newsics.com | ನ್ಯೂಸಿಕ್ಸ್
ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ನಾಗಾರಾಧನೆಯ ಸುಪ್ರಸಿದ್ಧ ಕ್ಷೇತ್ರ ದಕ್ಷಿಣ ಭಾರತದ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭಾನುವಾರ 50,000 ಗಿಂತಲೂ ಹೆಚ್ಚು ಭಕ್ತರು ಆಗಮಿಸಿ, ದರ್ಶನ ಪಡೆದರು.
ಶುಕ್ರವಾರ ಮೋಹರಂ, ಶನಿವಾರ ನಾಲ್ಕನೇ ಶನಿವಾರ ಹಾಗೂ ಭಾನುವಾರವೂ ರಜೆ ಹಿನ್ನೆಲೆ ಸರ್ಕಾರಿ ಕಚೇರಿಗಳು, ಇನ್ನಿತರ ಸಂಘಗಳ ಸಂಸ್ಥೆಗಳ ನೌಕರರಿಗೆ ಸರಣಿ ರಜೆ ಲಭ್ಯವಾಗಿತ್ತು. ಇದರಿಂದ ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಸೇವೆ ಮಾಡುತ್ತಾ ಶುಕ್ರವಾರದಿಂದಲೇ ಕುಕ್ಕೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರ ಆಗಮನವಾಗಿತ್ತು.
ಶುಕ್ರವಾರ ಹಾಗೂ ಶನಿವಾರದಿಂದಲೇ ದೇವಳದ ಎಲ್ಲ ವಸತಿಗೃಹಗಳು ತುಂಬಿದ್ದು, ಖಾಸಗಿ ವಸತಿ ಗ್ರಹಗಳಲ್ಲಿ ಕೂಡ ಭಕ್ತರು ಕಾದರಿಸಿದ್ದರು. ರಾತ್ರಿ ವಾಸ್ತವ್ಯಕ್ಕಾಗಿ ಕೊಠಡಿಗಳು ಭರ್ತಿಯಾಗಿ ಅದೆಷ್ಟೋ ಭಕ್ತರು ತಂಗುವಿಕೆಗಾಗಿ ಕೊಠಡಿ ಇಲ್ಲದೆ ಶ್ರೀ ದೇವಳದ ರಥ ಬೀದಿ ಸಭಾಂಗಣದಲ್ಲಿ ಹಾಗೂ ಶ್ರೀ ದೇವಳದ ಛತ್ರಗಳಲ್ಲಿ ಆಶ್ರಯವನ್ನು ಪಡೆದಿದ್ದು ಕಂಡುಬಂದಿದೆ.
ಇತ್ತ ಶ್ರೀ ದೇವಳದ ಸುತ್ತಮುತ್ತ ಹಾಗೂ ಆದಿಸುಬ್ರಹ್ಮಣ್ಯ ಸುತ್ತಮುತ್ತ ಇರುವ ಪಾರ್ಕಿಂಗ್ ಪ್ರದೇಶಗಳೆಲ್ಲವೂ ವಾಹನಗಳಿಂದ ಭರ್ತಿಯಾಗಿದ್ದು, ಮಾರ್ಗದ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ದೃಶ್ಯ ಕಂಡುಬಂದಿದೆ. ಶನಿವಾರ ಹಾಗೂ ಭಾನುವಾರ ಮುಂಜಾನೆಯಿಂದಲೇ ಕುಮಾರಧಾರ ಸ್ನಾನಗಟ್ಟದಲ್ಲಿ ಭಕ್ತರು ತೀರ್ಥ ಸ್ನಾನ ಮಾಡಿ ದೇವಳದ ಹೊರಾಂಗಣದಿಂದಲೇ ಸರತಿ ಸಾಲಿನಲ್ಲಿ ಬಂದು ಶ್ರೀ ದೇವರ ದರ್ಶನ ಮಾಡಿದ್ದರು. ತದನಂತರ ತೀರ್ಥ ಪ್ರಸಾದ ಸ್ವೀಕರಿಸಿದರು.
ಕುಕ್ಕೆಯಲ್ಲಿ ಶನಿವಾರ ಮತ್ತು ಭಾನುವಾರ ಮುಂಜಾನೆಯಿಂದಲೇ ಅತ್ಯಧಿಕ ಭಕ್ತರು ಆಗಮಿಸಿದ್ದು, ಬೆಳಗ್ಗೆ ಉಪಹಾರ 8 ಗಂಟೆಯಿಂದ 10 ಗಂಟೆವರೆಗೆ ನಿರಂತರವಾಗಿ ನಡೆದು ತದನಂತರ 10:30 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ನಿರಂತರವಾಗಿ ಅನ್ನದಾನ ಸೇವೆ ಜರುಗಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರತಿದಿನ ಭಕ್ತರು ಹರಿದು ಬರುವುದರಿಂದ ರಾಜ್ಯದಲ್ಲಿ ಅಧಿಕ ಆದಾಯ ಗಳಿಸುವ ದೇವಾಲಯವಾಗಿದೆ. 2025-26ನೇ ಆರ್ಥಿಕ ವರ್ಷದಲ್ಲಿ ದೇವಳವು ದಾಖಲೆಯ 167.89 ಕೋಟಿ ರೂ. ಆದಾಯ ಗಳಿಸಿ ರಾಜ್ಯದ ಮುಜರಾಯಿ ಇಲಾಖೆಯ ಅಧೀನದ ದೇವಸ್ಥಾನಗಳಲ್ಲಿ ಸತತ 15ನೇ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡಿದೆ.
Tapanda -Vaishakh ವೈಶಾಖ್ ಸಾವು ಮನರಂಜನೆಯಾಗದಿರಲಿ… ದುಃಖಿಸಲಾದರೂ ಸಮಯ ಕೊಡಿ… ನಟಿ ಕೃಷಿ ತಾಪಂಡ ಭಾವುಕ ಪೋಸ್ಟ್