newsics.com
ಲೈಂಗಿಕತೆ ಎಂಬುದು ಜೀವನದ ಒಂದು ಅವಿಭಾಜ್ಯ ವಿಷಯವಾಗಿದೆ. ಹೆಚ್ಚಿನ ದಂಪತಿಗಳಲ್ಲಿ ಲೈಂಗಿಕತೆಯು ಸರಾಸರಿ 5 ರಿಂದ 13 ನಿಮಿಷಗಳವರೆಗೆ ಇರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಆದರೆ ಇಲ್ಲಿ ಸಮಯ ಮುಖ್ಯವಾಗಿರುವುದಿಲ್ಲ ಬದಲಾಗಿ ನೀವು ನಿಮ್ಮ ಸಂಗಾತಿಯ ಜೊತೆಗೆ ಎಷ್ಟು ತೃಪ್ತರಾಗಿದ್ದಾರೆ ಎಂಬುದು ಮುಖ್ಯವಾಗುತ್ತದೆ.
ಕೆಲವೊಮ್ಮೆ ಸಂಭೋಗದ ಸಮಯ ಕೆಲವೇ ನಿಮಿಷಗಳಲ್ಲಿ ಮುಗಿಯಬಹುದು. ಇನ್ನೂ ಕೆಲವೊಮ್ಮೆ ಸಂಭೋಗದ ಸಮಯ ಅರ್ಧ ಗಂಟೆಗೂ ಹೆಚ್ಚು ಕಾಲ ಎಳೆಯಬಹುದು ಆದ್ರೆ ಇಲ್ಲಿ ಸಂಗಾತಿಯ ತೃಪ್ತಿ ಬಹಳ ಮುಖ್ಯವಾಗುತ್ತದೆ.
ಕೆಲವರ ಸಂಭೋಗದ ಸಮಯ 3 ರಿಂದ 13 ನಿಮಿಷಗಳ ವ್ಯಾಪ್ತಿ ಸಾಮಾನ್ಯವಾಗಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಆದರೆ ಇದರ ಹೊರತಾಗಿಯೂ ಸಂಭೋಗದ ಸಂದರ್ಭದಲ್ಲಿ ಚುಂಬನ, ಸ್ಪರ್ಶಿಸುವುದು ಮತ್ತು ಮೌಖಿಕ ಸಂಭೋಗದಂತಹ ಕ್ರಿಯೆಗಳಿಂದ ಸಂಭೋಗದ ಸಮಯವನ್ನು 5-15 ನಿಮಿಷಗಳ ವರೆಗೆ ಹೆಚ್ಚಿಸಬಹುದು.
ಇನ್ನೂ ನಿಮ್ಮ ಲೈಂಕಿಗತೆಯ ಸಂದರ್ಭದಲ್ಲಿ ಪರಸ್ಪರ ಹಸ್ತಮೈಥುನ ಅಥವಾ ಇಂದ್ರಿಯ ಮಸಾಜ್‌ನಂತಹ ಇತರೆ ಆಕ್ಟಿವಿಟಿಸ್ ಮಾಡುವುದರಿಂದ ನಿಮ್ಮ ಲೈಂಗಿಕತೆಯ ಸಮಯವನ್ನು 10 ರಿಂದ 30 ನಿಮಿಷಗಳವರೆಗೆ ಹೆಚ್ಚಿಸಿಕೊಳ್ಳಬಹುದು. ನಿಮ್ಮ ಸಂಗಾತಿಗೆ ಯಾವ ರೀತಿಯ ಲೈಂಕಿಗತೆ ಹೆಚ್ಚು ಆನಂದ ಉಂಟುಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಲೈಂಗಿಕತೆಗೆ ಕೆಲವು ಗಂಟೆಗಳ ಮೊದಲು ಹಸ್ತಮೈಥುನ ಮಾಡುವುದರಿಂದ ನೀವು ಹೆಚ್ಚು ಕಾಲ ಲೈಂಗಿಕ ಕ್ರೀಯೆಯಲ್ಲಿ ಉಳಿಯಬಹುದು. ಲೈಂಗಿಕತೆಯ ಸಂದರ್ಭದಲ್ಲಿ ಆಗಾಗ ಸ್ಥಾನಗಳನ್ನು ಬದಲಾಯಿಸುವುದು ನಿಮ್ಮನ್ನು ಹೆಚ್ಚು ಕಾಲ ಸಂಭೋಗದಲ್ಲಿ ಉಳಿಯುವಂತೆ ಮಾಡುತ್ತದೆ.
ಕಾಂಡೋಮ್‌ಗಳು ಸಂವೇದನೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡುತ್ತದೆ ಅದು ನಿಮಗೆ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ. ನೆನಪಿಡಿ, ಪ್ರತಿಯೊಬ್ಬ ವ್ಯಕ್ತಿಯ ದೇಹ ಮತ್ತು ಅಗತ್ಯಗಳು ವಿಭಿನ್ನವಾಗಿವೆ. ಒಂದು ನಿರ್ದಿಷ್ಟ ರೀತಿಯಲ್ಲಿ ಅಥವಾ ನಿರ್ದಿಷ್ಟ ಸಮಯದವರೆಗೆ ಕಾರ್ಯನಿರ್ವಹಿಸಲು ನಿಮ್ಮ ಅಥವಾ ನಿಮ್ಮ ಸಂಗಾತಿಯ ಮೇಲೆ ಒತ್ತಡ ಹೇರುವ ಬದಲು ಅನ್ಯೋನ್ಯತೆ, ಸಂವಹನ ಮತ್ತು ಪರಸ್ಪರ ಸಂತೋಷದ ಮೇಲೆ ಕೇಂದ್ರೀಕರಿಸಿ.