Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ
ಪ್ರಮುಖದೇಶ

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

Share
2 Min Read
SHARE

newsics.com | ನ್ಯೂಸಿಕ್ಸ್

Contents
ನಡೆದಿದ್ದೇನು?ಹಿಂದೆಯೂ ನಡೆದಿತ್ತು ಇಂತಹ ಘಟನೆಗಳು

ಹೈದರಾಬಾದ್: ಹೈದರಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನವೊಂದು (BA276) ಆಕಾಶದ ಮಧ್ಯದಲ್ಲಿದ್ದಾಗ ಭಾರೀ ಆತಂಕದ ಕ್ಷಣಗಳಿಗೆ ಸಾಕ್ಷಿಯಾಗಿದೆ. ವಿಮಾನವು ಬರೋಬ್ಬರಿ 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ, ಅದನ್ನು ನಿಯಂತ್ರಿಸುತ್ತಿದ್ದ ಮೂವರು ಪೈಲಟ್‌ಗಳ ಆರೋಗ್ಯ ಏಕಾಏಕಿ ಹದಗೆಟ್ಟಿರುವ ಘಟನೆ ನಡೆದಿದೆ.

 

ನಡೆದಿದ್ದೇನು?

ಹಾರಾಟದ ಮಧ್ಯೆ ಮುಖ್ಯ ಪೈಲಟ್‌ಗೆ ತೀವ್ರ ನಿತ್ರಾಣ ಕಾಣಿಸಿಕೊಂಡು, ವಿಮಾನ ಮುನ್ನಡೆಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಯಿತು. ಕೂಡಲೇ ಎಚ್ಚೆತ್ತ ಉಳಿದಿಬ್ಬರು ಸಹ-ಪೈಲಟ್‌ಗಳು ವಿಮಾನದ ಕಂಟ್ರೋಲ್ ತೆಗೆದುಕೊಂಡರು. ಆದರೆ ದುರಾದೃಷ್ಟವಶಾತ್, ಮುಂದಿನ ಕೆಲವು ನಿಮಿಷಗಳಲ್ಲೇ ಆ ಇಬ್ಬರಿಗೂ ಆರೋಗ್ಯದಲ್ಲಿ ಏರುಪೇರಾಗಲು ಶುರುವಾಯಿತು. ಇಂತಹ ಪ್ರಾಣಸಂಕಟದ ನಡುವೆಯೂ ಎದೆಗುಂದದ ಪೈಲಟ್‌ಗಳು, ತಮ್ಮ ಸಮಯಪ್ರಜ್ಞೆ ಬಳಸಿ ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.

ಸದ್ಯ ಮೂವರೂ ಪೈಲಟ್‌ಗಳಿಗೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ಈ ದಿಢೀರ್ ಅನಾರೋಗ್ಯಕ್ಕೆ ಪೈಲಟ್‌ಗಳು ಸೇವಿಸಿದ ಆಹಾರವೇ ಕಾರಣ ಎನ್ನಲಾಗುತ್ತಿದೆ. ಹೈದರಾಬಾದ್‌ನಿಂದ ಟೇಕ್-ಆಫ್ ಆಗುವ ಮುನ್ನ, ಈ ಮೂವರೂ ಸಿಬ್ಬಂದಿ ತಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಒಟ್ಟಿಗೆ ಉಪಹಾರ ಮುಗಿಸಿದ್ದರು. ಅಲ್ಲದೆ, ಹೊರಗಿನಿಂದ ಸರಬರಾಜಾಗಿದ್ದ ಬಾಟಲಿ ನೀರನ್ನು ಕುಡಿದಿದ್ದರು. ಇದೇ ಅವರ ಫುಡ್ ಪಾಯ್ಸನಿಂಗ್‌ಗೆ (ಆಹಾರದ ನಂಜು) ಕಾರಣವಾಗಿರಬಹುದು ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.

“ನಮ್ಮ ಸಿಬ್ಬಂದಿಯ ಆರೋಗ್ಯ ಮತ್ತು ಭದ್ರತೆಯೇ ನಮಗೆ ಅಂತಿಮ. ಹೈದರಾಬಾದ್‌ನ ಹೋಟೆಲ್‌ನಲ್ಲಿ ನೀಡಲಾದ ಆಹಾರದ ಗುಣಮಟ್ಟದ ಬಗ್ಗೆ ನಾವು ಸಮಗ್ರ ತನಿಖೆ ನಡೆಸುತ್ತಿದ್ದೇವೆ” ಎಂದು ಬ್ರಿಟಿಷ್ ಏರ್‌ವೇಸ್‌ ಸ್ಪಷ್ಟಪಡಿಸಿದೆ. ಘಟನೆಯ ನಿಖರ ಕಾರಣ ತಿಳಿಯಲು ಪೈಲಟ್‌ಗಳ ರಕ್ತದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ.

ವಿಮಾನಯಾನದ ಸುರಕ್ಷತಾ ನಿಯಮಾವಳಿಗಳ ಪ್ರಕಾರ, ಒಂದೇ ವಿಮಾನವನ್ನು ಮುನ್ನಡೆಸುವ ಪೈಲಟ್‌ಗಳಿಗೆ ಒಂದೇ ರೀತಿಯ ಊಟವನ್ನು ಬಡಿಸುವಂತಿಲ್ಲ. ಒಬ್ಬರು ತಿಂದ ಆಹಾರದಿಂದ ತೊಂದರೆಯಾದರೆ, ಮತ್ತೊಬ್ಬರು ವಿಮಾನವನ್ನು ರಕ್ಷಿಸಲಿ ಎಂಬುದು ಇದರ ಹಿಂದಿನ ಉದ್ದೇಶ. ಆದರೆ, ಹಾರಾಟಕ್ಕೂ ಮುನ್ನ ಎಲ್ಲರೂ ಹೋಟೆಲ್‌ನಲ್ಲಿ ಒಂದೇ ಕಡೆ ಕುಳಿತು ತಿಂದಿದ್ದೇ ಈ ಅಪರೂಪದ ಅವಘಡಕ್ಕೆ ಕಾರಣವಾಗಿದೆ.

ಹಿಂದೆಯೂ ನಡೆದಿತ್ತು ಇಂತಹ ಘಟನೆಗಳು

  • 1984 (ಬ್ರಿಟಿಷ್ ಏರ್‌ವೇಸ್): ಇದೇ ಸಂಸ್ಥೆಯ ವಿಮಾನದಲ್ಲಿ ಹಿಂದೆ ಒಮ್ಮೆ ಆಹಾರ ವಿಷವಾಗಿ 1,000ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
  • 2024 (ಯುನೈಟೆಡ್ ಏರ್‌ಲೈನ್ಸ್): ದಕ್ಷಿಣ ಕೊರಿಯಾದಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ಪೈಲಟ್‌ಗಳು ಅಸ್ವಸ್ಥರಾದ ಕಾರಣ, ವಿಮಾನವನ್ನು ಅರ್ಧ ದಾರಿಯಲ್ಲೇ ವಾಪಸ್ ತರಲಾಗಿತ್ತು.

 

Mansoon Updats ISRO ಉಪಗ್ರಹ ಸೆರೆಹಿಡಿದ ಅಪರೂಪದ ಚಿತ್ರ; ಭಾರತದ 95% ಭಾಗ ದಟ್ಟ ಮಳೆಮೋಡಗಳ ಹೊದಿಕೆಯಲ್ಲಿ, ಮುಂಗಾರು ಮತ್ತಷ್ಟು ಬಿರುಸು

TAGGED:#hyderabad #london #british airways #news #newsics
Share This Article
Facebook Twitter Copy Link Print
Previous Article Mansoon Updats ISRO ಉಪಗ್ರಹ ಸೆರೆಹಿಡಿದ ಅಪರೂಪದ ಚಿತ್ರ; ಭಾರತದ 95% ಭಾಗ ದಟ್ಟ ಮಳೆಮೋಡಗಳ ಹೊದಿಕೆಯಲ್ಲಿ, ಮುಂಗಾರು ಮತ್ತಷ್ಟು ಬಿರುಸು
Next Article Cabinet Expansion ಕರ್ನಾಟಕ ಕಾಂಗ್ರೆಸ್‌ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? ಇಲ್ಲಿದೆ ಮಾಹಿತಿ

Popular Posts

Cabinet Expansion ಕರ್ನಾಟಕ ಕಾಂಗ್ರೆಸ್‌ ಸಂಪುಟ ಸರ್ಜರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್? ಯಾರಿಗೆ ಸಿಗಲಿದೆ ಮಂತ್ರಿಗಿರಿ? ಇಲ್ಲಿದೆ ಮಾಹಿತಿ

2 Min Read

British Airways ಮೂವರೂ ಪೈಲಟ್‌ಗಳು ಅಸ್ವಸ್ಥ; 30,000 ಅಡಿ ಎತ್ತರದಲ್ಲಿ ಬ್ರಿಟಿಷ್ ಏರ್‌ವೇಸ್ ವಿಮಾನಕ್ಕೆ ಎದುರಾಯ್ತು ಭಾರೀ ದುರಂತ

2 Min Read

Mansoon Updats ISRO ಉಪಗ್ರಹ ಸೆರೆಹಿಡಿದ ಅಪರೂಪದ ಚಿತ್ರ; ಭಾರತದ 95% ಭಾಗ ದಟ್ಟ ಮಳೆಮೋಡಗಳ ಹೊದಿಕೆಯಲ್ಲಿ, ಮುಂಗಾರು ಮತ್ತಷ್ಟು ಬಿರುಸು

2 Min Read

CWG 2026: ಲವ್ಲಿನಾ ಬೊರ್ಗೊಹೈನ್‌ಗೆ ಭಾರತದ ಮೊದಲ ಪದಕ ಖಚಿತ

2 Min Read

You Might Also Like

ದೇಶ

Election Commission SIR Updates ಕರ್ನಾಟಕದಲ್ಲಿ 52.97 ಲಕ್ಷ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ

3 Min Read
ದೇಶಅನಾವರಣ

Today Gold Rate ಬೆಂಗಳೂರು ಚಿನ್ನದ ದರ ಇಂದು (ಜುಲೈ 24): ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ

2 Min Read
ಕರ್ನಾಟಕಪ್ರಮುಖ

Highcourt order ಮನೆ ಖರ್ಚಿಗೆ 5 ಸಾವಿರ ರೂ. ಕೇಳಿದ ವೃದ್ಧ ಪತ್ನಿ‌ ಮೇಲೆ ಹಲ್ಲೆ: ತಿಂಗಳಿಗೆ ಹತ್ತು ಸಾವಿರ ನೀಡಲು ಪತಿಗೆ ಹೈಕೋರ್ಟ್ ಆದೇಶ!

2 Min Read
ಕರ್ನಾಟಕದೇಶ

Kaveri River Issue | ಡಿಕೆ ಶಿವಕುಮಾರ್-ತಮಿಳುನಾಡು ಸಿಎಂ ವಿಜಯ್ ಭೇಟಿ ದಿನಾಂಕ ನಿಗದಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?