಲ್ಕು ಖಾಸಗಿ ಬಸ್‌ಗಳು ಸಂಪೂರ್ಣ ಭಸ್ಮ

1 Min Read
ಪ್ರಮುಖವೈರಲ್

Viral News ಆಕಾಶದಲ್ಲಿ ಹಾರುತ್ತಿದ್ದ ವಿಮಾನದೊಳಗೆ ಹೆಡೆ ಎತ್ತಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು ವಿಡಿಯೋ ನೋಡಿ

2 Min Read
ಪ್ರಮುಖವಿದೇಶ

Odesa Port Attack in Ukraine ಉಕ್ರೇನ್ ಒಡೆಸಾ ಬಂದರಿನಲ್ಲಿ ಕರಾಳ ದಾಳಿ: ವಾಣಿಜ್ಯ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಪ್ರಜೆಗಳು ನಾಪತ್ತೆ

1 Min Read
ಪ್ರಮುಖಆರೋಗ್ಯ

Cardiac Arrest ವಿದ್ಯಾರ್ಥಿಗಳಿಗೆ ಹೃದಯಾಘಾತ ಆತಂಕ; ಪೋಷಕರು ಭಯಪಡಬೇಡಿ ಎಂದ ಪ್ರಮುಖ ಹೃದ್ರೋಗ ತಜ್ಞರು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?