Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Ram Mandir ರಾಮಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್ ಗುಡ್‌ಬೈ? ಕಳಂಕ ಹೊತ್ತು ಹುದ್ದೆಯಲ್ಲಿರಲ್ಲ ಎಂದು ಆಪ್ತರ ಮುಂದೆ ಅಳಲು!
ಪ್ರಮುಖCrimeದೇಶ

Ram Mandir ರಾಮಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್ ಗುಡ್‌ಬೈ? ಕಳಂಕ ಹೊತ್ತು ಹುದ್ದೆಯಲ್ಲಿರಲ್ಲ ಎಂದು ಆಪ್ತರ ಮುಂದೆ ಅಳಲು!

Share
2 Min Read
SHARE

newsics.com | ನ್ಯೂಸಿಕ್ಸ್

Contents
ನಂಬಿಕೆಗೆ ದ್ರೋಹವಾಗಿದೆ ಎಂದ ಚಂಪತ್ ರಾಯ್ಏನಿದು ದೇಣಿಗೆ ವಿವಾದ?

ನವದೆಹಲಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಭ್ರಷ್ಟಾಚಾರದ ವಿವಾದ ಭುಗಿಲೆದ್ದ ಬೆನ್ನಲ್ಲೇ ಭಾರಿ ರಾಜಕೀಯ ಹಾಗೂ ಧಾರ್ಮಿಕ ಸ್ಥಿತ್ಯಂತರಗಳು ಶುರುವಾಗಿವೆ. ದೇವಸ್ಥಾನದ ದೇಣಿಗೆ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಅಯೋಧ್ಯೆಯಲ್ಲಿ ನನ್ನ ಸೇವೆ ಮುಗಿದಿದೆ ಎಂದು ಆಪ್ತರ ಬಳಿ ಹೇಳಿಕೊಂಡಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಂಬಿಕೆಗೆ ದ್ರೋಹವಾಗಿದೆ ಎಂದ ಚಂಪತ್ ರಾಯ್

ವಿವಾದದ ಬಳಿಕ ಸದ್ಯ ಏಕಾಂತದಲ್ಲಿರುವ ಚಂಪತ್ ರಾಯ್, ತಮ್ಮ ಆಪ್ತರೊಂದಿಗೆ ನೋವು ಹಂಚಿಕೊಂಡಿದ್ದಾರೆ. “ನನ್ನ ವಿಶ್ವಾಸಕ್ಕೆ ದ್ರೋಹ ಎಸಗಲಾಗಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ತಮಗೆ ದ್ರೋಹ ಮಾಡಿದವರು ಯಾರು ಎಂಬ ಬಗ್ಗೆ ಅವರು ಸದ್ಯಕ್ಕೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಇತ್ತೀಚೆಗಷ್ಟೇ ನೈತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಲು ಮುಂದಾಗಿದ್ದ ರಾಯ್ ಅವರ ಹೇಳಿಕೆಯನ್ನು ತನಿಖಾಧಿಕಾರಿಗಳು ಈಗಾಗಲೇ ದಾಖಲಿಸಿಕೊಂಡಿದ್ದಾರೆ.

ದೇಣಿಗೆ ಹಗರಣದ ಚರ್ಚೆಗಾಗಿ ಜುಲೈ 6 ರಂದು ರಾಮಮಂದಿರ ಟ್ರಸ್ಟ್‌ನ ಮಹತ್ವದ ಸಭೆ ಕರೆಯಲಾಗಿದೆ. ಈ ಹೈವೋಲ್ಟೇಜ್ ಸಭೆಯಲ್ಲಿ ಚಂಪತ್ ರಾಯ್ ಹಾಗೂ ಟ್ರಸ್ಟ್‌ನ ಮತ್ತೊಬ್ಬ ಪ್ರಮುಖ ಸದಸ್ಯ ಅನಿಲ್ ಮಿಶ್ರಾ ಅವರ ಭವಿಷ್ಯ ನಿರ್ಧಾರವಾಗಲಿದೆ. ಮೂರನೇ ಎರಡರಷ್ಟು ಬಹುಮತದ ಆಧಾರದ ಮೇಲೆ ಇವರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ. ಇದರೊಂದಿಗೆ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (SIT) ಶಿಫಾರಸುಗಳ ಆಧಾರದ ಮೇಲೆ ಟ್ರಸ್ಟ್ ನಿರ್ವಹಣೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತರಲು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಏನಿದು ದೇಣಿಗೆ ವಿವಾದ?

ಜೂನ್ 7 ರಂದು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ರಾಮಮಂದಿರದಲ್ಲಿ ದೇಣಿಗೆ ದುರುಪಯೋಗವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ ನಂತರ ಈ ವಿವಾದ ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ಎಸ್‌ಐಟಿ ತಂಡ ಜೂನ್ 23 ರಂದು ತನ್ನ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಜೂನ್ 25 ರಂದು ಅಧಿಕೃತ ಎಫ್‌ಐಆರ್ ದಾಖಲಾಗಿದ್ದು, ರಾಮಮಂದಿರದ ದೇಣಿಗೆ ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ 8 ಜನರನ್ನು ಪೊಲೀಸರು ಈಗಾಗಲೇ ಬಂಧಿಸಿ ಜೈಲಿಗಟ್ಟಿದ್ದಾರೆ.

 

DK Shivakumar ಸಿಎಂ ಆಗಿ ಡಿ.ಕೆ. ಶಿವಕುಮಾರ್ 1 ತಿಂಗಳು ಕಂಪ್ಲೀಟ್: ಹೇಗಿದೆ ಗೊತ್ತಾ ಡಿಕೆಶಿ ರಿಪೋರ್ಟ್ ಕಾರ್ಡ್?

TAGGED:#ayodhye #donation #ramamandir #loot #champathrai #anilmishra #SIT #news #newsics
Share This Article
Facebook Twitter Copy Link Print
Previous Article POCSO Case ಪೊಲೀಸರ ಕಣ್ಣಿಗೆ ಮಣ್ಣೆರಚಿ ಲಾಕ್‌ಅಪ್‌ನಿಂದ ಪೋಕ್ಸೊ ಆರೋಪಿ ಪರಾರಿ!
Next Article Iran ಇರಾನ್ ನಾಯಕ ಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತಂದೆಯ ಶವಸಂಸ್ಕಾರಕ್ಕೆ ಗೈರಾಗ್ತಾರಾ ಪುತ್ರ?

Popular Posts

Tragedy ಕಲ್ಲು ಕ್ವಾರಿ ದುರಂತ: 7 ಕಾರ್ಮಿಕರ ಸಾ*ವು ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್!

2 Min Read

DK Shivakumar ದೆಹಲಿ ತಲುಪಿದ ‘ಕೈ’ ನಾಯಕರ ಸಂಪುಟ ಕಸರತ್ತು: ರಾಹುಲ್ ಗಾಂಧಿ ಭೇಟಿಯಾಗಲಿರೋ ಸಿಎಂ ಡಿಕೆಶಿ; ಯಾರಿಗೆ ಸಿಗುತ್ತೆ ಮಂತ್ರಿ ಭಾಗ್ಯ?

2 Min Read

Iran ಇರಾನ್ ನಾಯಕ ಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತಂದೆಯ ಶವಸಂಸ್ಕಾರಕ್ಕೆ ಗೈರಾಗ್ತಾರಾ ಪುತ್ರ?

3 Min Read

Ram Mandir ರಾಮಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್ ಗುಡ್‌ಬೈ? ಕಳಂಕ ಹೊತ್ತು ಹುದ್ದೆಯಲ್ಲಿರಲ್ಲ ಎಂದು ಆಪ್ತರ ಮುಂದೆ ಅಳಲು!

2 Min Read

You Might Also Like

ಪ್ರಮುಖCrimeಕರ್ನಾಟಕ

POCSO Case ಪೊಲೀಸರ ಕಣ್ಣಿಗೆ ಮಣ್ಣೆರಚಿ ಲಾಕ್‌ಅಪ್‌ನಿಂದ ಪೋಕ್ಸೊ ಆರೋಪಿ ಪರಾರಿ!

1 Min Read
ಪ್ರಮುಖಕರ್ನಾಟಕ

DK Shivakumar ಸಿಎಂ ಆಗಿ ಡಿ.ಕೆ. ಶಿವಕುಮಾರ್ 1 ತಿಂಗಳು ಕಂಪ್ಲೀಟ್: ಹೇಗಿದೆ ಗೊತ್ತಾ ಡಿಕೆಶಿ ರಿಪೋರ್ಟ್ ಕಾರ್ಡ್?

3 Min Read
ಪ್ರಮುಖಆರೋಗ್ಯ

Drinking Water ಬೆಳಗ್ಗೆ ಎದ್ದ ತಕ್ಷಣ ಕಾಫಿ-ಟೀಗೆ ಗುಡ್‌ಬೈ ಹೇಳಿ: ಈ ಒಂದು ‘ಮ್ಯಾಜಿಕಲ್’ ಸೂತ್ರ ಫಾಲೋ ಮಾಡಿ!

2 Min Read
ಪ್ರಮುಖಕರ್ನಾಟಕ

Rain Alert ವರುಣನ ರೌದ್ರನರ್ತನಕ್ಕೆ ನಡುಗಿದ ಕರಾವಳಿ: ಉಡುಪಿ, ಮಂಗಳೂರು ಸೇರಿ 3 ಜಿಲ್ಲೆಗಳಿಗೆ ರೆಡ್ ಅಲರ್ಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?