Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿ ಸಾವು, ಸಹೋದರಿ ಆಸ್ಪತ್ರೆಗೆ ದಾಖಲು
ಕರ್ನಾಟಕಪ್ರಮುಖ

ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿ ಸಾವು, ಸಹೋದರಿ ಆಸ್ಪತ್ರೆಗೆ ದಾಖಲು

Share
1 Min Read
SHARE

newsics.com

ಶಿರಸಿ(ಉತ್ತರ ಕನ್ನಡ): ವಿಷಪೂರಿತ ಹಾವು ಕಚ್ಚಿ ಆರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ಮೃತಪಟ್ಟು, ಆತನ ಸಹೋದರಿ ತೀವ್ರವಾಗಿ ಅಸ್ವಸ್ಥಗೊಂಡ ಘಟನೆ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಳ್ಳಿಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.

ಸಹಸ್ರಳ್ಳಿಯ ನಿವಾಸಿ ಪುಟ್ಟಪ್ಪ ನಾಯ್ಕ ಎಂಬುವರ ಪುತ್ರ ಮಿಥುನ್ (12) ಹಾವು ಕಡಿತಕ್ಕೆ ಜೀವ ಕಳೆದುಕೊಂಡ ಬಾಲಕ. ಈತನ ತಂಗಿ ದೀಕ್ಷಾ ಪುಟ್ಟಪ್ಪ ನಾಯ್ಕ (9) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಂಗಳವಾರ ತಡರಾತ್ರಿ ಮಿಥುನ್ ಹಾಗೂ ದೀಕ್ಷಾ ತಂದೆಯೊಂದಿಗೆ ಮಲಗಿದ್ದರು. ಬೆಳಗಿನ ಜಾವ ಇಬ್ಬರೂ ಮಕ್ಕಳು ದಿಢೀರ್ ಎದ್ದು ವಾಂತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಇದರಿಂದ ಗಾಬರಿಯಾದ ಪಾಲಕರು ಗಮನಿಸಿದಾಗ ಮಕ್ಕಳು ಅಸ್ವಸ್ಥರಾಗಿರುವುದು ಕಂಡುಬಂದಿದೆ. ತಕ್ಷಣವೇ ಪಾಲಕರು ಅಕ್ಕಪಕ್ಕದವರನ್ನು ಕರೆದಿದ್ದಾರೆ. ಈ ಸಂದರ್ಭದಲ್ಲಿ ಹಾವೊಂದು ಮನೆಯೊಳಗಿಂದ ಕತ್ತಲಲ್ಲಿ ಹೊರಬರುತ್ತಿದ್ದುದನ್ನು ಗಮನಿಸಿದ್ದಾರೆ.

ತಕ್ಷಣವೇ ಇಬ್ಬರನ್ನೂ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ದೀಕ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.

ವಿಷಪೂರಿತ ಹಾವು ಮಿಥುನ್‌ನ ಕಿವಿ ಹಾಗೂ ದೀಕ್ಷಾಳ ಕೈ ಬೆರಳಿಗೆ ಕಚ್ಚಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಬನವಾಸಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

 

ಸೆಲ್ಫಿ ಹುಚ್ಚು: ಕಾವೇರಿ ನದಿಯಲ್ಲಿ ಮುಳುಗಿ ಐವರ ಸಾವು

TAGGED:sister hospitalizedSixth grader dies after being bitten by snake
Share This Article
Facebook Twitter Copy Link Print
Previous Article ಸೆಲ್ಫಿ ಹುಚ್ಚು: ಕಾವೇರಿ ನದಿಯಲ್ಲಿ ಮುಳುಗಿ ಐವರ ಸಾವು

Popular Posts

ಹಾವು ಕಚ್ಚಿ ಆರನೇ ತರಗತಿ ವಿದ್ಯಾರ್ಥಿ ಸಾವು, ಸಹೋದರಿ ಆಸ್ಪತ್ರೆಗೆ ದಾಖಲು

1 Min Read

ಸೆಲ್ಫಿ ಹುಚ್ಚು: ಕಾವೇರಿ ನದಿಯಲ್ಲಿ ಮುಳುಗಿ ಐವರ ಸಾವು

1 Min Read

ಹಿಂಡಾಲ್ಕೋ ಕಾರ್ಮಿಕ ಆತ್ಮಹತ್ಯೆ: ಜನರಿಂದ ಕಲ್ಲು ತೂರಾಟ, ಬೆಳಗಾವಿ ಉದ್ವಿಗ್ನ

2 Min Read

ಅಣ್ಣನ ಸ್ಥಾನದಲ್ಲಿ ನಿಂತ ಕ್ಯಾಬ್ ಚಾಲಕ; ಇಬ್ಬರು ಮಕ್ಕಳಿಗೆ ಧೈರ್ಯ ತುಂಬಿದ ವಿಡಿಯೊ ವೈರಲ್

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆಲೈಫ್‌ಸ್ಟೈಲ್ವೈರಲ್

ಕರ್ನಾಟಕದಲ್ಲೇ ಅಲ್ಲ, ದೇಶದಲ್ಲಿ ಇವೆ ಎರಡು ಮಂಗಳೂರು! ವೈರಲ್ ಆಯ್ತು ಕುತೂಹಲಕರ ಮಾಹಿತಿ

1 Min Read
ಈ ದಿನಪ್ರಮುಖಲೈಫ್‌ಸ್ಟೈಲ್ವೈರಲ್

ಮಡಿಲಲ್ಲಿ ಕಾಗೆಯನ್ನು ಮಲಗಿಸಿ ಮುದ್ದಾಡಿದ ಮಹಿಳೆ; ವೈರಲ್ ವಿಡಿಯೊಗೆ ನೆಟ್ಟಿಗರು ಫಿದಾ

1 Min Read
filmCrimeಪ್ರಮುಖ

60 ಸಾಕ್ಷಿಗಳ ವಿಚಾರಣೆಗೂ ಆಕ್ಷೇಪ! ದರ್ಶನ್ ಸಲ್ಲಿಸಿದ ಹೊಸ ಮನವಿಯಲ್ಲಿ ಏನಿದೆ?

1 Min Read
Crimeದೇಶಪ್ರಮುಖ

ಪುಣೆ ಉದ್ಯಮಿ ಕೇತನ ಅಗರವಾಲ್ ಸಾವಿಗೆ ಶಾಕಿಂಗ್ ಟ್ವಿಸ್ಟ್! ನವೆಂಬರ್‌ನಲ್ಲಿ ಮದುವೆಯಾಗಬೇಕಿದ್ದ ಯುವಕನ ಸಾವಿನ ಪ್ರಕರಣ ಈಗ ಕೊಲೆ ತನಿಖೆಯಾಗಿ ಬದಲಾಗಿದೆ.

1 Min Read

Social Networks

Facebook-f Instagram Twitter
Welcome Back!

Sign in to your account

Lost your password?