newsics.com | ನ್ಯೂಸಿಕ್ಸ್
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಜಿಮ್ನಾಸ್ಟಿಕ್ಸ್ ಫೈನಲ್ ಪಂದ್ಯದ ವೇಳೆ ಇಂಗ್ಲೆಂಡ್‌ನ ಗೇಬ್ರಿಯಲ್ ಲ್ಯಾಂಗ್ಟನ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಫೈನಲ್‌ನಲ್ಲಿ ಅವರು ಹೈ ಬಾರ್ ಜಿಮ್ನಾಸ್ಟಿಕ್ ನಡೆಸುತ್ತಿದ್ದರು ಈ ವೇಳೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದರು. ಇದರಿಂದ ಅವರ ತಲೆ ಮತ್ತು ಕುತ್ತಿಗೆಗೆ ಭಾಗದಲ್ಲಿ ಗಾಯವಾಗಿದೆ.
ವೈದ್ಯಕೀಯ ತಂಡಗಳು ತಕ್ಷಣ ದೌಡಾಯಿಸಿ ಲ್ಯಾಂಗ್ಟನ್‌ಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿ ನಂತರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯ್ತು. ಲ್ಯಾಂಗ್ಟನ್ ಅವರನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಗಿದ್ದು ಇದು ಯಾವುದೇ ಗಂಭೀರ ಗಾಯಗಳನ್ನು ಬಹಿರಂಗಪಡಿಸಲಿಲ್ಲ. ಟೀಮ್ ಇಂಗ್ಲೆಂಡ್‌ನ ಹೇಳಿಕೆಯ ಪ್ರಕಾರ, “ಗೇಬ್ರಿಯಲ್ ಅವರನ್ನು ಮುಂಜಾಗ್ರತೆಯಿಂದಾಗಿ ರಾತ್ರಿಯಿಡಿ ಆಸ್ಪತ್ರೆಯಲ್ಲೆ ಇರಿಸಲಾಗಿದೆ ಮತ್ತು ಹಲವು ರೀತಿಯ ಸ್ಕ್ಯಾನ್‌ಗಳನ್ನು ನಡೆಸಲಾಯಿತು, ರಿಪೋರ್ಟ್ನಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಎಂಬುದು ಬಹಿರಂಗವಾಗಿದೆ.
ಅದೃಷ್ಟವಶಾತ್, ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿಲ್ಲ ಮತ್ತು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಅವರನ್ನು ನೇರವಾಗಿ ನಮ್ಮ ತಂಡದ ಕ್ರೀಡಾಪಟುಗಳು ತಂಗಿರುವ ಹೋಟೆಲ್‌ಗೆ ವರ್ಗಾಯಿಸಲಾಗುವುದು. ತಕ್ಷಣ ಪ್ರತಿಕ್ರಿಯಿಸಿದ ವೈದ್ಯಕೀಯ ತಂಡಗಳಿಗೆ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳಿದೆ.
ಈ ಘಟನೆಯಿಂದಾಗಿ ಸುಮಾರು 20 ನಿಮಿಷಗಳ ಕಾಲ ಆಟ ಸ್ಥಗಿತಗೊಂಡಿತು, ಇತರ ತಂಡಗಳ ಕ್ರೀಡಾಪಟುಗಳು ಆತಂಕಗೊಂಡಿದ್ದರು. ಲ್ಯಾಂಗ್ಟನ್ ಅವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಿದ ನಂತರ ಸ್ಪರ್ಧೆ ಪುನರಾರಂಭವಾಗುವ ಮೊದಲು ಜಿಮ್ನಾಸ್ಟ್‌ಗಳಿಗೆ ಮತ್ತೊಂದು ಅಭ್ಯಾಸ ಅವಧಿಯನ್ನು ನೀಡಲಾಯಿತು.
🚨NEWS: English gymnast Gabriel Langton has been rushed to hospital after suffering a major fall during the Commonwealth Games pic.twitter.com/bXsMusO5fF
— Basil the Great (@BasilTheGreat) July 25, 2026
BUCK MOON ಅಪರೂಪದ ಖಗೋಳ ವಿಸ್ಮಯ: ಜುಲೈ 29ಕ್ಕೆ ಆಕರ್ಷಕ ‘ಬಕ್ ಮೂನ್’ ಪ್ರತ್ಯಕ್ಷ!