newsics.com
ಬೀದರ್: ಭಾರತೀಯ ವಾಯುಪಡೆಯು ಸೂರ್ಯಕಿರಣ ಏರೋಬ್ಯಾಟಿಕ್ ಟೀಂನಿಂದ ಬೀದರ ಕೋಟೆಯ ಮೇಲೆ ಶುಕ್ರವಾರ ಆಕರ್ಷಕ ಏರ್ ಶೋ ನಡೆಯಿತು.ಸೂರ್ಯಕಿರಣ ಟೀಂ ಲೀಡರ್ ಗ್ರೂಪ್ ಕ್ಯಾಪ್ಟನ್ ಗುರುಪ್ರೀತ್‌ಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9 ಸೂರ್ಯಕಿರಣ ವಿಮಾನಗಳು ವಿವಿಧ ರೀತಿಯಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿದವು.
ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ. ಪರಸ್ಪರ ಒಂದನ್ನೊಂದು ಎದುರಿಗೆ ಕ್ರಾಸಿಂಗ್, ಬ್ಯಾರಲ್ ರೋಲ್, ರಾಷ್ಟ್ರೀಯ ಧ್ವಜ ಕೇಸರಿ, ಬಿಳಿ, ಹಸಿರು ಬಣ್ಣಗಳು ಹಾಗೂ ಹೃದಯದ ಚಿತ್ರಗಳನ್ನು ಬಿಡಿಸುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿದವು.
ಆಕಾಶದಲ್ಲಿ ಬಗೆಬಗೆಯ ಚಿತ್ತಾರಗಳನ್ನು ಮೂಡಿಸಿದವು. 1996 ರಲ್ಲಿ ಆರಂಭಿಸಲಾದ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ ವಿಮಾನಗಳು ಇಲ್ಲಿಯವರೆಗೆ ಭಾರತ ಮಾತ್ರವಲ್ಲದೆ ಶ್ರೀಲಂಕಾ, ಸಿಂಗಾಪುರ್, ದುಬೈ ಸೇರಿದಂತೆ ಇತರೆ ದೇಶಗಳಲ್ಲಿ 600 ಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿವೆ.
9 ವಿಮಾನಗಳ ಈ ಏರಕ್ರಾಪ್ಟ್ ಟೀಂ ಇಡೀ ಏಷ್ಯಾ ಖಂಡದಲ್ಲಿಯೆ ಭಾರತದಲ್ಲಿ ಮಾತ್ರ ಇರುವುದು. ಶನಿವಾರವೂ ಬೀದರ ಕೋಟೆಯ ಮೇಲೆ ಏರ್ ಶೋ ಕಾರ್ಯಕ್ರಮ ನಡೆಯಲಿದೆ.https://www.newsics.com/2024/08/30/a-girl-thinks-like-a-boys-first-touch/https://www.newsics.com/2024/08/30/caste-abuse-allegation-lawyer-jagdish-arrested/https://www.newsics.com/2024/08/30/the-chinese-eye-of-the-moon-if-you-tell-this-project-you-will-be-shocked/
ರೋಮಾಂಚನಗೊಳಿಸಿದ ಏರೋ ಶೋ… ಬಾನಲ್ಲಿ ಸೂರ್ಯಕಿರಣ ಚಮತ್ಕಾರ