ಗ್ಯಾಸ್ ಸಿಲಿಂಡರ್ ಸೋರಿಕೆ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ನಮ್ಮ ಒಂದು ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಆದ್ದರಿಂದ ಸಿಲಿಂಡರ್ ಲೀಕ್ ಆದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು.
ಭಾರತ ಸರ್ಕಾರ ಲೋಕಸಭೆಗೆ ನೀಡಿರುವ ಮಾಹಿತಿಯ ಪ್ರಕಾರ, ಎಲ್‌ಪಿಜಿ (LPG) ಸೋರಿಕೆ ಹಾಗೂ ಸಿಲಿಂಡರ್ ಸ್ಫೋಟಗಳಿಂದ ಪ್ರತಿ ವರ್ಷ ಸರಾಸರಿ 850 ರಿಂದ 1,000 ಅಪಘಾತಗಳು ಸಂಭವಿಸುತ್ತಿವೆ. ಈ ಘಟನೆಗಳ ಹಿಂದೆ ಹೆಚ್ಚಿನ ಸಂದರ್ಭಗಳಲ್ಲಿ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ.
- ಗ್ಯಾಸ್ ಲೀಕ್ ಆದಾಗ ತಕ್ಷಣ ಮಾಡಬೇಕಾದ ಕೆಲಸಗಳು
✅ ಗ್ಯಾಸ್ ರೆಗ್ಯುಲೇಟರ್ ಅನ್ನು ತಕ್ಷಣ ಆಫ್ ಮಾಡಿ.
✅ ಮನೆಯ ಎಲ್ಲಾ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.
✅ ಅನಿಲ ಹೊರಹೋಗಲು ಸಾಕಷ್ಟು ಗಾಳಿ ಹರಿಯುವಂತೆ ಮಾಡಿ.
✅ ಸುರಕ್ಷಿತ ಸ್ಥಳಕ್ಕೆ ತೆರಳಿ ಗ್ಯಾಸ್ ಏಜೆನ್ಸಿ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ.
- ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
❌ ಲೈಟ್, ಫ್ಯಾನ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸ್ವಿಚ್ ಆನ್ ಅಥವಾ ಆಫ್ ಮಾಡಬೇಡಿ.
❌ ಬೆಂಕಿಕಡ್ಡಿ, ಲೈಟರ್ ಅಥವಾ ಕಿಡಿ ಉಂಟುಮಾಡುವ ಯಾವುದೇ ವಸ್ತುವನ್ನು ಬಳಸಬೇಡಿ.
❌ ಅನಿಲ ಹೊರಹೋಗಲಿ ಎಂದು ಫ್ಯಾನ್ ಹಚ್ಚಬೇಡಿ.
❌ ಗ್ಯಾಸ್ ಲೀಕ್ ಇದೆಯೇ ಎಂದು ಪರೀಕ್ಷಿಸಲು ಸ್ಟೌವ್ ಹಚ್ಚುವ ಪ್ರಯತ್ನ ಮಾಡಬೇಡಿ.
❌ ಸಾಧ್ಯವಾದಷ್ಟು ಮೊಬೈಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಸಾಧನಗಳ ಬಳಕೆಯನ್ನು ತಪ್ಪಿಸಿ.
ಗ್ಯಾಸ್ ಸೋರಿಕೆ ಕಂಡುಬಂದಾಗ ಗಾಬರಿಯಾಗದೆ, ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಮುಖ್ಯ. ನಿಮ್ಮ ಒಂದು ಎಚ್ಚರಿಕೆ ಜೀವ ಹಾಗೂ ಆಸ್ತಿಯನ್ನು ರಕ್ಷಿಸಬಹುದು.