newsics.com
ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಬೀದಿಯಲ್ಲಿ ನಿಂತು ಕತ್ತೆ ಹಾಲು ಕರೆದು ಅಲ್ಲಿಯೇ ಜನರಿಗೆ ನೀಡುತ್ತಿರುವುದು ಕಳೆದೆರಡು ದಿನಗಳಿಂದ ಸಾಮಾನ್ಯವಾಗಿದೆ.
ನಗರದ ಹೌಸಿಂಗ್ ಬೋಡ್, ಕೋಟೆ ಬಡಾವಣೆ ಸುತ್ತಮುತ್ತ ಗುಡಿಸಲು ಹಾಕಿಕೊಂಡು 40ಕ್ಕೂ ಹೆಚ್ಚು ಕತ್ತೆಗಳೊಂದಿಗೆ ಸುಮಾರು 15 ಮಂದಿ ತಂಡವೊಂದು ಬೀಡು ಬಿಟ್ಟಿದೆ.
ನಿತ್ಯ ಬೆಳಗ್ಗೆ ವಿವಿಧ ಬಡಾವಣೆಗಳಿಗೆ ತೆರಳಿ, ಕತ್ತೆ ಹಾಲು ಎಂದು ಕೂಗುತ್ತಾ ಮಾರಾಟ ಮಾಡುತ್ತಿದೆ. ಅದ್ರಲ್ಲೂ ಮುಖ್ಯವಾಗಿ ಮಕ್ಕಳಿಗೆ ಮೂರು ದಿನಗಳ ಕಾಲ ಇದನ್ನು ಕುಡಿಸಿದ್ರೆ ಕೆಮ್ಮು, ನೆಗಡಿ ಗುಣವಾಗಲಿದೆ. ಅಲ್ಲದೆ ಜೀರ್ಣಶಕ್ತಿ ವೃದ್ಧಿಸಲಿದೆ ಎಂದು ತಮಿಳುನಾಡಿನ ಈ ತಂಡ ಪ್ರಚಾರ ಮಾಡುತ್ತಿದೆ.
ಸಾವಿರಾರು ಹಣ ಸಂಪಾದಿಸುತ್ತಿದ್ದು ಭರ್ಜರಿಯಾಗಿ ಕತ್ತೆ ಹಾಲು ವ್ಯಾಪಾರ ಮಾಡುತ್ತಿದೆ.ಒಂದು ಲೋಳ್ಳೆ ಕತ್ತೆ ಹಾಲುಗೆ 50 ರೂನಂತೆ ಮಾರಾಟವನ್ನು ಮಾಡುತ್ತಿದ್ದಾರೆ.