Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

Share
2 Min Read
SHARE

newsics.com | ನ್ಯೂಸಿಕ್ಸ್

ಮದುವೆ, ಹಬ್ಬ-ಹರಿದಿನಗಳು ಅಥವಾ ವಿಶೇಷ ಸಮಾರಂಭಗಳಲ್ಲಿ ಧರಿಸುವ ಚಿನ್ನದ ಆಭರಣಗಳು ಪ್ರತಿಯೊಬ್ಬರಿಗೂ ಅಮೂಲ್ಯವಾದ ಸಂಪತ್ತು. ಆದರೆ ನಿರಂತರ ಬಳಕೆ, ಧೂಳು, ಬೆವರು ಮತ್ತು ಮೇಕಪ್ ಉತ್ಪನ್ನಗಳ ಸಂಪರ್ಕದಿಂದಾಗಿ ಕಾಲಕ್ರಮೇಣ ಆಭರಣಗಳು ತಮ್ಮ ನೈಸರ್ಗಿಕ ಕಾಂತಿಯನ್ನು ಕಳೆದುಕೊಳ್ಳುತ್ತವೆ. ಚಿನ್ನದ ಆಭರಣಗಳಿಗೆ ಮತ್ತೆ ಹೊಸತನದ ಹೊಳಪು ನೀಡಲು ಪ್ರತಿ ಬಾರಿಯೂ ಜ್ಯುವೆಲ್ಲರಿ ಶೋರೂಂಗಳಿಗೆ ಅಲೆಯಬೇಕಿಲ್ಲ, ನಮ್ಮ ಮನೆಯಲ್ಲೇ ಲಭ್ಯವಿರುವ ಕೆಲವು ಸರಳ ವಸ್ತುಗಳಿಂದಲೇ ಸುರಕ್ಷಿತವಾಗಿ ಸ್ವಚ್ಛಗೊಳಿಸಬಹುದು.

 

 

ಆಭರಣಗಳನ್ನು ಸ್ವಚ್ಛಗೊಳಿಸಲು ಅತ್ಯಂತ ಸುರಕ್ಷಿತ ವಿಧಾನವೆಂದರೆ ಉಗುರುಬೆಚ್ಚಗಿನ ನೀರಿಗೆ ಕೆಲವು ಹನಿ ಮೃದುವಾದ ಲಿಕ್ವಿಡ್ ಸೋಪ್ ಸೇರಿಸಿ 15 ರಿಂದ 20 ನಿಮಿಷ ನೆನೆಸಿಡುವುದು. ನಂತರ ಮೃದುವಾದ ಟೂತ್‌ಬ್ರಶ್‌ನಿಂದ ಸಾಫ್ಟ್ ಆಗಿ ಉಜ್ಜಿ, ಶುದ್ಧ ನೀರಿನಲ್ಲಿ ತೊಳೆದು ಒಣ ಬಟ್ಟೆಯಿಂದ ಒರೆಸಿದರೆ ಕೊಳೆ ಸುಲಭವಾಗಿ ಮಾಯವಾಗುತ್ತದೆ.

ಆಭರಣದ ಮೇಲೆ ಗಟ್ಟಿಯಾದ ಕಲೆಗಳಿದ್ದರೆ ಒಂದು ಚಮಚ ಬೇಕಿಂಗ್ ಸೋಡಾಕ್ಕೆ ನೀರು ಬೆರೆಸಿ ಪೇಸ್ಟ್ ಮಾಡಿ ಹಚ್ಚಿ, ಎರಡು-ಮೂರು ನಿಮಿಷಗಳ ನಂತರ ತೊಳೆಯಬಹುದು. ಆದರೆ ಈ ಬೇಕಿಂಗ್ ಸೋಡಾ ವಿಧಾನವನ್ನು ಮುತ್ತು, ಪಚ್ಚೆ ಅಥವಾ ರತ್ನಗಳಿರುವ ಆಭರಣಗಳಿಗೆ ಬಳಸಬಾರದು. ಕೆಲವೊಮ್ಮೆ ನಾನ್-ಜೆಲ್ ಟೂತ್‌ಪೇಸ್ಟ್ ಹಚ್ಚಿ ನಯವಾಗಿ ಉಜ್ಜುವುದರಿಂದಲೂ ಸಣ್ಣಪುಟ್ಟ ಕಲೆಗಳು ನಿವಾರಣೆಯಾಗುತ್ತವೆ. ತೀರಾ ಹಳೆಯ ಕಲೆಗಳಿದ್ದಾಗ ಒಂದು ಭಾಗ ಅಮೋನಿಯಾಕ್ಕೆ ಆರು ಭಾಗ ನೀರು ಸೇರಿಸಿ, ಗರಿಷ್ಠ ಒಂದು ನಿಮಿಷ ಮಾತ್ರ ಮುಳುಗಿಸಿ ತಕ್ಷಣ ತೊಳೆಯಬಹುದು, ಆದರೆ ಈ ವಿಧಾನವನ್ನು ಪದೇ ಪದೇ ಬಳಸಿದರೆ ಆಭರಣದ ಫಿನಿಷಿಂಗ್ ಹಾಳಾಗುವ ಸಾಧ್ಯತೆ ಇರುತ್ತದೆ.

ಚಿನ್ನದ ಆಭರಣಗಳನ್ನು ಸ್ವಚ್ಛಗೊಳಿಸುವಾಗ ಗಟ್ಟಿ ಬ್ರಶ್, ಬ್ಲೀಚ್, ಆಮ್ಲ ಅಥವಾ ಪ್ರಬಲ ರಾಸಾಯನಿಕ ಕ್ಲೀನರ್‌ಗಳನ್ನು ಎಂದಿಗೂ ಬಳಸಬಾರದು. ವಜ್ರ ಹಾಗೂ ರತ್ನ ಖಚಿತ ಆಭರಣಗಳಿಗೆ ಮನೆಮದ್ದು ಪ್ರಯೋಗಿಸುವ ಮುನ್ನ ಜ್ಯುವೆಲ್ಲರ್ ಸಲಹೆ ಪಡೆಯುವುದು ಸೂಕ್ತ. ಸ್ವಚ್ಛಗೊಳಿಸಿದ ನಂತರ ಆಭರಣಗಳು ಪೂರ್ತಿಯಾಗಿ ಒಣಗಿದ ಮೇಲಷ್ಟೇ ಪೌಚ್ ಅಥವಾ ಬಾಕ್ಸ್‌ನಲ್ಲಿ ಶೇಖರಿಸಿಡಬೇಕು. ಆಭರಣಗಳ ಕಾಂತಿ ಹೆಚ್ಚು ದಿನ ಉಳಿಯಲು ಪರ್ಫ್ಯೂಮ್, ಮೇಕಪ್ ಅಥವಾ ಹೇರ್ ಸ್ಪ್ರೇ ಬಳಸಿದ ನಂತರವೇ ಅವುಗಳನ್ನು ಧರಿಸಬೇಕು. ಸ್ನಾನ ಮಾಡುವಾಗ ಹಾಗೂ ಈಜುಕೊಳಕ್ಕೆ ಇಳಿಯುವ ಮುನ್ನ ಆಭರಣಗಳನ್ನು ತೆಗೆದಿಡುವುದು ಒಳ್ಳೆಯದು.

ಗೀರು ಬೀಳುವುದನ್ನು ತಪ್ಪಿಸಲು ಪ್ರತಿಯೊಂದು ಆಭರಣವನ್ನು ಪ್ರತ್ಯೇಕ ಮೃದು ಬಟ್ಟೆ ಅಥವಾ ಪೌಚ್‌ನಲ್ಲಿಟ್ಟು, ಆಗಾಗ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ ಇಟ್ಟರೆ ಚಿನ್ನದ ಆಭರಣಗಳು ನಿರಂತರವಾಗಿ ಹೊಸದರಂತೆ ಹೊಳೆಯುತ್ತವೆ.

 

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

TAGGED:#Gold #Cleaning hacks #Home tips #news #newsics
Share This Article
Facebook Twitter Copy Link Print
Previous Article Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್
Next Article Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

Popular Posts

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read
ಕರ್ನಾಟಕಪ್ರಮುಖ

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read
ಕರ್ನಾಟಕದೇಶಪ್ರಮುಖ

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read
ಪ್ರಮುಖದೇಶ

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?